ಸೊರಬ
ಸೊರಬ ತಾಲೂಕಿನ ಗೌರಿಹಳ್ಳ ಗ್ರಾಮದಲ್ಲಿ ವಾರ್ಷಿಕ ಶರಣ ಸಂಗಮ ಕಾರ್ಯಕ್ರಮ ಶುಕ್ರವಾರ ಅರ್ಥಪೂರ್ಣವಾಗಿ ಜರುಗಿತು.
ಹಿರಿಯ ಶರಣಜೀವ ಲಿಂಗಪ್ಪಗೌಡ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಜಿಲ್ಲೆಯ ವಿವಿಧ ಭಾಗಗಳಿಂದ 1500ಕ್ಕೂ ಹೆಚ್ಚು ಭಕ್ತರು, ಸುಮಾರು 20ಕ್ಕೂ ಹೆಚ್ಚು ಪೂಜ್ಯರು ಸಮಾವೇಶ ಗೊಂಡಿದ್ದರು.
ಷಟಸ್ಥಲ ಧ್ವಜರೋಹಣವನ್ನು ಶರಣ ಲಿಂಗಪ್ಪ ಗೌಡರು ನೆರವೇರಿಸಿದರು. ಬೈಲಹೊಂಗಲದ ಶರಣ ಶಿವಾನಂದ ಅರಭಾವಿ ಅವರು ಶರಣತತ್ವ ಸಾಧಕರು ರಚಿಸಿ ಬಿಟ್ಟುಹೋದ “ಉದ್ಧರಣ ಸಾಹಿತ್ಯ”ದ ಬಗ್ಗೆ ವಿಷದವಾಗಿ ವಿವರಣೆ ನೀಡಿದರು. ಈ ಸಾಹಿತ್ಯದ ಬಗ್ಗೆ ಅಧ್ಯಯನ ಆಗಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದರು.
ಸಿಂಧನೂರಿನ ಅನುಭಾವಿ ಪಿ. ರುದ್ರಪ್ಪ ಅವರು ಮಾತನಾಡಿ, ಶರಣ ಸಂಸ್ಕೃತಿಯಲ್ಲಿ ದೇವರ ಸ್ವರೂಪ, ಸೃಷ್ಟಿಯ ನೆಲೆ, ಮಾನವ ಜೀವಿಯ ಬದುಕಿನ ಗುರಿ ಏನು ಎನ್ನುವ ವಿಷಯಗಳನ್ನು ವಿವರಣೆ ನೀಡಿದರು. ನಿಜವಾಗಿ ಶರಣರು ಕೊಟ್ಟ ಮಾರ್ಗವನ್ನು ಶುದ್ಧವಾಗಿ ಅರಿತರೆ ಧರ್ಮ ಧರ್ಮಗಳ ಮಧ್ಯೆ ಬಿರುಕು ಇರುವುದಿಲ್ಲ. ಇದನ್ನ ಅರಿತ ವಿವಿಧ ಧರ್ಮಗಳ ಸಾಧಕರು ಅನುಭವ ಮಂಟಪಕ್ಕೆ ಬಂದು ಶರಣ ಮಾರ್ಗವನ್ನು ಸೇರಿ ಬದುಕಿನ ಆಧ್ಯಾಂತಿಕ ಸ್ಥಿತಿಯನ್ನು ತಲುಪಿದರು ಎಂದು ತಿಳಿಸಿದರು. ವೇದಿಕೆ ಮೇಲೆ ಇದ್ದ ವಿರಕ್ತಸ್ವಾಮಿಗಳು ಮತ್ತು ಗುರುವರ್ಗದ ಸ್ವಾಮಿಗಳು ಎಲ್ಲರೂ ಸತ್ಯದ ವಿಚಾರಗಳನ್ನು ಒಪ್ಪಿ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಶರಣ ಸಿದ್ಧಲಿಂಗೇಶ ನಾಸಿಯವರು ಮಾತನಾಡಿ, ತನ್ನೊಳಗೆ ದೇವ ಸ್ವರೂಪವನ್ನು ಕಾಣುವ ಶಿವಯೋಗದ ಮಹಿಮೆಯನ್ನು ಅರ್ಥವತ್ತಾಗಿ ವಿವರಿಸಿದರು.
ನೆರೆದ ಸರ್ವರೂ ಗದ್ದಲವಿಲ್ಲದೆ ಕಾರ್ಯಕ್ರಮ ಕೇಳಿ ಆನಂದಿಸಿದ್ದು ವಿಶೇಷವಾಗಿತ್ತು.