ದೂರದ ಚಾಮರಾಜನಗರ, ಸೊಲ್ಲಾಪುರಗಳಲ್ಲಿ ಈ ತಿಂಗಳು ಲಿಂಗಾಯತ ಧರ್ಮದ ನಿಜಾಚರಣೆ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ

ಸೊಲ್ಲಾಪುರ/ಚಾಮರಾಜನಗರ

ದಕ್ಷಿಣ ಭಾರತದ ಎರಡು ತುದಿಗಳಂತಿರುವ ಸೊಲ್ಲಾಪುರ ಮತ್ತು ಚಾಮರಾಜನಗರಗಳಲ್ಲಿ ಈ ತಿಂಗಳು ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆ ಕಮ್ಮಟಗಳು ನಡೆಯಲಿವೆ.

ಸೊಲ್ಲಾಪುರದಲ್ಲಿ ನಾಲ್ಕು ದಿನಗಳ ಕಾರ್ಯಕ್ರಮ

ಡಿಸೆಂಬರ್ 27 ರಿಂದ 30ರ ವರೆಗೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆ ಕಮ್ಮಟ ನಡೆಯಲಿದೆ.

ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ಬಸವ ಬಳಗ ದಾವಣಗೆರೆ ಆಯೋಜಿಸಿರುವ ಕಾರ್ಯಕ್ರಮ ನಗರದ ಲಿಂಗಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ನಡೆಯಲಿದೆ.

ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವ ಸೆಂಟರ, ಬಸವ ಬ್ರಿಗೇಡ್, ಅಖಿಲ ಭಾರತೀಯ ಯುವ ಮಂಚ, ಕಿರೀಟೇಶ್ವರ ಮಠ (ಕುಂಬಾರ ವೇಸ್ ), ವೀರಶೈವ ವಿಜನ್, ಶ್ರೀ ಬಸವೇಶ್ವರ ಸರ್ಕಲ್ ಪರಿವಾರ ಮಹಾಕಾಲ ಪ್ರತಿಷ್ಠಾನ, ಸಿದ್ದರಾಮೇಶ್ವರ ಭಕ್ತ ಮಂಡಳ, ಡ್ರೀಮ್ ಫೌಂಡೇಶನ್, ಲಿಂಗಾಯತ ಅಸೋಸಿಯೇಷನ್, ಮಹಾತ್ಮ ಬಸವೇಶ್ವರ ಜನ್ಮೋತ್ಸವ ಮಧ್ಯವರ್ತಿ ಮಹಾಮಂಡಳ ಸೋಲಾಪುರದ ಎಲ್ಲಾ ಬಸವಭಕ್ತರು ಹಾಗೂ ಬಸವಪರ ಸಂಘಟನೆಗಳು ಸೋಲಾಪುರ ಇವುಗಳ ಸಹಕಾರದೊಂದಿಗೆ ಕಮ್ಮಟ ನಡೆಯುತ್ತಿದ್ದು, ಸರ್ವ ಶರಣರಿಗೆ ಸ್ವಾಗತ ಕೋರಲಾಗಿದೆ.

ಚಾಮರಾಜನಗರದಲ್ಲಿ ಎರಡು ದಿನಗಳ ಕಾರ್ಯಕ್ರಮ

ಚಾಮರಾಜನಗರದಲ್ಲಿ ಇದೇ ಡಿಸೆಂಬರ್ 14 ಹಾಗೂ 15 ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆ ಕಮ್ಮಟ ನಡೆಯಲಿದೆ.

ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಅನುಭಾವಿಗಳಾದ ಪಿ. ರುದ್ರಪ್ಪ, ಎಂ.ಎಂ. ಸಂಗೊಳ್ಳಿ, ಎಂ.ಎಂ. ಮಡಿವಾಳರ, ಎಸ್.ಎನ್. ಅರಭಾವಿ, ರೇಣುಕಯ್ಯ ಹಾಗೂ ಸಿದ್ದಲಿಂಗ ನಾಶಿ ಅವರು
ನಡೆಸಿಕೊಡಲಿದ್ದಾರೆ.

ಡಿಸೆಂಬರ್ 14

ಶರಣರ ದೃಷ್ಟಿಯಲ್ಲಿ ದೇವರ ಸ್ವರೂಪ ಮತ್ತು ಆರಾಧನಾಮಾರ್ಗ , ಅಷ್ಟಾವರಣಗಳಲ್ಲಿನ ಪರಶಿವನ ಅಷ್ಟಮುಖಗಳು ಮತ್ತು ಆಷ್ಟಾವರಣಗಳು, ಆಚರಣೆಗಳ ಮಹತ್ವ ಮತ್ತು ಸಂಸ್ಕಾರದ ವಚನಗಳು, ಗುರುಪ್ರವೇಶದ ಆಚರಣೆ, ಅಷ್ಟಾವರಣಗಳ ವಿವೇಚನೆ, ಸೃಷ್ಟಿ ಕರ್ತನ ಪಂಚಕೃತ್ಯಗಳನ್ನು ಮೀರುವ ಭಕ್ತನ ಆಚರಣೆಗಳ ಪಂಚಾಚಾರಗಳು , ಗರ್ಭ ಸಂಸ್ಕಾರ ಮತ್ತು ನಾಮಕರಣ, ಶಂಕುಸ್ಥಾಪನೆ ಮತ್ತು ಇತರೆ ಆಚರಣೆಗಳು, ಲಿಂಗಾಯತ ಧರ್ಮವು ಇತರೆ ಧರ್ಮಗಳಿಗಿಂತ ಹೇಗೆ ಭಿನ್ನವಾಗಿದೆ, ಲಿಂಗಾಯತ ಧರ್ಮದ ಇತಿಹಾಸ.

ಡಿಸೆಂಬರ್ 15

ಅಷ್ಟಾವರಣ ಮತ್ತು ಪಂಚಾಚಾರ ನಿರ್ವಹಣೆ ಶಿವನ ಒಡಲು ಸೇರುವ ಮೆಟ್ಟಿಲುಗಳೇ ಷಟ್ ಸ್ಥಲಗಳು ಭಕ್ತ ಮಹೇಶ, ಪ್ರಸಾದಿ, ಪ್ರಾಣಲಿಂಗಿ ಶರಣ ಐಕ್ಯ, ಲಿಂಗಧಾರಣದ ಕ್ರಮಗಳು, ಕಲ್ಯಾಣ ಮಹೋತ್ಸವದ ಕುರಿತು ಚಿಂತನೆ, ಕಲ್ಯಾಣ ಮಹೋತ್ಸವದ ಕಾರ್ಯವಿಧಾನ, ಅಂತ್ಯ ಸಂಸ್ಕಾರ ಮತ್ತು ಸ್ಮರಣೋತ್ಸವ, ಲಿಂಗಾಯತ ಧರ್ಮದ ಸಂಘಟನೆ ಹಾಗೂ ಧರ್ಮ ಪ್ರಚಾರದ ಮಹತ್ವ ಮತ್ತು ಧರ್ಮ ಪ್ರಸಾರದ ಮಾರ್ಗೋಪಾಯಗಳು ಹಾಗೂ ಸಾಮೂಹಿಕ ಚಿಂತನ ನಡೆಯಲಿದೆ.

ಆಯೋಜಕರು ಲಿಂಗಾಯತ ಧರ್ಮದ ನಿಜಾಚರಣೆಗಳ ಕಾರ್ಯಕ್ರಮಕ್ಕೆ ಬರಬೇಕೆಂದು ಶರಣ ಬಂಧುಗಳಲ್ಲಿ ಕೋರಿದ್ದಾರೆ.

Share This Article
2 Comments
  • ಬಸವ ಪ್ರಜ್ಞೆಯ ಪ್ರಭೆಯು ವಿಶ್ವಾದ್ಯಂತ ಬೆಳಗುತ್ತಿದೆ….ಲಿಂಗಾಯತ ಧರ್ಮದ ನಿಜಾಚರಣೆಯಿಂದ ಮಾನಸಿಕ ನೆಮ್ಮದಿ, ಸಂತೋಷ.,ಆರ್ಥಿಕ ,ಆರೋಗ್ಯ ,ಶೈಕ್ಷಣಿಕ ಅಭಿವೃದ್ಧಿಯ ಸಾಧ್ಯ..ಇಂತಹ ಕಾರ್ಯಕ್ರಮ ಆಯೋಜಕರಿಗೆ ಶರಣು

Leave a Reply

Your email address will not be published. Required fields are marked *