ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ: ಪೊಲೀಸ್ ಎಚ್ಚರಿಕೆ
ಗದಗ
ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾದ ಅಂಗಡಿಗಳ ವಿರುದ್ಧ ಮೇ 26ರಂದು ಶ್ರೀ ರಾಮ ಸೇನೆ ಕರೆ ನೀಡಿರುವ ‘ಗದಗ ಬಂದ್’ಗೆ ಪೊಲೀಸರು ನಿಷೇಧ ಹೇರಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗದಗ ತಾಲೂಕು ದಂಡಾಧಿಕಾರಿಗಳು ಪ್ರತಿಬಂಧಕಾಜ್ಞೆ ಹೊರಡಿಸಿ ಆದೇಶಿಸಿರುವುದಾಗಿ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೇ 26ರಂದು ಬಂದ್‌ಗೆ ಕರೆ ನೀಡುವುದು, ಬಂದ್ ಬೆಂಬಲಿಸುವುದು ಮತ್ತು ಬಂದ್‌ಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವುದು ನಿಷೇಧಾಜ್ಞೆ ಉಲ್ಲಂಘನೆಯಾಗಿದ್ದು, ಅಪರಾಧವಾಗಿರುತ್ತದೆ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಬಂದ್ ಕರೆಯ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಅಂತಹ ಊಹಾಪೋಹಗಳಿಗೆ ಒಳಗಾಗಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಅಲ್ಲದೆ, ದಿನನಿತ್ಯದಂತೆ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಹೋಗುವಂತೆ ವಿನಂತಿಸಲಾಗಿದೆ.
ಸದಾ ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಕೋಮುವಾದಿಗಳು ಮಾಡುತ್ತಾನೆ ಇರುತ್ತಾರೆ ಈ ಹಿಂದಿನ ಜಗದ್ಗುರುಗಳಾದ ಶ್ರೀಗಳು ಕೇಂದ್ರ ಸರ್ಕಾರದಿಂದ ಭಾವೈಕ್ಯತೆಯ ಪ್ರಶಸ್ತಿಯನ್ನು ಪಡೆದು ಇಡೀ ಕರ್ನಾಟಕಕ್ಕೆ ಹೆಸರುವಾಸಿಯಾಗಿರುವಂತಹ ಈ ಮಠದ ಪರಂಪರೆ ಇದೆ ಇಂಥ ಮಠದ ಪರಂಪರೆಯ ವಿರುದ್ಧ ಧ್ವನಿ ಎತ್ತುವುದು ಸಮಂಜಸವಲ್ಲ ಇಂತಹ ವ್ಯಕ್ತಿಗಳಿಂದ ಸಮಾಜ ಎಚ್ಚೆತ್ತುಕೊಳ್ಳಬೇಕಾಗುತ್ತದೆ
ಜಿಲ್ಲಾಡಳಿತ ಶ್ರೀರಾಮ ಸೇನೆಯ ಪುಢಾರಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು, ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದೇ ಶ್ರೀರಾಮ ಸೇನೆಯು ಈ ಪುಂಡಾಡಿಕೆ ನಡೆಸುತ್ತಿದೆ, ಹಿಂದುತ್ವ ಶಕ್ತಿಗಳು ಲಿಂಗಾಯತ ಸಂಸ್ಕ್ರತಿ, ಬಸವ ತತ್ವವನ್ನು ಅನುಸರಿಸುವ ಮಠಗಳನ್ನು ಟಾರ್ಗೆಟ್ ಮಾಡುತ್ತಿವೆ ,ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು.
ಪರಿವಾರದ ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ಹಮ್ಮಿಕೊಳ್ಳುತ್ತಾರೆ. ನಿಷೇಧಿಸುವುದರ ಮೂಲಕ ಪೊಲೀಸ್ ವಿಭಾಗ ಒಳ್ಳೆಯ ಕೆಲಸ ಮಾಡಿದೆ. ಅವರನ್ನು ಬಂಧಿಸಿ ಗಡಿಪಾರು ಮಾಡುವುದು ಒಳ್ಳೆಯದು.