ಸೊಲ್ಲಾಪುರ:
ಇಲ್ಲಿನ ಪ್ರಸಿದ್ಧ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಸಿದ್ಧರಾಮೇಶ್ವರರ ಭಕ್ತ ಮಂಡಳಿಯಿಂದ ಇಂದು ಪ್ರಥಮ ಸಿದ್ಧರಾಮೇಶ್ವರರ ಶರಣ ಸಂಗಮ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರಾದ ರಾಜಶ್ರೀ ಥಳಂಗೆ ಬಸವ ಮೀಡಿಯಾಕ್ಕೆ ತಿಳಿಸಿದರು.
ಇಂದು ಸಂಜೆ 4ರಿಂದ 6 ವರೆಗೆ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರ ನೇತೃತ್ವ ಮತ್ತು ಸಾವಿರಾರು ಶರಣ ಶರಣೆಯರ ಸಮ್ಮುಖದಲ್ಲಿ ಶರಣ ವಂದನೆ ಮತ್ತು ಸಿದ್ಧರಾಮೇಶ್ವರರ ವಚನ ಪಠಣ ಹಾಗೂ ಬಸವತತ್ವ ಚಿಂತನೆ ಕಾರ್ಯಕ್ರಮ ಜರುಗಲಿದೆ.
ಶಿವಯೋಗದಲ್ಲಿ ಬಲ್ಲಿದನಾಗಿ ಶರಣಧರ್ಮಕ್ಕೆ ರಕ್ಷಕನಾಗಿ ನಿಂತ ಸಿದ್ಧರಾಮೇಶ್ವರ ತತ್ವ ಸಂದೇಶವನ್ನು ಸಾರುವುದೇ ಈ ಕಾರ್ಯಕ್ರಮದ ಉದ್ಧೇಶವಾಗಿದೆ ಎಂದರು.
ಕಾರ್ಯಕ್ರಮದ ವಿಶೇಷ: ಒಂದು ಸಾವಿರ ಶರಣೆಯರು ಬಿಳಿ ಸೀರೆ ಮತ್ತು ಶರಣರು ಬಿಳಿ ವಸ್ತ್ರ ತೊಟ್ಟು ಏಕಕಾಲದಲ್ಲಿ ಶರಣ ವಂದನೆ ಸಲ್ಲಿಸಲಿದ್ದಾರೆ ಎಂದು ಸಿದ್ಧರಾಮೇಶ್ವರರ ಶರಣ ಸಂಗಮ ಉತ್ಸವ ಸಮಿತಿ ತಿಳಿಸಿದೆ.
