ಸೊಲ್ಲಾಪುರ
ಕಲಬುರಗಿಯ ಸದ್ಗುರು ಕಲಾ ಸಂಸ್ಥೆಯವರು ಅರ್ಪಿಸಿರುವ ವೈರಾಗ್ಯನಿಧಿ ಅಕ್ಕಮಹಾದೇವಿ ವಿರಚಿತ ‘ಅಕ್ಕನ ಯೋಗಾಂಗ ತ್ರಿವಿಧಿ’ ಎಂಬ ಧ್ವನಿ ಸುರುಳಿ ಸಿದ್ಧರಾಮೇಶ್ವರ ಭಕ್ತ ಮಂಡಳ ಹಾಗೂ ಶಂಕರಲಿಂಗ ಮಹಿಳಾ ಮಂಡಳ ವತಿಯಿಂದ ಶನಿವಾರ ನಗರದ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ಈ ಧ್ವನಿಸುರುಳಿ ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿ ಮತ್ತು ಸಂಗೀತ ಕಲಾವಿದೆ ವಿಜಯಲಕ್ಷ್ಮಿ ಎಸ್. ಕೆಂಗನಾಳ ಅವರ ಗಾಯನ ಒಳಗೊಂಡಿದೆ. ನಿರೂಪಣೆಯನ್ನು ಬಸವತತ್ವ ನಿಷ್ಠರಾದ ಶಿವಲಿಂಗಪ್ಪ ಎಂ. ಕೆಂಗನಾಳ ಮಾಡಿದ್ದಾರೆ. ಸಂಗೀತ ಸಂಯೋಜನೆಯನ್ನು ವಿಜಯಪುರದ ಶಿವಾನಂದ ಭಜಂತ್ರಿ ಅವರು ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಶರಣೆ ರಾಜಶ್ರೀ ಥಳಂಗೆ ಹಾಗೂ ಸಿಂಧೂ ತಾಯಿ ಕಾಡಾದಿ ಮಾತನಾಡಿದರು.
ಶರಣರಾದ ಮೀನಾಕ್ಷಿ ಬಾಗಲಕೋಟೆ, ಸವಿತಾ ಹಲಗುರೆ, ಮೀನಾಕ್ಷಿ ಥಳಂಗೆ, ರಂಜಿತಾ ಚಾಕೋಟೆ, ಮಾಧವಿ ಧರಣೆ, ಶಶಿಕಲಾ ರಾಂಪುರೆ, ರೇಣುಕಾ ಬಾಗಲಕೋಟೆ, ಶರಣರಾದ ಮಲ್ಲಿನಾಥ ಥಳಂಗೆ, ರವಿ ಸೊಲ್ಲಾಪುರ ಮತ್ತಿತರರು ಉಪಸ್ಥಿತರಿದ್ದರು.
