ಮೈಸೂರು
ಐದು ವರ್ಷಗಳಿಂದ ಯಾವುದೇ ಮಠಾಧಿಪತಿಯಿಲ್ಲದೆ ಬೀಗ ಬಿದ್ದಿದ್ದ ನವಂಬರ್ 19ರಂದು ಮುಡಿಗುಂಡ ವಿರಕ್ತ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ ಮಠದ ಉಸ್ತುವಾರಿ ಸ್ವಾಮೀಜಿಗಳಾಗಿ ನೇಮಿಕವಾದರು.
ಅವರಿಗೆ ಹಾರ ಹಾಕಿ, ಹಣ್ಣು ಕೊಟ್ಟು ಮಠ ಹಸ್ತಾಂತರ ಮಾಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ವಿಡಿಯೋ ವೈರಲ್ ಆಗಿದೆ.
ಮಠದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ನಿಜಾಚರಣೆಯ ವಚನ ಕಮ್ಮಟ ನಡೆಸಿದ ಒಂದು ವಾರದ ಒಳಗೆಯೇ ಉಸ್ತುವಾರಿ ಸ್ವಾಮೀಜಿ ನೇಮಕವಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಮುಡಿಗುಂಡದ ಶ್ರೀಕಂಠ ಶ್ರೀಗಳು ಪಕ್ಕಾ ಬಸವ ತತ್ವ ಪಾಲಕರು ಅವರಿಂದ ಲಿಂಗಾಯತ ಧಮ೯ ಪ್ರಚಾರ ಹಾಗೂ ಲಿಂಗಾಯತ ನಿಜಾಚರಣೆಗಳು ಜರುಗಲಿ ಪೀಠಾಧಿಪತಿಗಳಾದ ಶ್ರೀಗಳಿಗೆ ಅಭಿನಂದನೆಗಳು 💐🙏🙏