ಜಗಳೂರು
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಬಸವ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಬಸವ ಬಳಗ, ತರಳಬಾಳು ಯುವಕ ಸಂಘಗಳ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಯಂತಿ ನಡೆಯಿತು. ಬಸವಣ್ಣನವರ ಭಾವಚಿತ್ರ ಮತ್ತು ಬಸವಣ್ಣನವರ ಪ್ರತಿಮೆಯನ್ನು ಟ್ರ್ಯಾಕ್ಟರ್ ಮೇಲೆ ಕೂಡ್ರಿಸಿ, ಶೃಂಗರಿಸಿ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಶರಣರಾದ ಗೌಡ್ರು ಪ್ರದೀಪ, ಹಳೆಮನೆ ನಾಗರಾಜ, ಬೆಣ್ಣೆರ್ ಗೋವಿಂದಪ್ಪ, ದೊಡ್ಡಮನೆ ಭರತ್, ಮೊಲೆಮನೆ ಮಲ್ಲೇಶ್, ಬಸವ ಬಳಗದ ಹಾಗೂ ತರಳಬಾಳು ಯುವಕ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಎಲ್ಲರಿಗೂ ಲಿಂಬು ಶರಬತ್ತು ವ್ಯವಸ್ಥೆ ಮಾಡಲಾಗಿತ್ತು.