ಬೀದರ:
ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿಯವರು, ಹುಮನಾಬಾದ ತಾಲ್ಲೂಕಿನ ಸಿಂಧನಕೇರಾ ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷರಾಗಿ ಸಂಗೀತ ಕಾಡಾದಿ ಅವರನ್ನು ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಪೂಜ್ಯರು, ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿಯವರ ಸಂಕಲ್ಪದಂತೆ ನಾಡಿನಾದ್ಯಂತ 770 ಪ್ರವಚನಗಳ ಅಭಿಯಾನ ಹಮ್ಮಿಕೊಂಡು ಬಸವತತ್ವ ಪ್ರಸಾರ ಮಾಡಲಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ತಲೆಮೇಲೆ ವಚನ ಸಾಹಿತ್ಯದ ಗ್ರಂಥ ಹೊತ್ತು ವಚನ ವಿಜಯೋತ್ಸವದ ಮೆರವಣಿಗೆ ಮಾಡುತ್ತಾ, ಯುವಕರಿಗಾಗಿ ಲಿಂಗಾಯತ ಸೇವಾದಳ, ಮಹಿಳೆಯರಿಗಾಗಿ ನೀಲಮ್ಮನ ಬಳಗ ಹುಟ್ಟುಹಾಕಿ ಸದೃಢ ಸಮಾಜ ನಿರ್ಮಾಣ ಮಾಡುವುದೇ ಗುರಿಯಾಗಿದೆ ಎಂದು ತಿಳಿಸಿದರು.
ಸಂಗೀತಾ ಕಾಡಾದಿಯವರು ಬಸವನಿಷ್ಠರು, ಸಂಘಟನಾ ಚತುರರು ಎಲ್ಲರನ್ನೂ ಒಗ್ಗೂಡಿಸಿಕೊಂಡು ನಡೆಯುವ ಕಳಕಳಿಯುಳ್ಳವರು. ನೀಲಮ್ಮನ ಬಳಗದ ಅಧ್ಯಕ್ಷರಾಗಿ ಬಸವಕಾರ್ಯ ಭರದಿಂದ ಮಾಡಲಿ ಎಂದು ತಿಳಿಸಿದರು.
ನೀಲಮ್ಮನ ಬಳಗದ ಸದಸ್ಯರಾಗಿ ವೈಶಾಲಿ ಕುಂಬಾರ, ಶಶಿಕಲಾ ತಡಪಟ್ಟಿ, ಕಾಶಿಬಾಯಿ ಕಾಡಾದಿ, ಸುನೀತಾ ಕಾಡಾದಿ, ಸಂಗೀತಾ ಹಡಪದ, ಗೌರಮ್ಮ ಹಡಪದ, ಶಶಿಕಲಾ ಕಾಡಾದಿ, ಕಮಲಾಬಾಯಿ ಕಾಡಾದಿ, ಮಲ್ಲಮ್ಮ ತೌದಿ, ಸುವರ್ಣ ಕಾಡಾದಿ, ರೇಣುಕಾ ಹಡಪದ, ಗಂಗಮ್ಮ ಹಡಪದ, ಕಾಶಮ್ಮ ಕಳ್ಳಿಮನಿ, ಸಂಪಾವತಿ ಹಡಪದ, ವಿಜಯಲಕ್ಷ್ಮಿ ಹಡಪದ, ಪ್ರಭಾವತಿ ಹಡಪದ ಆಯ್ಕೆಗೊಂಡಿದ್ದಾರೆ.
