ಸೊಲ್ಲಾಪುರ
ಲಿಂಗಾಯತ ಧರ್ಮದ ಕುರಿತು ಸೊಲ್ಲಾಪುರದ ಹತ್ತುರೆ ವಸತಿಯಲ್ಲಿ ಒಂದು ದಿನದ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಸಿದ್ಧವ್ವಬಾಯಿ ಹತ್ತುರೆ ಸಾಂಸ್ಕೃತಿಕ ಸಭಾಭವನದಲ್ಲಿ ನಡೆಯಲಿರುವ ಶಿಬಿರದಲ್ಲಿ ಇತಿಹಾಸ, ತತ್ವ-ಸಿದ್ಧಾಂತ, ಸಂಘಟನೆ ಮತ್ತು ಮಹಾತ್ಮ ಬಸವಣ್ಣನವರ ಕುರಿತು ಚಿಂತನೆ ನಡೆಯಲಿದೆ.
ಸೆ.೨೦ ರಂದು ಬೆಳಿಗ್ಗೆ ೯.೩೦ಕ್ಕೆ ಆಳಂದ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಸಾಗರ ಸಿಮೇಂಟ್ನ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ವ್ಯವಸ್ಥಾಪಕ, ಎಮ್.ಕೆ. ಫೌಂಡೇಶನ್ ಸಂಸ್ಥಾಪಕ ಮಹಾದೇವ ಕೋಗನೂರೆಯವರ ಅಧ್ಯಕ್ಷತೆಯಲ್ಲಿ, ಪ್ರಥಮ ದರ್ಜೆಯ ಸರಕಾರಿ ಗುತ್ತಿಗೆದಾರ ಪರಮಾನಂದ ಅಲಗೊಂಡ ಮತ್ತು ಸೊಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಸಂಚಾಲಕಿ ಇಂದುಮತಿ ಅಲಗೊಂಡರು ಶಿಬಿರ ಉದ್ಘಾಟಿಸುವರು.
ವಿಜಯಪುರದ ಶರಣ ಸಾಹಿತಿ, ಹಿರಿಯ ಚಿಂತಕ ಡಾ. ಜೆ.ಎಸ್.ಪಾಟೀಲ, ಮರಾಠಿಯ ಲಾತೂರದ ಡಾ. ಭೀಮರಾವ ಪಾಟೀಲ, ಪತ್ರಕರ್ತ ಚನ್ನವೀರ ಭದ್ರೇಶ್ವರಮಠರು ಲಿಂಗಾಯತ ಧರ್ಮ ಇತಿಹಾಸ, ತತ್ವ-ಸಿದ್ಧಾಂತ ಮತ್ತು ಸಂಘಟನೆ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರು ಕುರಿತು ಉಪನ್ಯಾಸ ನೀಡುವರು.
ಜಾಲಿಮ ಕಲಬುರಗಿ ಅಧ್ಯಕ್ಷ, ಮಹಾರಾಷ್ಟ್ರ ರಾಜ್ಯ ಪ್ರಭಾರಿ ಪ್ರಭುಲಿಂಗ ಮಹಾಗಾಂವಕರ, ರಾಜ್ಯ ಅಧ್ಯಕ್ಷ ರಾಜಶೇಖರ ತಂಬಾಕೆ, ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ, ಬಸವಕೇಂದ್ರದ ಸಿಂಧೂತಾಯಿ ಕಾಡಾದಿ, ಅಕ್ಕಲಕೋಟದ ಮಲ್ಲಿಕಾರ್ಜುನ ಪಾಟೀಲ, ದ. ಸೊಲ್ಲಾಪುರದ ಅಮರ ಪಾಟೀಲ, ಸರಕಾರಿ ಗುತ್ತಿಗೆದಾರ ರೇವಣಸಿದ್ಧ ಬಿಜ್ಜರಗಿ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜನ ಮುಲಗೆ ಮುಖ್ಯ ಅತಿಥಿಗಳಾಗಿರುವರು.
ಸೊಲ್ಲಾಪುರ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮಗೆ, ಯುವ ಘಟಕದ ಅಧ್ಯಕ್ಷ ಬಸವರಾಜ ದಿಂಡೂರೆ, ಸೊಲ್ಲಾಪುರ ನಗರದ ಅಧ್ಯಕ್ಷ ರಾಜೇಂದ್ರ ಖಸಗಿ ಸುದ್ಧಿಗೋಷ್ಠಿಯಲ್ಲಿದ್ದರು.
ಸೊಲ್ಲಾಪುರ ಜಿಲ್ಲೆಯ ಲಿಂಗಾಯತ ಬಾಂಧವರು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ.