ಬೆಂಗಳೂರು
ಹಿರಿಯ ನಟಿ ಬಿ ಸರೋಜಾ ದೇವಿ ನಿಧನರಾದ ಹಿನ್ನಲೆಯಲ್ಲಿ ಅವರ ಅಭಿನಯದ ‘ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು’ ವಚನ ವೈರಲ್ ಆಗಿದೆ.
ಟಿ. ಲಿಂಗಪ್ಪ ಸಂಗೀತ ನೀಡಿ, ಪಿ. ಸುಶೀಲ ಹಾಡಿದ ಅಕ್ಕನ ವಚನ ಕನ್ನಡದ ಅತ್ಯಂತ ಜನಪ್ರಿಯ ಚಲನಚಿತ್ರ ಗೀತೆಗಳ ಸಾಲಿಗೆ ಸೇರಿಕೊಂಡಿತು.
1961ರಲ್ಲಿ ಬಿಡುಗಡೆಯಾದ ಕಿತ್ತೂರು ಚೆನ್ನಮ್ಮ ಚಿತ್ರದ ಹಾಡಿದು. ಇದರಲ್ಲಿ ಸರೋಜಾ ದೇವಿ ರಾಣಿ ಚೆನ್ನಮರ ಪಾತ್ರ, ಡಾ ರಾಜ್ ಕುಮಾರ್ ಮಲ್ಲಸರ್ಜರ ಪಾತ್ರ ವಹಿಸಿದ್ದರು.