ಮಂತ್ರಾಲಯದಲ್ಲಿ ರವಿವಾರದಿಂದ ಆರಂಭವಾದ ರಾಯರ ಆರಾಧನೆಯಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
ತಮ್ಮ ಭೇಟಿಯನ್ನು ರದ್ದು ಪಡಿಸಿದ್ದಾರೆ.
ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯ ವಿರುದ್ಧ ಅರ್ಜಿ ಸಲ್ಲಿಕೆ, ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯುತ್ತಿರು ಕಾರಣದಿಂದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂತ್ರಾಲಯದ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅವರು ಹೋದ ವಾರದ ಮಾಧ್ಯಮಗೋಷ್ಠಿಯಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಶ್ರೀಮಠಕ್ಕೆ ಆಗಸ್ಟ್ 19ರಂದು ಆಗಮಿಸುತ್ತಿದ್ದಾರೆ ಎಂದ ಹೇಳಿದ್ದರು.