‘ಶ್ರೀ ರಾಮಸೇನೆಯಿಂದ ತೋಂಟದಾರ್ಯ ಮಠದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ’

ಬಸವ ಮೀಡಿಯಾ
ಬಸವ ಮೀಡಿಯಾ

ಭಾವೈಕ್ಯತೆಯ ಕೇಂದ್ರವಾದ ತೋಂಟದಾರ್ಯ ಮಠದ ವಿರುದ್ಧ ಅವಹೇಳಕಾರಿ ನಡೆ ನುಡಿ ವಿರೋಧಿಸಿ ಶೀಮಠದ ಭಕ್ತರ ಸುದ್ದಿಗೋಷ್ಠಿ

ಗದಗ

ತೋಂಟದಾರ್ಯ ಮಠದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಅಪಪ್ರಚಾರ ಮಾಡುತ್ತಿರುವ ಶ್ರೀರಾಮ ಸೇನೆಯ ಪ್ರಮುಖ ರಾಜು ಖಾನಪ್ಪನವರ ನಡೆಯನ್ನು ಶ್ರೀಮಠದ ಭಕ್ತರು ಖಂಡಿಸಿದ್ದಾರೆ.

ಜಾತ್ರಾ ಮಹೋತ್ಸವ, ಮಠದ ಹಿಂದಿನ ಹಾಗೂ ಇಂದಿನ ಪೂಜ್ಯರ ಮತ್ತು ಶ್ರೀಮಠದ ಪರಂಪರೆಯ ವಿರುದ್ಧ ನಡೆಯುತ್ತಿರುವ ನಿರಂತರ ನಿಂದನೆಯಿಂದ ಶ್ರೀ ಮಠದ ಭಕ್ತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮತ್ತು ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ತೋಂಟದಾರ್ಯ ಮಠದಲ್ಲಿಯೇ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ ಮಾತನಾಡಿ ನಗರದಲ್ಲಿ ನೂರಾರು ವರ್ಷಗಳಿಂದ ಜಗದ್ಗುರು ತೋಂಟದಾರ್ಯ ಮಠದ ರಥೋತ್ಸವ ಸಾಗಿ ಬಂದಿದೆ.

ರಥೋತ್ಸವದ ಮಾರನೆ ದಿನದಿಂದ ೪೦ ದಿನಗಳವರೆಗೆ ಮಾತ್ರ ಮಠದ ಮಾಲಿಕತ್ವದ ತೇರಿನ ರಸ್ತೆಯ ಆಜುಬಾಜು ಮಕ್ಕಳ ಮನರಂಜನೆಯ ಆಟದ ಸಾಮಗ್ರಿಗಳನ್ನು ಹಾಗೂ ಬಡವರಿಗೆ ಕಡಿಮೆ ದರದಲ್ಲಿ ಗೃಹಬಳಕೆಯ ವಸ್ತುಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಮಳಿಗೆಗಳನ್ನು ಹಾಕುವ ಸಲುವಾಗಿ ಗುತ್ತಿಗೆ ಕೊಡುತ್ತಾ ಬರಲಾಗಿದೆ. ವರ್ಷದಲ್ಲಿ ಉಳಿದ ೩೨೫ ದಿನ ಸಾರ್ವಜನಿಕರು ಈ ರಸ್ತೆಯನ್ನು ಉಪಯೋಗಿಸುತ್ತಿದ್ದಾರೆ. ಅಲ್ಲಿ ಕೆಲವು ಮಂದಿ ತಳ್ಳುವ ಗಾಡಿಗಳನ್ನು ಹಚ್ಚಿರುತ್ತಾರೆ. ಅವರಿಂದ ನಾವು ಮಠಕ್ಕೆ ೧ ರೂಪಾಯಿ ಭಾಡಿಗೆಯನ್ನು ಸಹಿತ ಪಡೆಯುವುದಿಲ್ಲ. ಶ್ರೀಮಠವು ಯಾವಾಗಲೂ ಕಾನೂನು ಪ್ರಕಾರ ನಡೆದುಕೊಂಡು ಬಂದಿದೆ. ಕಾನೂನುಬಾಹಿರವಾಗಿ ಎಂದೂ ನಡೆದುಕೊಂಡಿಲ್ಲ.

ಹಿಂದೂ ವೀರಶೈವ, ಲಿಂಗಾಯತ ವೇದಿಕೆ ಅಧ್ಯಕ್ಷನೆಂದು ಸ್ವಯಂ ಕರೆಯಿಸಿಕೊಳ್ಳುವ ಶ್ರೀರಾಮ ಸೇನೆ ಪ್ರಮುಖ ರಾಜು ಖಾನಪ್ಪನವರ ಇವರು ಇತ್ತೀಚಿನ ೨-೩ ವರ್ಷಗಳಲ್ಲಿ ಅನಗತ್ಯವಾಗಿ ಈ ತೇರಿನ ರಸ್ತೆಯನ್ನು ಅನ್ಯಧರ್ಮಿಯರಿಗೆ ಕೊಡಲಾಗುವುದೆಂದು ಅಪಪ್ರಚಾರ ಮಾಡುತ್ತಿದ್ದಾರೆ.

ನಮ್ಮ ಮಠ ಸರ್ವಜನಾಂಗದ ಶಾಂತಿಯ ತೋಟ. ಭಾವೈಕ್ಯತೆಯ ಕೇಂದ್ರ. ಆ ಕಾರಣಕ್ಕಾಗಿ ಭಾರತ ಸರಕಾರದ ಅಂದಿನ ಪ್ರಧಾನಮಂತ್ರಿ ಅಟಲ್‌ಬಿಹಾರಿ ವಾಜಪೇಯಿ ಅವರು ಹಾಗೂ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪೂಜ್ಯರಿಗೆ ೨೦೦೩ ರಲ್ಲಿ ಭಾವೈಕ್ಯತೆ ಹಾಗೂ ದೇಶದ ಏಕತಾ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಾಂಗ್ರೇಸ್ ಪಕ್ಷ, ಬಿಜೆಪಿ ಪಕ್ಷ, ಜೆಡಿಎಸ್. ಪಕ್ಷದ ಮುಖಂಡರು ಪಕ್ಷಾತೀತವಾಗಿ ಹಾಗೂ ಸರ್ವಧರ್ಮದ ಮುಖಂಡರೂ ಕೂಡಿಕೊಂಡು ದಿನಾಂಕ : ೧೩-೦೫-೨೦೨೫ ರಂದು ಮನವಿಯನ್ನು ಸಲ್ಲಿಸಿದ್ದಾರೆ. ಅದಾದ ನಂತರ ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮಠದ ವಿರುದ್ಧ ಅಪಪ್ರಚಾರ ಮಾಡಬೇಕೆನ್ನುವ ಈ ವ್ಯಕ್ತಿಯನ್ನು ಹಾಗೂ ನಮ್ಮ ಜಾತ್ರಾ ಸಮಿತಿಯ ಪದಾಧಿಕಾರಿಗಳನ್ನು ಮತ್ತು ಮಠದ ಭಕ್ತರನ್ನು ಕರೆಯಿಸಿ ಅವರಿಗೆ ತಿಳುವಳಿಕೆ ಹೇಳಿದ್ದಾರೆ.

ಸಭೆಯಲ್ಲಿ ನಗರಸಭೆಯ ಅಧಿಕಾರಿಗಳು ಈ ಜಾಗೆಯು ಮಠದ ಒಡೆತನಕ್ಕೆ ಸೇರಿದ್ದೆಂದು ಹೇಳಿದರೆ – ನಾನು ಯಾವುದೇ ಹೋರಾಟ ಮಾಡುವುದಿಲ್ಲ ಎಂದು ಹೇಳಿದ್ದನು. ಸಭೆ ಮುಗಿದ ಮಾರನೆಯ ದಿನ ಇನ್ನು ಮುಂದೆ ಕಾನೂನು ಹೋರಾಟ ಮಾತ್ರ ಮಾಡುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾನೆ.

ಈಗ ಆ ಕಾನೂನು ಹೋರಾಟ ಮಾಡುವುದನ್ನು ಬಿಟ್ಟು ಸಾರ್ವಜನಿಕರಿಗೆ, ಮಠದ ಭಕ್ತರಿಗೆ ಅಭಿಮಾನಿಗಳಿಗೆ ತೊಂದರೆ ಕೊಡುವ ಸಲುವಾಗಿ ಪ್ರತಿ ೨-೩ ದಿನಗಳಿಗೊಮ್ಮೆ ಪತ್ರಿಕಾಗೋಷ್ಠಿ ಮಾಡುವುದು. ಖಾಸಗಿ ಚಾನೆಲ್‌ಗಳಲ್ಲಿ ಸಂದರ್ಶನ ಮಾಡಿ ೨೬-೦೫-೨೦೨೫ ರಂದು ಗದಗ ಬಂದ್ ಮಾಡುವುದಾಗಿ ಕರೆ ನೀಡಿರುತ್ತಾನೆ. ಅಲ್ಲದೆ ಮಠದ ಮಹಾಸ್ವಾಮಿಗಳಿಗೆ ಪತ್ರಿಕಾಗೋಷ್ಟಿಯಲ್ಲಿ ಮತ್ತು ಸ್ಥಾನಿಕ ಟಿ.ವಿ. ಸಂದರ್ಶನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದರಿಂದ ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮತ್ತು ಅವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಗದಗ ನಗರದಲ್ಲಿ ಅನಗತ್ಯವಾಗಿ ಕಾನೂನು ಮತ್ತು ಜನರ ನೆಮ್ಮದಿಯನ್ನು ಖಾನಪ್ಪನವರ ಹಾಳು ಮಾಡುತ್ತಿರುವನು.

ಕಾರಣ ಇಂಥ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಈಗಾಗಲೇ ಜಿಲ್ಲಾಡಳಿತಕ್ಕೆ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ, ನಗರಸಭೆ ಅಧ್ಯಕ್ಷರಾದ ಕೃಷ್ಣಾ ಪರಾಪೂರ, ಜಿಲ್ಲಾ ಗ್ಯಾರಂಟಿ ಸಮೀತಿಯ ಅಧ್ಯಕ್ಷರಾದ ಬಿ. ಬಿ ಅಸೂಟಿ, ಜಾತ್ರಾ ಸಮೀತಿಯ ಉಪಾಧ್ಯಕ್ಷರಾದ ಡಿ. ಜಿ ಜೋಗಣ್ಣವರ, ಹುಬ್ಬಳ್ಳಿ ಚೇಂಬರ ಆಫ್ ಕಾಮರ್ಸ ಅಧ್ಯಕ್ಷರಾದ ಪಿ.ಎಸ್. ಸಂಶಿಮಠ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡರ, ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಸದಸ್ಯರಾದ ವಿನಾಯಕ ಮಾನ್ವಿ, ಮಾಜಿ ನಗರಸಭೆ ಅಧ್ಯಕ್ಷರಾದ ಶಿವಣ್ಣ ಮುಳಗುಂದ, ರಾಮಣ್ಣ ಫಲದೊಡ್ಡಿ, ಯಂಗ್ ಇಂಡಿಯಾ ಸಂಘಟನೆ ಮುಖ್ಯಸ್ಥರಾದ ವಿ.ಆರ್. ಗೋವಿಂದಗೌಡ್ರ, ಕೆ.ಎಚ್ ಬೇಲೂರ, ಎಸ್. ಎನ್. ಬಳ್ಳಾರಿ, ಜಾಗತಿಕ ಲಿಂಗಾಯತ ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಕೆ. ಎಸ್. ಚೆಟ್ಟಿ, ಸದಾಶಿವಯ್ಯ ಮದರಿಮಠ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ರಾಜು ಗುಡಿಮನಿ,
ಮುಂತಾದವರು ಜಿಲ್ಲಾಧಿಕಾರಿಗಳವರಿಗೆ ಮತ್ತು ಪೋಲಿಸ್ ವರಿಷ್ಠಾಧಿಕಾರಿಗಳವರಿಗೆ ಮನವಿಯನ್ನು ಕೊಟ್ಟಿದ್ದು ಅದೆ.

ಅವನು ಮಠದ ಬಗ್ಗೆ ಗದ್ದುಗೆ ಬಗ್ಗೆ ಶ್ರೀಗಳ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾನೆ. ೨೬-೦೫-೨೦೨೫ ರಂದು ಅವನ ಬಂದ್ ಕರೆಗೆ ಅವಕಾಶ ಕೊಡಬಾರದು ಮತ್ತು ಮಠದಲ್ಲಿ ಮತ್ತು ಮಠದ ಮುಂಭಾಗದಲ್ಲಿ ಯಾವುದೇ ರೀತಿ ಗಲಾಟೆ ಆಗದಂತೆ ಕ್ರಮ ಕೈಗೊಳ್ಳುವಂತೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ನಗರಸಭೆ ಅಧ್ಯಕ್ಷರಾದ ಕೃಷ್ಣಾ ಪರಾಪೂರ, ನಗರಸಭೆ ಸದಸ್ಯರಾದ ಚಂದ್ರು ತಡಸದ, ಜಾತ್ರಾ ಸಮೀತಿಯ ಉಪಾಧ್ಯಕ್ಷರಾದ ಡಿ. ಜಿ ಜೋಗಣ್ಣವರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡರ, ಕೆ.ಎಚ್. ಬೇಲೂರ, ಮಾರ್ತಾಂಡಪ್ಪ ಹಾದಿಮನಿ, ಶ್ರೀ ಮಠದ ವ್ಯವಸ್ಥಾಪಕ ಎಂ.ಎಸ್ ಅಂಗಡಿ, ಗುರುಬಸವ ತಡಸದ, ಮಲ್ಲಿಕಾರ್ಜುನ ಐಲಿ ಇಂಜಿನೀಯರ, ವಿದ್ಯಾಧರ ದೊಡಮನಿ, ದಾನಯ್ಯ ಗಣಾಚಾರಿ, ಪ್ರಕಾಶ ಅಸುಂಡಿ, ಶೇಖಣ್ಣ ಕವಳಿಕಾಯಿ, ಜಯ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ಮುರುಗೇಶ ಬಡ್ನಿ, ಎಸ್.ಎಸ್. ಪಟ್ಟಣಶೆಟ್ಟರ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ರಾಮಣ್ಣ ಫಲದೊಡ್ಡಿ, ಎಸ್. ಎಸ್. ಕಳಸಾಪೂರಶೆಟ್ಟರ, ಆನಂದ ಸಿಂಗಾಡೆ, ಶರೀಫ ಬಿಳೆಯಲಿ, ಚನ್ನಯ್ಯ ಹಿರೇಮಠ, ವೀರಣ್ಣ ಜ್ಯೋತಿ, ಬಸವರಾಜ ಹಡಗಲಿ, ಅಶೋಕ ಬರಗುಂಡಿ, ರಮೇಶ ರಾಠೋಡ, ಐ.ಬಿ ಬೆನಕೊಪ್ಪ, ಎಸ್.ಎಸ್ ಭಜಂತ್ರಿ ಸೇರಿದಂತೆ ಶ್ರೀಮಠದ ಅನೇಕ ಭಕ್ತರು ಆಗ್ರಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
5 Comments
  • Indirectly Sanghis are behind this social unrest. They want to convert Gadag to similar that of Dakhina Kannada. We should not allow these communal elements to raise there heads in Gadag, Dharwad and other districts.

  • ದುರಂತವೆಂದರೆ ಮನುವ್ಯಾದಿ ಸಂಘಟನೆಯಲ್ಲಿ ಕಸಗೂಡಿಸುವವರು ಬಹುತೇಕರು ಲಿಂಗಾಯತ ಹಣೆಪಟ್ಟಿ ಕಟ್ಟಿಕೊಂಡ ಜಾತಿವಾದಿಗಳು,, ಇವರಿಗೆಲ್ಲ ಹಿಂದೆ ನಿಂತು ಆಟ ಆಡಿಸುವವನು ಧಾರವಾಡದ ಒಬ್ಬ ರಾಜಕಾರಣಿ,,ಗದಗ ಹುಬ್ಬಳ್ಳಿ ಧಾರವಾಡದಲ್ಲಿ ಲಿಂಗಾಯತರೆಂದು ಹೇಳಿಕೊಳ್ಳುವ ನರಸತ್ತ ಲೀಡರುಗಳು,, ಇವರು ಲಿಂಗಾಯತವನ್ನು ತಮ್ಮ ವ್ಯಾಪಾರಕ್ಕೆ ಬಳಸಿಕೊಂಡು ಮನುವ್ಯಾದಿಗಳ ಪಾದಕ್ಕೆ ತಮ್ಮನ್ನು ಅರ್ಪಿಸಿಕೊಂಡು ಗುಲಾಮರಂತಾಗಿದ್ದಾರೆ

  • ಗದುಗಿನಲ್ಲೊಂದು ದುಷ್ಟ ಗುಂಪು ಇದ್ದೇ ಇದೆ. ಆದರೆ ಮಠದ ಸೌಹಾರ್ದ ನಡೆಯಿಂದ ಅವರ ಬೇಳೆ ಬೇಯುತ್ತಿಲ್ಲ. ಗದುಗಿನ ಎಲ್ಲಾ ಸಮುದಾಯದ ಜೊತೆಗೆ ಹಿಂದಿನ ಹಾಗೂ ಈಗಿನ ಶ್ರೀ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಎಲ್ಲ ಸಮುದಾಯದವರೂ ಜಾತ್ರಾ ಸಮಿತಿ ಅಧ್ಯಕ್ಷರಾಗುತ್ತಾರೆ. ಮಠ ಅಕ್ಷರಶಃ ಬಸವಣ್ಣನವರ ತತ್ಚಾದರ್ಶದಂತೆ ನಡೆಯುತ್ತಿದೆ. ಇದನ್ನ ಸಹಿಸದ ಕೊಂಡಿ ಮಂಚಣ್ಣಗಳು ಸೌಹಾರ್ದತೆ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಎಲ್ಲಾ ಲಿಂಗಾಯತರು ಮಠಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ.

  • ಇಂತಹ ಧರ್ಮಾಂಧ ಕಿಡಿಗೇಡಿಗಳನ್ನು ಎಂದಿಗೂ ಪ್ರೋತ್ಸಾಹಿಸಬಾರದು.
    ನಮ್ಮದು ಶಿವನ ಒಕ್ಕಲು.
    ನಮ್ಮ ಮಠಗಳಲ್ಲಿ ರಾಮನಿಗೇನು ಕೆಲಸ?
    ಸಲಿಗೆ ಕೊಟ್ಟರೆ ನಮ್ಮ ಮಠಗಳಲ್ಲಿಯೇ “ಜೈ ಶ್ರೀ ರಾಮ್” ಎಂದು ಕೂಗಿಸುತ್ತಾರೆ

  • ನಾಯಾಯಣನೆಂಬವನ ಕಾಣೆ
    ಗೀರಾಯಣನೆಂಬವನ ಕಾಣೆ
    ಬೊಮ್ಮನೆಂಬವನ ಕಾಣೆ
    ಗಿಮ್ಮನೆಂಬವನ ಕಾಣೆ
    ವಿಷವಟ್ಟಿ ಸುಡುವಲ್ಲಿ
    ವೀರಭದ್ರ ಬಡಿವಲ್ಲಿ
    ಕೂಡಲಸಂಗಯ್ಯಂಗೆ ಶರಣೆಂದು
    ಮೊರೆಯಿಟ್ಟರೆಲ್ಲರು.
    ..
    ಕೂಡಲಸಂಗಯ್ಯ ದೇವರಿಗೆ ದೇವನು,
    ಇವರೆಲ್ಲ ಆಳೆಂಬುದನರಿಯಿರಿಂ ಭೋ!


    ಹುಟ್ಟಿಸುವಾತ ಬ್ರಹ್ಮನೆಂಬರು
    ರಕ್ಷಿಸುವಾತ ವಿಷ್ಣುವೆಂಬರು ನೋಡಾ,
    ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ?
    ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ?
    ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ
    ನಮ್ಮ ಕೂಡಲಸಂಗಮದೇವ

Leave a Reply

Your email address will not be published. Required fields are marked *