ಬಳ್ಳಾರಿ ವಿದ್ಯಾರ್ಥಿನಿ ನಿಲಯದಲ್ಲಿ 80 ಮಕ್ಕಳಿಗೆ ಇಷ್ಟಲಿಂಗದೀಕ್ಷೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಳ್ಳಾರಿ:

ನಗರದ ಶರಣ ಸಕ್ಕರೆ ಕರಡೀಶ ವಿದ್ಯಾರ್ಥಿನಿಯರ ಪ್ರಸಾದ ನಿಲಯ( ಮಹಾಮನೆ)ದಲ್ಲಿ 80 ಮಕ್ಕಳಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು.

ದೀಕ್ಷೆ ನೀಡಿ ಮಾತನಾಡಿದ ಶರಣ ವೆಂಕಟಾಪುರ ಬಸವರಾಜಪ್ಪ, ಬಸವಾದಿ ಪ್ರಮಥರು ಇಷ್ಟಲಿಂಗವನ್ನು ವೈಜ್ಞಾನಿಕತೆ, ವೈಚಾರಿಕತೆಯ ನೆಲೆಗಟ್ಟಿನಲ್ಲಿ ನಮಗೆ ಕೊಟ್ಟಿದ್ದಾರೆ.

ಇಲ್ಲಿಯತನಕ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿಗೆ ಆದಂತಹ ಶೋಷಣೆ, ನಿರ್ಬಂಧ, ಭಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತ, ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ ಎಂದು ಸಿದ್ಧರಾಮೇಶ್ವರರು ಹೇಳಿದ್ದಾರೆ. ಜೊತೆಗೆ ಇನ್ನಷ್ಟು ವಚನಗಳನ್ನು ಹೇಳುವುದರ ಮೂಲಕ ನಿಲಯದ ವಿದ್ಯಾಥಿ೯ನಿಯರಿಗೆ ಸ್ಥೈಯ೯ ತುಂಬಿದರು.  

ಇಷ್ಟಲಿಂಗ ಧರಿಸಿದ ಹೆಣ್ಣುಮಕ್ಕಳಿಗೆ ಸಮಾಜದ ಯಾವುದೇ ಸೂತಕಗಳು ಬಾಧಿಸುವುದಿಲ್ಲ. ಯಾವುದೇ ಮೌಢ್ಯಗಳನ್ನು ನಂಬದಿರಿ ಎಂದರು.

ಸಮಾಜದಲ್ಲಿನ ಪಂಚಸೂತಕಗಳಿಗೆಲ್ಲ ಅಂಜುವ ಅವಶ್ಯಕತೆ ಇಲ್ಲ ಹಾಗೂ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಜ್ಞಾನ ವಿಕಾಸದ ಬಗ್ಗೆ ಅರಿವನ್ನು ನೀಡಿ, ಇಷ್ಟಲಿಂಗ ಪೂಜೆ ಬಿಡದೆ ಆಚರಿಸಿಕೊಂಡು ಬಂದರೆ ಈ ಸಾಧನೆ ಮಾಡಬಹುದು ಎಂದರು.

ಎಲ್ಲ ಮಕ್ಕಳಿಗೆ ಲಿಂಗಧಾರಣೆಯನ್ನು ಮಾಡಿ ಶಿವಯೋಗ ಮಾಡುವ ಕ್ರಿಯೆಯನ್ನು ಶರಣರು ತೋರಿಸಿಕೊಟ್ಟರು.

ದಾಸೋಹಿಗಳಾಗಿ ಮಕ್ಕಳಿಗೆ ಇಷ್ಟಲಿಂಗವನ್ನು ಮತ್ತು ಲಿಂಗಚೀಲಗಳನ್ನು ದಾಸೋಹ ಮಾಡಿದ ಶರಣ ರಾಮನಗೌಡ ಮತ್ತು ಶರಣೆ ಚಂದ್ರಕಲಾ ಅಸುಂಡಿ ದಂಪತಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಚ್. ಗಾಳೇಶಪ್ಪ, ವಸತಿ ನಿಲಯ ಸಮಿತಿ ಸದಸ್ಯರಾದ ಮೃತ್ಯುಂಜಯಪ್ಪ, ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
10 Comments
  • ಕೋರಿ ಶೆಟ್ಟರ್ ಚನ್ನಬಸಪ್ಪ )ಕೆ ಎಮ್ ಪಿ ಪುಟ್ಟಸ್ವಾಮಿ ) says:

    ಓಂ ಶ್ರೀ ಗುರು ಬಸವಲಿಂಗಾಯ ನಮಃ ಇಂತಹ ಕಾರ್ಯಕ್ರಮ ಯಿಂದ ವಿದ್ಯಾರ್ಥಿಗಳಿಗೆ ಮನಸ್ಥೈರ್ಯ ಹಾಗೂ ಬಸವೇಶ್ವರ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು

  • 🙏🙏
    ಉತ್ತಮ ಕಾರ್ಯ ವಿದ್ಯಾರ್ಥಿಗಳಲ್ಲಿ ಮೌಡ್ಯ ನಿರ್ವಾರಣೆಯಾಗಿ ಮೇಲು ಕೀಳೆಂಬ ತಾರತಮ್ಯ ತೊಲಗಿ
    ಆತ್ಮವಿಶ್ವಾಸ ಮೂಡಿದರೆ ದೇಶದ ಉತ್ತಮ ಪ್ರಜೆಯಾಗಿ ಸಂಪತ್ತಾಗುತ್ತಾರೆ🙏🙏

    • ಸಮಾಜದಲ್ಲಿ ಇಂತಹ ಕಾರ್ಯಕ್ರಮ ಆಗುತ್ತಿರಬೇಕು. ಮೌಢ್ಯ ದಿಂದ ಹೊರಗಡೆ ಬಂದು ಲಕ್ಷಾಂತರ ಶರಣ ಶರಣೆಯರ ತ್ಯಾಗ ಬಲಿದಾನಗಳಿಂದ ಬಂದ ಬಸವತತ್ವ ಸಿದ್ಧಾಂತಗಳನ್ನು ಸಾರುವ ಕಾಲ ಮತ್ತು ಅನಿವಾರ್ಯತೆ ಬಂದಿದೆ…

  • ಧ್ಯರ್ಯ ತುಂಬುವ ಲಿಂಗಧಿಕ್ಸೆ ಒಳ್ಳೆ ಪಾಠ ಮಾಡಿದ ಗುರುಗಳೇ ಶರಣು ಶರಣು 👏🏻👏🏻

  • ಓಂ ಶ್ರೀ ಗುರುಬಸವ ಲಿಂಗಾಯ ನಮಃ ಈ ನಿಮ್ಮ ಕಾರ್ಯ ನಮಗೆ ದಾರಿ ದೀಪ ಮಕ್ಕಳಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿ ಆಧಾರ ಮಹತ್ವವನ್ನು ತಿಳಿಸಿದ ಎಲ್ಲಾ ಶರಣ ತಂದೆ ತಾಯಿಯರಿಗೆ ಆಗೋ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ವಿಶ್ವಗುರು ಬಸವಣ್ಣನವರು ಇಷ್ಟಾರ್ಥ ಸಿದ್ದಿ ನೆರವೇರಿಸಲಿ ಎಂದು ಸೃಷ್ಟಿಕರ್ತ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇನೆ ಶರಣು ಶರಣಾರ್ಥಿ

    • ಇಷ್ಟ ಲಿಂಗ ದೀಕ್ಷೆ ಪಡೆದ ಮಕ್ಕಳೇ ಕೆಲವು ಕಂದಾಚಾರ ಮೌಢ್ಯತೆಯ ಹಿಂದೆ ಬೀಳದೆ ನಿಮ್ಮ ಹಿರಿಯರಿಗೂ ಗೌರವದಿಂದ ಹೇಳಿ.. ಎಲ್ಲದಕ್ಕೂ ಜಾತಕ ಜೋತಿಷ್ಯ ಶಾಸ್ತ್ರ ಕೇಳಿಸುವುದನ್ನು ಅತಿಯಾಗಿ ಬಿಡುವಂತೆ ಉಪದೇಶ ಮಾಡಿ .. ಶರಣು ಶರಣಾರ್ಥಿಗಳು 🙏🙏🌺

  • ಡಿ ಅಮರೇಶ ಗವಿಗಟ್ಟ ತಾ.ಮಾನ್ವಿ.ಜಿ.ರಾಯಚೂರು 584123.9886600482 says:

    ಬಸವ ಬೆಳಗಿನ ಶರಣು ಶರಣಾರ್ಥಿಗಳು
    ವೆಂಕಟಾಪುರ ಸರಣರು ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಪ್ರಥಮವಾಗಿ ವಿದ್ಯಾರ್ಥಿಗಳಿಗೆ ತಿಳಿಸುವುದು ಬಹಳ ಒಳ್ಳೆಯ ಕೆಲಸ ಇದೇ ತರಹ ಪ್ರತಿಯೊಂದು ಗ್ರಾಮಗಳಲ್ಲಿ ತಾಲೂಕಿನ ಬಸವ ಬಳಗ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಬಸವದಾಳ ಎಲ್ಲಾ ಬಸವಪರ ಸಂಘಟನೆಗಳು ಈ ತರ ಮಾಡಿದರೆ ಶರಣರ ಚಿಂತನೆಗಳಿಗೆ ಸಾರ್ಥಕವಾಗುತ್ತದೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಮಾನಸಿಕ ಸ್ಥೈರ್ಯ ಬರುತ್ತದೆ ಇದು ತುಂಬಾ ಉಪಯುಕ್ತವಾದ ಕೆಲಸವನ್ನು ಮಾಡುವ ವೆಂಕಟಪುರ ಶರಣರಿಗೆ ಅನಂತ ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *