ಸಿರುಗುಪ್ಪ
ಯದ್ದಲದೊಡ್ಡ ಸುವರ್ಣಗಿರಿ ವಿರಕ್ತಮಠದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ, ಸಿಂಧನೂರಿನ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ, ನಡೆಯುತ್ತಿರುವ ತಿಂಗಳ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮವು ಮಾರ್ಚ್ 11 ಬಳ್ಳಾರಿ ಜಿಲ್ಲಾ, ಸಿರುಗುಪ್ಪ ತಾಲೂಕ, ಹೊನ್ನರಹಳ್ಳಿ ಗ್ರಾಮದಲ್ಲಿ ನಡೆಯಿತು.

ಶಶಿಧರ ಸಿರಿಗೇರಿ ಅವರು ಇಷ್ಟಲಿಂಗ ಪ್ರಾತ್ಯಕ್ಷಿತೆ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪೂಜ್ಯ ನಿರಂಜನ ದೇವರು ಮೈಸೂರು ಇವರು ಉಪಸ್ಥಿತರಿದ್ದರು. ಶರಣರಿಂದ ಅನುಭಾವ ಕೂಡ ನಡೆಯಿತು.
ಸಿಂಧನೂರು ಬಸವ ಕೇಂದ್ರದ ಅಧ್ಯಕ್ಷ ಕರೆಗೌಡ ಪೊಲೀಸಪಾಟೀಲ, ಬಸವ ಚಾರಿಟೇಬಲ್ ಅಧ್ಯಕ್ಷ ಮುದ್ದನಗೌಡ ಪಾಟೀಲ, ಚಂದ್ರೇಗೌಡ ಹರೇಟನೂರ, ಮಲ್ಲಿಕಾರ್ಜುನ ಹೊಗರಣಾಳ, ಚಾಂದಸಾಬ, ಅಂಬರೀಶ ಗುರಿಕಾರ ಮತ್ತಿತರರು ಉಪಸ್ಥಿತರಿದ್ದರು.

