ಚಿತ್ರದುರ್ಗ:
ಚಿತ್ರದುರ್ಗಕಾರ್ಯಕ್ರಮದಲ್ಲಿ ಮಾತನಾಡುತ್ತ, ” ಶತಮಾನಗಳ ಕಾಲ ಗುಲಾಮಗಿರಿ ಇದ್ದುದರಿಂದ ತಳ ಸಮುದಾಯಗಳು ಹಿಂದೆ ಉಳಿದವು. ಈಗಲೂ ಶಿಕ್ಷಣದ ಕೊರತೆಯಿಂದ ಆ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ,” ಎಂದು ಹೇಳಿದರು.
ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ-ವಡ್ಡರ ಅಭಿವೃದ್ಧಿ ನಿಗಮವಾಗಿ ಮರುನಾಮಕರಣ ಮತ್ತು ಸಿದ್ಧರಾಮೇಶ್ವರ ಅಧ್ಯಯನ ಪೀಠ ಸ್ಥಾಪನೆ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಇಳಕಲ್ ಮಠದ ಪೂಜ್ಯ ಶ್ರೀ ಮಹಂತ ಸ್ವಾಮೀಜಿಗಳು, ಕುಂಚಟಿಗ ಗುರುಪಿಠದ ಪೂಜ್ಯಶ್ರೀ ಶಾಂತವೀರ ಶ್ರೀಗಳು, ಕನಕ ಶ್ರೀಗಳು, ಪಂಚಮಸಾಲಿ ಶ್ರೀಗಳು, ವಾಲ್ಮೀಕಿ ಶ್ರೀಗಳು ಸೇರಿದಂತೆ ಅನೇಕ ಗುರುಪೀಠ ಶ್ರೀಗಳ ದಿವ್ಯಾಸಾನಿಧ್ಯದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ರಾಜಕಾರಣಿಗಳು ಭಾಗವಹಿಸಿದ್ದರು.