ಕನ್ನೇರಿ ಸ್ವಾಮಿ ಆರೋಪ ಸುಳ್ಳು, ಹೆದರಿಸುವ ಪ್ರಯತ್ನ: ತೋಂಟದ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಅಭಿಯಾನದ ಮುಂಚೂಣಿಯಲ್ಲಿರುವ ನಮ್ಮನ್ನು ಹೆದರಿಸಿ, ಹಿಂದೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಗದಗ

ಒಂದು ದೂರದರ್ಶನದ ಸಂದರ್ಶನದಲ್ಲಿ ಮಹಾರಾಷ್ಟ್ರ ಕನ್ನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ನಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ನಾವು 20 ತೊಲೆ ಬಂಗಾರ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಆರೋಪ ನಿರಾಧಾರ ಮತ್ತು ಶುದ್ಧ ಸುಳ್ಳು.

ಈ ರೀತಿಯ ಆರೋಪ ಮಾಡುವ ಮೂಲಕ ಬಸವ ಸಂಸ್ಕೃತಿ ಅಭಿಯಾನದ ಮುಂಚೂಣಿಯಲ್ಲಿರುವ ನಮ್ಮನ್ನು ಹೆದರಿಸಿ ಹಿಂದೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಮೊದಲು ನಾವು ನಮ್ಮ ಪೂರ್ವಾಶ್ರಮ ಸಂಬಂಧಿಗಳ ಯಾವುದೇ ಮದುವೆಗೆ ಹೋದ ಉದಾಹರಣೆ ಇಲ್ಲ. ಮದುವೆಯಾಗುವ ಹುಡುಗ ನಮ್ಮ ಪ್ರಸಾದ ನಿಲಯದ ವಿದ್ಯಾರ್ಥಿಯಾಗಿದ್ದವ.

ನಾವು ನಮ್ಮ ಪೂರ್ವಾಶ್ರಮ ಸಂಬಂಧಿಗಳ ಯಾವುದೇ ಮದುವೆಗೆ ಹೋದ ಉದಾಹರಣೆ ಇಲ್ಲ

ಅವನ ದಯನೀಯ ಪ್ರಾರ್ಥನೆಗೆ ಹೋಗಲೇಬೇಕಾದ ಅನಿವಾರ್ಯತೆ. ಆದಾಗ್ಯೂ ಮದುವೆಯ ದಿನ ಹೋಗದೇ ಹಿಂದಿನ ದಿನ ನಾವು ಎಲ್ಲ ಮದುವೆಗಳಿಗೆ ಹೋದಂತೆ ಹೋಗಿ ಅವನಿಗೊಂದು ಶಾಲು ಹೊದಿಸಿ ಆಶೀರ್ವದಿಸಿ ಬರಲಾಗಿದೆ. ನಾವು ಈ ಮದುವೆಯಲ್ಲಿ ಯಾವುದೇ ಬಂಗಾರ ಕೊಟ್ಟಿರುವುದಿಲ್ಲಾ. 20 ತೊಲಿ ಬಂಗಾರ ಹಾಕಿದರು ಎಂದು ಹೇಳಿರುವುದು ನಮ್ಮ ಚಾರಿತ್ರ್ಯಹನನದ ಕಾರ್ಯವಾಗಿದೆ.

ಅಭಿಯಾನದಲ್ಲಿ ಭಾಗವಹಿಸಿದ ಸ್ವಾಮಿಗಳು ದಾರು ಕುಡಿಯುತ್ತಾರೆ. ಮಾಂಸ ಭಂಜಕರಾಗಿದ್ದಾರೆ. ಕ್ರಾಪು ಬಿಟ್ಟು ಮೇಲೆ ಪೇಟಾ ಸುತ್ತುತ್ತಾರೆ ಎಂಬಂತಹ ಅವರ ಚಾರಿತ್ರ್ಯಹನನ ಮಾಡುವ ಮಾತುಗಳು ಯಾವ ಉದ್ದೇಶ ಹೊಂದಿವೆ ಎಂಬುದು ಸಾರ್ವಜನಿಕರಿಗೆ ತಿಳಿದ ವಿಷಯವಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮವಾದರೆ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗುವ ಮೂಲಕ ಸಂವಿಧಾನದತ್ತವಾದ ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ. ಇದು ಲಿಂಗಾಯತರ ಭವಿಷ್ಯದ ಹಿತದೃಷ್ಟಿಯಿಂದ ನಡೆದ ಹೋರಾಟ. ಇದರಿಂದ ದೇಶ ಹಾಳಾಗುತ್ತದೆ ಎಂದು ಹೇಳುವುದು ಸರಿಯಲ್ಲ.

ಈ ಮೊದಲು ಭಾರತೀಯರೇ ಆಗಿರುವ ಬೌದ್ಧ ಧರ್ಮೀಯರಿಗೆ, ಸಿಖ್ಖ ಧರ್ಮದವರಿಗೆ ಮತ್ತು ಇತ್ತೀಚೆಗೆ ಜೈನಧರ್ಮದವರಿಗೆ ಸ್ವತಂತ್ರ ಧರ್ಮದ ಸ್ಥಾನ ನೀಡಲಾಗಿದೆ. ಇದರಿಂದ ದೇಶದ ಭದ್ರತೆಗೆ ಯಾವ ಹಾನಿಯಾಗಿದೆ? ಅದೇ ಮಾದರಿಯಲ್ಲಿ ದೇಶಪ್ರೇಮಿಗಳಾಗಿರುವ ಲಿಂಗಾಯತರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವುದು ಲಿಂಗಾಯತ ಹೋರಾಟದ ಉದ್ದೇಶವಾಗಿದೆ.

ಇದನ್ನು ತಾತ್ವಿಕ ನೆಲೆಯಲ್ಲಿ ಅವರು ಖಂಡಿಸುವುದನ್ನು ಬಿಟ್ಟು, ಹೋರಾಟದ ಮುಂಚೂಣಿಯಲ್ಲಿರುವ ನಮ್ಮನ್ನು ಗುರಿ ಮಾಡಿಕೊಂಡು ಸುಳ್ಳು ಆರೋಪ ಹೊರಿಸುವುದು ಎಷ್ಟು ಸರಿ? ನಾವು ಅಂಥ ಕೆಲಸ ಮಾಡಿದ್ದರೆ ನಮ್ಮ ಭಕ್ತರು ಪ್ರಶ್ನಿಸುತ್ತಾರೆ. ನಮ್ಮ ಮಠದ ಆಡಳಿತ ಪಾರದರ್ಶಕವೇ ಆಗಿದೆ.

ಮಠದ ಎಲ್ಲ ವ್ಯವಹಾರಗಳನ್ನು ವ್ಯವಸ್ಥಾಪಕರು,
ವಿದ್ಯಾಸಂಸ್ಥೆಗಳ ವ್ಯವಹಾರಗಳನ್ನು ಆಡಳಿತಾಧಿಕಾರಿಗಳು
ಮಾಡಿಕೊಂಡು ಬಂದಿದ್ದಾರೆ.

ಮಠದ ಎಲ್ಲ ವ್ಯವಹಾರಗಳನ್ನು ವ್ಯವಸ್ಥಾಪಕರು, ವಿದ್ಯಾಸಂಸ್ಥೆಗಳ ವ್ಯವಹಾರಗಳನ್ನು ಆಡಳಿತಾಧಿಕಾರಿಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ನಾವು ನಮಗೆ ಬೇಕಾದವರನ್ನು ನೇಮಿಸಿಕೊಂಡು ಯಾವುದೇ ಭ್ರಷ್ಟ ವ್ಯವಹಾರ ಮಾಡಿಲ್ಲ ಎಂದು ಕನ್ನೇರಿ ಶ್ರೀಗಳಿಗೆ ಈ ಮೂಲಕ ಸ್ಪಷ್ಟಪಡಿಸುತ್ತೇವೆ.

ಅವರು ಇನ್ನು ಮೇಲಾದರೂ ಧರ್ಮಕ್ಕೆ ಧರ್ಮಾಧಿಕಾರಿಗಳಿಗೆ ಸಂಬಂಧಿಸಿದ ವಿಷಯವನ್ನು ತಾತ್ವಿಕ ನೆಲೆಯಲ್ಲಿ ಖಂಡಿಸಲಿ ಅದಕ್ಕೆ ಸ್ವಾಗತವಿದೆ. ಆದರೆ ಸುಳ್ಳು ಆರೋಪಗಳ ಮೂಲಕ ಚಾರಿತ್ರ್ಯಹನನ ಮಾಡುವ ಕೆಲಸ ಯಾರೂ ಮಾಡಬಾರದು, ಇದು ಮಠಾಧಿಪತಿಗಳಾದವರಿಗೆ ಶೋಭೆ ತರುವಂತಹದ್ದಲ್ಲ.

(ಪೂರ್ವಾಶ್ರಮದ ಸಂಬಂಧಿಗಳಿಗೆ ಗದಗ ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು 20 ತೊಲೆ ಬಂಗಾರ ನೀಡಿದ್ದಾರೆ ಎಂದು ಕನ್ನೇರಿ ಸ್ವಾಮಿ ಆರೋಪ ಮಾಡಿದ್ದಾರೆ. ಇದಕ್ಕೆ ಪೂಜ್ಯ ತೋಂಟದ ಶ್ರೀಗಳು ನೀಡಿರುವ ಪ್ರತಿಕ್ರಿಯೆ.)

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
17 Comments
  • ಆತ ತುಂಬಾ ಹೊಲಸು ಮನುಷ್ಯ ಎಷ್ಟೇ ಕಿವುಚಿದರೂ ಅಲ್ಲಿ ಹೊಲಸೇ ಬರುತ್ತೆ, ಹೊಲಸಿನಲ್ಲಿ ಕಲ್ಲು ಎಸೆದು ಮೈ ಮೇಲೆ ಸಿಡಿಸಿಕೊಳ್ಳುವುದಕ್ಕಿಂತ ಅಂತಹ ಹೊಲಸನ್ನು ಕಂಡು ಮೂಗು ಮುಚ್ಚಿಕೊಂಡು ಹೋಗುವುದೇ ಒಳ್ಳೆಯದು, ಅವನ ಕ್ರಿಯೆಗೆ ನಾವು ಪ್ರತಿಕ್ರಿಸಬೇಕೆಂಬುದೆ ಶತ್ರುಗಳ ದುರುದ್ದೇಶವಾಗಿದೆ ಅದರಲ್ಲಿ ನಾವು ನಮ್ಮ ಸಮಯವನ್ನು ಹರಣ ಮಾಡಿಕೊಳ್ಳಬೇಕು ಎನ್ನುವುದು ಅವರ ದುರುದ್ದೇಶ ಅದಕ್ಕಾಗಿ ನಾವು ಆ ಹೊಲಸನ್ನು ಮುಟ್ಟದೆ ನಮ್ಮ ಹೋರಾಟದ ಕಾರ್ಯ ನಿರಂತರವಾಗಿ ಮುಂದುವರಿಸಬೇಕೆಂದು ಎಲ್ಲಾ ಪೂಜ್ಯರಲ್ಲಿ ವಿನಂತಿ.

    • ಗುರುಗಳೇ ನಿಮ್ಮ ಮಾರ್ಗದರ್ಶನ ನಮಗೆ ಮುಖ್ಯ, ಹೊಲಸು 👅 ಯವವನ್ನು ಕಟ್ಟಿಕೊಂಡು ನಾವೇನು ಮಾಡಬಹುದು, ಗುರು ಬಸವಣ್ಣನವರು ನಮಗೆ ಧರ್ಮ ಗುರುಗಳು, ಲಿಂಗಾಯತವೇ ನಮ್ಮ ಧರ್ಮ, ನಮ್ಮ ಬಳಿ ವಜ್ರ ಇರುವಾಗ ಕಬ್ಬಿಣದ ಅವಶ್ಯಕತೆ ನಮಗೇಕೆ,ನಮಗೆ ಬಸವನ ಬೆಳಕೆ ಮುಂದಿನ ದಾರಿ .

  • ಇವನು ನಮಗೆ ಸಂಬಂಧವೇ ಇಲ್ಲದ, ಲಿಂಗಾಯತ ಕುರಹುಗಳಿಲ್ಲದವ, ಹಣೆಯ ಮೇಲೆ ವಿಭೂತಿ ಇಲ್ಲ,ಎದೆಯ ಮೇಲೆ ಲಿಂಗವಿಲ್ಲ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಇಲ್ಲ,ಇವನು ಒಂದು ಸಂಘಕ್ಕೆ ಗುರುತಿಸಿ ಕೊಂಡವರು, ಬಸವಣ್ಣನವರ ಹೆಸರನ್ನ ಹೇಳಿಕೊಂಡು, ಲಿಂಗಾಯತ ಧರ್ಮಕ್ಕೆ ಅವಹೇಳನ ಮಾಡುತ್ತಿದ್ದಾನೆ,ಇವನ ಹಿಂಬಾಲಕರು ಸಹಿತ ಹೊಲಸು ನಾರುವ ಹೊಲಸು 👅 ಬಾಯಿಯಿಂದ ಹೊಲಸು ನುಡಿಗಳೇ ಬರುತ್ತವೆ, ಇಂಥವರನ್ನು ಕಟ್ಟಿಕೊಂಡು ನಾವೇನು ಮಾಡಬಹುದು,ಆನೆ ಮುಂದೆ ನಡೆದರೆ ಬೊಗಳುವ 🐶🐕🐶 ಗಳೆಷ್ಷೋ,ಗುರು ಬಸವಣ್ಣನವರು ದಾರಿ ತೋರಿಸಿದಂತೆ ಮುಂದೆ ಸಾಗುವ, ಒಳ್ಳೆಯ ಕೆಲಸಗಳಿಗೆ ಸಾವಿರಾರು ತೊಂದರೆಗಳು ಅವನ್ನು ದಾಟಿ ಮುಂದೆ ಸಾಗಿ ಗುರಿಯನ್ನು ತಲುಪುವುದು,ಜೈ ಬಸವಣ್ಣ ಜೈ ಲಿಂಗಾಯತ.

    • ಪೂಜ್ಯರೇ, ಆ ಕಾಲ ಮೀರಿ ಹೋಗಿದೆ. ನಾವು ಸುಮ್ಮನಿದ್ದರೆ ಅದನ್ನು ನಮ್ಮ ದೌರ್ಬಲ್ಯ ಅಂದುಕೊಳ್ಳೋ ಕ್ರಿಮಿಗಳು ಇವರು. ನಮಗೆ ಕಾಲಿನಲ್ಲಿ ಹೊಸಕಿ ಹಾಕುವ ಶಕ್ತಿಯೂ ಇದೆ ಅಂತ ಗೊತ್ತಾಗಬೇಕು.

  • ಈ ಕನೇರಿ ಸ್ವಾಮಿಗೂ ಪುಡಾರಿ ರಾಜಕಾರಣಿಗೂ ಯಾವುದೇ ವ್ಯತ್ಯಾಸವಿಲ್ಲ , ಅನೇಕ ಪುಡಾರಿ ರಾಜಕಾರಣಿಗಳು ಮೂಲೆಗುಂಪು ಸೇರಿದ್ದು ಕಾಲದ ನಿರ್ಣಯ, ವೈದಿಕ ಪ್ರೇರಿತ ಮಾಧ್ಯಮಗಳು ಈಗ ಕನೇರಿ ಎದುರು ಮೈಕ್ ಹಿಡಿದ ಕೂಡಲೇ ಬಾಯಿಗೆ ಬಂದದ್ದನ್ನು ಬಡಬಡಿಸುತ್ತಿವೆ , ಈ ಸ್ವಾಮಿ ಕೆಲವೇ ದಿನಗಳಲ್ಲಿ ಮೂಲೆಗುಂಪಾಗುವುದನ್ನು ನಾವೆಲ್ಲ ಪ್ರತ್ಯಕ್ಷ ಕಾಣಲಿದ್ದೇವೆ .

    ಗದುಗಿನ ಡಾ. ತೋಂಟದ ಸಿದ್ದರಾಮ ಶ್ರೀಗಳು ಬಸವ ತತ್ವ ಪ್ರಸಾರದಲ್ಲಿ ಮುಂಚೂಣಿಯಲ್ಲಿದ್ದಾರೆ, ಹಾಗಾಗಿಯೇ ಈ ಕನೇರಿ ಈಗ ವಯ್ಯಕ್ತಿಕ ದಾಳಿ ಮಾಡಿದ್ದಾನೆ, ಬಸವ ತತ್ವ ಪ್ರಸಾರ ಮಾಡುವ ಶ್ರೀಗಳು ಮತ್ತು ಲಿಂಗಾಯತ ಮಠಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಬಸವ ಭಕ್ತರ ದೊಡ್ಡ ಪಡೆಯೇ ಬೆಂಬಲಕ್ಕೆ ಇದೆ.

  • ಲಿಂಗಾಯತ ಮಠಾಧೀಶರ ಒಕ್ಕೂಟದ ಮೇಲೆ ಬಾಯಿಗೆ ಬಂದಂತೆ ತನ್ನ ಹರಕು ಬಾಯಿಯಿಂದ ಸನಾತನಿಗಳ
    ಎಂಜಲು ಕಾಸಿನ ಗಂಜಿ ಗಿರಾಕಿ ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ ಇದನ್ನು ಖಂಡಿಸಿ ನಾಡಿನಾದ್ಯಂತ ಪ್ರತಿಭಟನೆ ಲಿಂಗಾಯತ ಧರ್ಮಿಯರು ಮಾಡುತ್ತಾ ಬಂದಿದ್ದಾರೆ ತಾವುಗಳು ತಮ್ಮ ಮೇಲಿನ
    ಮಾಡಿದ ಸುಳ್ಳು ಆರೋಪಗಳಿಗೆ ತುಳು ಬುಡವಿಲ್ಲ
    ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ
    ಧಾರ್ಮಿಕ ಮತಾಂಧ ಅನಾಗರಿಕ ಕನ್ನೇರಿ ಸ್ವಾಮೀಜಿ
    ಮೇಲೆ ಮಾನನಷ್ಟ ಮೊಕದ್ದಮೆ,, ಕ್ರಿಮಿನಲ್ ಮೊಕದ್ದಮೆ ಏಕೆ ಹಾಕುತ್ತಿಲ್ಲ? ಭಕ್ತರು ದೂರು ಕೊಟ್ಟರೆ ಪೂಲೀಸ್ ರು
    ಸ್ವೀಕರಿಸುತ್ತಿಲ್ಲ ಕಾರಣ ಅವನ ಆರೋಪ ನೇರವಾಗಿ ಲಿಂಗಾಯತ ಮಠಾಧೀಶರ ಒಕ್ಕೂಟದ ಮೇಲೆ ಇರುವುದರಿಂದ ನೀವುಗಳು ನೇರವಾಗಿ ಅರೆಹುಚ್ಚ ಅನಾಗರಿಕ ಕನ್ನೇರಿ ಸ್ವಾಮೀಜಿ ಮೇಲೆ ಕೊಡಲೇ ಮಾನನಷ್ಟ ಮೊಕದ್ದಮೆ, ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದೆ ಬೇಕು ಇದು ನಿಮ್ಮ ಕರ್ತವ್ಯವಾಗಿದೆ ಇಲ್ಲದಿದ್ದರೆ ಅವನು ಮಾಡಿದ ಆಪಾದನೆಗಳಿಗೆ ರೆಕ್ಕೆ ಪುಕ್ಕ ಬಂದು ತಪ್ಪಿಸ್ಥಲ್ಲದ
    ತಾವುಗಳು ಅಪರಾಧಿ ಸ್ಥಾನದಲ್ಲಿ ತರುವ ಪ್ರಯತ್ನ
    ಮಾಡುವದಕ್ಕೆ ಹೇಸದ ಸಂಗತಿಗಳು ಅವನ ಜೊತೆಗೆ ಇದ್ದಾರೆ. ಲಿಂಗಾಯತ ಮಠಾಧೀಶರ ಒಕ್ಕೂಟದ ನೇತ್ರುತ್ವದಲ್ಲಿ ಬಸವ ಸಂಸ್ಕೃತಿ ಅಭಿಯಾನ ನಿರೀಕ್ಷೆ ಗೂ
    ಮೀರಿ ಯಶಸ್ವಿಯಾಗಿದೆ.‌ ನಿಮ್ಮ ನಿರಂತರ ಸೇವೆ
    ಒಗ್ಗಟ್ಟು ಶರಣರ ವಚನಗಳ ಮೇಲೆ ಇದ್ದ ಬದ್ದತೆ
    ಇಂದು ಲಿಂಗಾಯತರಲ್ಲಿ ಒಂದು ಹೊಸ ಸಂಚಲನ ತಂದಿದೆ
    ಇಡಿ ಬಸವ ತತ್ವ ಲಿಂಗಾಯತ ಧರ್ಮಿಯರು, ಪ್ರಗತಿಪರ
    ಚಿಂತಕರು ಬಸವ ಪರ ಸಂಘಟನೆಗಳು ತಮ್ಮ ಜೊತೆಗೆ ಇದ್ದಾರೆ ಇಂಥ ಯಶಸ್ವಿ ಅಭಿಯಾನ ಮಾಡಿದ ಎಲ್ಲಾ ಬಸವಪರ ಸಂಘಟನೆಗಳ ಪರವಾಗಿ, ಲಿಂಗಾಯತ ಧರ್ಮದ ಧರ್ಮಿಯರ ಪರವಾಗಿ ಹ್ರೃದಯ ಪೂರ್ವಕ ಧನ್ಯವಾದಗಳು. ನಿಮ್ಮ ಗಟ್ಟಿತನ ನಮಗೆ ಸ್ಫೂರ್ತಿಯಾಗಿದೆ.

  • ಲಿಂಗಾಯತ ಧರ್ಮ ಬೋಧನೆ, ಸಂಪ್ರದಾಯ , ಪ್ರಚಾರ ಇಲ್ಲದ ಈ ವ್ಯಕ್ತಿಯನ್ನು ಲಿಂಗಾಯತ ಮಠದ ಪೀಠದಿಂದ ಕೆಳಗೆ ಇಳಿಸಬೇಕು.
    ನಾನು ಹಿಂದೂ ಧರ್ಮದ ಲಿಂಗಾಯತ ಪಂಚಮಸಾಲಿ ಅಂದಿದ್ದಕ್ಕೆ , ಲಿಂಗಾಯತ ಧರ್ಮದ ಎಲ್ಲ ಆಚರಣೆ ಮಾಡುತಿದ್ದರು ಕೆಳಗೆ ಇಳಿಸಿದ್ದಾರೆ.
    ಮಠದ ತತ್ವ, ಆಚರಣೆ ವಿರುದ್ಧ ಇರುವ ಕಾಡಸಿದ್ದ ಬೇರೆ ಮಠ ಕಟ್ಟಿಕೊಂಡು ಇರಲಿ.

    • ಬೈದವರೆನ್ನ ಬಂದುಗಳೆಂಬೆ ಎಂಬ ಬಸವಣ್ಣನವರ ವಾಣಿಯಂತೆ ಎಲ್ಲವನ್ನೂ ಸಮಚಿತ್ತದಿಂದ ನೊಡುತ್ತಾ .
      ಬಸವ ಬಳಗ ಕಾರ್ಯ ಸಾಧನೆಯಲ್ಲಿ ಯಶಸ್ಸು ಗಳಿಸಲಿ

  • ತೊಂಟದ ಸಿದ್ದರಾಮ ಶ್ರೀಗಳೆ ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ ಸತ್ಯದ ಮಾರ್ಗ ಮುಳ್ಳಿನದು ಲಿಂಗಾಯತ ಪಠಾಧಿಪತಿಗಳ ಒಕ್ಕೂಟದ ಹಿಂದೆ ಲಕ್ಷಾಂತರ ಭಕ್ತರು ಇದ್ದೆವೆ ನೀವು ಮುಂದುವರಿಯಿರಿ ನಮ್ಮ ಗುರಿ ಮುಟ್ಟುವರೆಗೂ ನಾವುಗಳು ನಿಲ್ಲಬಾರದು ನಮ್ಮ ಧರ್ಮ ಜಾಗತಿಕ ಮಟ್ಟದಲ್ಲಿ ಹೋಗಿ ನಿಲ್ಲಬೇಕು ಸತ್ಯದ ಕೂರಗಲನೆ ತೆಗೆದುಕೊಂಡು ಸದ್ ಭಕ್ತರು ಗೆದ್ದರು ಕಾಣಾ ಎಂಬ ಬಸವ ತಂದೆ ಹೇಳಿದ್ದಾರೆ ಮುಂದುವರಿರಿ ನಮ್ಮ ಗೆಲುವು ಖಂಡಿತ ಸಿಗುತ್ತದೆ

  • Though I don’t not belong to Lingat religion I firmly state and believe that Lingayat religion is originated by Anna Basavanna because it is the religion originated to oppose the set traditions and not to make any differciation among all the humans doing any profession which are equal in all respects respecting uniformly all which has the HISTORICAL BACKGROUND CAN BE GIVEN AS PROOFS. P.P. Siddharam Swamiji of Naganur Matha Present Jagadguru of Tontat Matha Gadag is the urgent followers of Anna Basavanna treating all equally etho any difference of any kind caste religion creed etc. which is the open secret. I give due respect all Swamijis and treat them as above the family persons though there may be some exceptions of a few for practices it is the natural where there is a rule exceptions are there.Now it has been the practice of some to make changes whereas they fail to give proofs because the charges being baseless many examples are before us not of the common man but most responsible.One thing we can say that we all are the sons of Bharat Mana though we have different thought s of Practices as we are born on the Holy Land Bharat.Now I conclude that the religion originated and established by Anna Basavanna is Lingayat religion which is to be treated as separate Religion.I openly agree and support Jagadguru Siddharam Swamiji of Gadag.

    • Sir basvanna never said he is lingaytha, and farm lingaytha dharama in any vachana, he is just refarmara, the vachanas and veedhas are inter connect, but veedhas in sanskruti common people cannot undurstand easly, but vachana in kannada so,,, these socala lingaytha peopel and swami s just playning dats

  • ಪೂಜ್ಯರೇ,
    ಲೋಕದ ಸ್ತುತಿ ನಿಂದೆಗಳಿಂದ ನೀವು ಅಂತರದಲ್ಲಿ ಇದ್ದೀರಿ.. ಅದನ್ನೇ ಕಾಪಾಡಿಕೊಂಡು ಬಸವ ಹಾಕಿ ಕೊಟ್ಟ ಮಾರ್ಗದಲ್ಲಿ ನಿಮ್ಮ ದಾರಿಯನ್ನ ನಾವು ತುಳಿಯುತ್ತಿದ್ದೇವ. ಅವರು ಸುಪ್ರೀ ಕೋರ್ಟ್ ಹೋದರು ಕೂಡ ಅವರಿಗೆ ಛೀಮಾರಿ ಕಟ್ಟಿಟ್ಟ ಬುತ್ತಿ.
    ಧನ್ಯವಾದಗಳು

  • ಕನ್ನೇರಿ ಸ್ವಾಮಿ ಎಲ್ಲಿದೀಯಪ್ಪ, ಬಾ ಕಾಯ್ತಾ ಇದೀವಪ್ಪ

  • ಪೂಜ್ಯರಲ್ಲಿ ನನ್ನದೊಂದು ವಿನಂತಿ, ಲಿಂಗಾಯತ ಮಠಾಧಿಶರ ಒಕ್ಕೂಟ ಮಾಡುತ್ತಿರುವ ಪ್ಯತಿಯೊಂದು ಸಾಮಾಜಿಕ ಕಾರ್ಯಕ್ರಮಗಳು ಸದುದ್ದೇಶದಿಂದ ಕೂಡಿದ್ದು, ಇದು ಮನೂವಾದಿಗಳಿಗೆ ತಡೆಲಾಗದಸ್ಟು ಅಸೂಯೆಯನ್ನು ವೆಕ್ತಪಡಿಸುತ್ತಿರುವುದು ಸಾಮಾನ್ಯರಿಗೂ ಅರ್ಥವಾಗಿದೆ ನಿವು ಇಂಥಹ ನೀಚಮನಸ್ಥಿತಿಯವರ ಆರೋಪಗಳಿಗೆ ಉತ್ತರಿಸುವ ಅಗತ್ಯವಿಲ್ಲಾ ನಿಮ್ಮ ಬಸವನಿಸ್ಟೆಯನ್ನು ಪ್ರಶ್ನಿಸುವ ಅಧಿಕಾರ ಬಸವಭಕ್ತರಿಗಿದೆಯೇ ಹೊರತು ಇಂಥಹ ಬಸವದ್ರೋಹಿಗಳಿಗಿಲ್ಲಾ, ಇಂದು ಬಸವಭಕ್ತರೆಲ್ಲಾ ನಿಮ್ಮಜೊತೆಗಿದ್ದಾರೆ ನಿವು ಮುಂದೆ ಮಾಡಬೇಕಾದ ಕಾರ್ಯಗಳತ್ತ ನಿಮ್ಮ ಮಾರ್ಗದರ್ಶನವಿರಲಿ, ಕನ್ನೇರಿಯಂಥಹ ಸ್ವಾಮಿ & ಅವರ ಪರಿವಾರವನ್ನು ನೊಡಿಕೊಳ್ಳಲು ಒಂದು ಪ್ರತ್ಯೇಕ ತಂಡ ರಚನೆಯಾಗಲಿದೆ ಈ ತಂಡದಿಂದ ಅಂಥವರಿಗೆ ಸರಿಯಾದ ಉತ್ತರ ಕೊಡುತ್ತೆವೆ, ನಿವು ಇಂಥಹ ಆರೊಪಗಳಿಗೆ ಪ್ರತಿಕ್ರೀಯಿಸದಿರಿ ಶರಣು ಶರಣಾರ್ಥಿಎಳು🙏

  • M. B. Bhogesha Gowda, Adyaksharu, Basavakendra, Chittaragi vijaya Mahanteswara shakha mata, Siddaiahnakote, Chitradurga Dist. says:

    ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬ ಗಾದೆಯಂತೆ ಶ್ರೀ ಗಳು ತಮ್ಮ ಕಾರ್ಯ ಮಾಡಲಿ. ಬೊಗಳುವರು ಬೊಗಳಿ ಸುಮ್ಮನಾಗುತ್ತಾರೆ. ಬಸವಾದಿ ಶಿವಶರಣರ ತ್ಯಾಗ ಬಲಿದಾನಕ್ಕೆ ನ್ಯಾಯ ಸಿಗಲು ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಅವಶ್ಯಕ. ಅದ್ದನ್ನು ಸಾಧಿಸಲು ಬಸವ ಭಕ್ತರು ಒಂದಾಗಿ ಸಾಗಬೇಕಿದೆ. ಶರಣು ಶರಣಾರ್ಥಿ ಗಳು ಅಧ್ಯಕ್ಷರು ಬಸವ ಕೇಂದ್ರ ಸಿದ್ದಯ್ಯನಕೋಟೆ

  • ಬಸವ ಪರಂಪರೆಯ ಕಾಡಸಿದ್ದೇಶ್ವರ ಮಠದಲ್ಲಿ ಬಸವ ತತ್ವದ ಅರಿವಿಲ್ಲದ ಅವಿವೇಕಿ ಏನೋ ಅಂದ ಅಂತ ನೀವು ಯಾಕೆ ಗುರುಗಳೆ ಬೇಸರ ಗೊಳ್ಳುತ್ತಿರ….. ಕೂಡಲಸಂಗನ ಶರಣರೊಡನೆ ಮರೆತು ಸರವಾಡಿದರೆ ಸುಣ್ಣದಕಲ್ಲನು ಮಡಿಲಲ್ಲಿ ಕಟ್ಟಿಕೊಂಡು ಮದವಿಗೆ ಬಿಡಂತೆ ಬಸವಣ್ಣ ನವರೇ ಹೇಳಿದರ್ ಬಿಡಿ

  • Nitish r ಎಂಬ ಈ ವ್ಯಕ್ತಿ ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿಲ್ಲ ಎಂದು ಹೇಳುತ್ತಾರೆ. ಕ್ರಿಸ್ತನಾಗಲಿ ಬುದ್ಧನಾಗಲಿ ನಾನು ಈ ಧರ್ಮವನ್ನು ಸ್ಥಾಪಿಸಿದ್ದೇನೆಂದು ಹೇಳಿಲ್ಲ. ಅವರ ತತ್ವ ಸಿದ್ಧಾಂತ ಮುಂದುವರೆದು ಆಯಾಧರ್ಮಗಳು ರಚಣೆಯಾಗಿವೆ. ಇತಿಹಾಸವನ್ನು ತಿಳಿದುಕೊಂಡು ವಿಚಾರ ಮಾಡಬೇಕು.

Leave a Reply

Your email address will not be published. Required fields are marked *