ಬೆಳಗಾವಿ:
ಡಿಸೆಂಬರ್ 14 ರಂದು ರವಿವಾರ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಎಸ್.ಜಿ. ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜು ಸಭಾಗೃಹದಲ್ಲಿ ರಾಜ್ಯಮಟ್ಟದ ವಧು-ವರರ ಮತ್ತು ಪಾಲಕರ ಸಮ್ಮೇಳನ ನಡೆಯಲಿದೆ.
ಮಹಾತ್ಮಾ ಬಸವೇಶ್ವರ ವಧು-ವರ ಸೂಚಕ ಕೇಂದ್ರ ಕುಪವಾಡ ಸಾಂಗ್ಲಿ , ಬೆಳಗಾವಿ ನಾಗನೂರು ರುದ್ರಾಕ್ಷಿಮಠ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕ ಸಂಯುಕ್ತವಾಗಿ ಈ ಸಮಾವೇಶ ಹಮ್ಮಿಕೊಂಡಿವೆ.
ಸಮಾವೇಶದ ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ವಹಿಸಲಿದ್ದಾರೆ. ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸಮ್ಮುಖ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಬಸವರಾಜ ರೊಟ್ಟಿ ವಹಿಸಲಿದ್ದು, ಮಹಾಸಭೆಯ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರಾಜಶೇಖರ ತಂಬಾಕೆ ಮತ್ತು ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತೂರೆ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಉಪಾಧ್ಯಕ್ಷ ಮುರುಗೇಶ ಶಿವಪೂಜಿ, ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ, ಕೋಶಾಧಿಕಾರಿ ಮುರಿಗೆಪ್ಪ ಬಾಳಿ, ಬೆಳಗಾವಿ ಮಹಾನಗರದ ಅಧ್ಯಕ್ಷ ಎಸ್.ಜಿ. ಸಿದ್ನಾಳ, ಲಿಂಗಾಯತ ಮಹಾಸಭೆಯ ಸೊಲ್ಲಾಪುರ ಜಿಲ್ಲಾಧ್ಯಕ್ಷ ಶಿವಾನಂದ ಗೋಗಾವ, ಎಸ್.ಜಿ. ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಪಟಗುಂದಿ, ಸಾಂಗ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಜಾರಾಮ್ ಪಾಟೀಲ್ ಮತ್ತು ತುಕಾರಾಮ ಮಾಳಿ ಆಗಮಿಸಲಿದ್ದಾರೆ.

ಈ ಸಮ್ಮೇಳನದಲ್ಲಿ ಭಾಗವಹಿಸುವ ವಧು- ವರರಿಗೆ 60 ರೂ. ನೋಂದಣಿ ಶುಲ್ಕ ಇರುತ್ತದೆ. ಆಸಕ್ತರು ಅಪ್ಪಾಸಾಹೇಬ ಶೆಗಾವೆ ಮೊ. 9975185511 ಮತ್ತು ಪ್ರಿಯಾಂಕ ಶೆಗಾವೆ ಮೊ. 8482802734 ಅವರನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ.
ಸಮ್ಮೇಳನದಲ್ಲಿ ಲಿಂಗಾಯತ ಸಮಾಜದ ಉಪಪಂಗಡಗಳಾದ ವಾಣಿ, ಪಂಚಮ, ಬಣಜಿಗ, ಶೀಲವಂತ, ಮಾಳಿ, ತೇಲಿ, ಕೋಷ್ಠಿ, ಕುಂಬಾರ, ಗವಳಿ, ಗುರವ, ಪರೀಟ್, ಲಿಂಗಾಯತ ಮಡಿವಾಳ ಮತ್ತು ಇತರ ಎಲ್ಲ ಒಳಪಂಗಡಗಳ ವಧು-ವರರು ಭಾಗವಹಿಸಬಹುದೆಂದು ತಿಳಿಸಲಾಗಿದೆ.

🙏🙏
ಇದೊಂದು ಅಭೂತಪೂರ್ವ ಕಾರ್ಯಕ್ರಮ🙏🙏