ಚಿತ್ರದುರ್ಗ
ಬಸವ ತತ್ವವನ್ನು ವ್ಯವಸ್ಥಿತವಾಗಿ ಜನಮಾನಸಕ್ಕೆ ಮುಟ್ಟಿಸುವ ಬೃಹತ್ ಸಂಕಲ್ಪದೊಂದಿಗೆ ಪ್ರಾರಂಭ ಆದ ನಾಡಿನ ಮೊಟ್ಟ ಮೊದಲ ಹಾಗೂ ಅಪರೂಪದ ಕಾರ್ಯಕ್ರಮ ತರಳಬಾಳು ಹುಣ್ಣಿಮೆ.
ಇದರಲ್ಲಿ ಲಕ್ಷಾಂತರ ಜನ ಜ್ಞಾನ ದಾಸೋಹದಲ್ಲಿ ಮಿಂದೇಳುತ್ತಾರೆ. ಇದು ನಡೆದ ಸ್ಥಳದಲ್ಲಿ ಒಂದು ಭೌತಿಕ ಬದಲಾವಣೆಯನ್ನೂ ತರುತ್ತಾ ಬಂದಿರುವುದು ಇತಿಹಾಸ. ಈ ಬಾರಿ ನೀರು ತುಂಬಿಸಿ ಪುನಶ್ಚೇತನಗೊಳಿಸಿದ ಕೆರೆಯಲ್ಲಿಯೇ ತರಳಬಾಳು ಹುಣ್ಣಿಮೆ ಆಯೋಜನೆಯಾಗಿದೆ.
ತರಳಬಾಳು ಹುಣ್ಣಿಮೆಗೆ ಬರುವ ಲಕ್ಷಾಂತರ ಜನರ ಅಂತರಂಗವನ್ನು ಬದಲಾಯಿಸುವ ಪ್ರಯತ್ನಗಳೂ ಆದರೆ ಒಳ್ಳೆಯದು.
1) ಕನಿಷ್ಠ 25/30 ಸಾವಿರ ಯುವಕ ಯುವತಿಯರು ಗುಟ್ಕಾ, ತಂಬಾಕು, ಬೀಡಿ, ಸಿಗರೇಟು, ಮದ್ಯಪಾನ ಸೇರಿದಂತೆ ಎಲ್ಲಾ ದುಶ್ಚಟಗಳಿಂದ ಮುಕ್ತರಾಗಲು ಪಣ ತೊಡಬೇಕು.
2) ಕನಿಷ್ಠ 25/30 ಸಾವಿರ ಯುವಕರ ಯುವತಿಯರು ಇಷ್ಟಲಿಂಗ ಧಾರಿಗಳಾಗಿ ಗುಡಿ ಗುಂಡಾರ ಸುತ್ತುವುದು ಸೇರಿದಂತೆ ಮೌಢ್ಯದಿಂದ ಹೊರಗೆ ಬರುವುದಾಗಿ ಪ್ರತಿಜ್ಞೆ ಕೈಗೊಳ್ಳಬೇಕು.
3) ಕನಿಷ್ಠ 25/30 ಸಾವಿರ ಯುವಕ ಯುವತಿಯರು ಬಸವಾದಿ ಶರಣರ ವಿಚಾರಗಳನ್ನು ತಿಳಿಯಬೇಕು
ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ವಹಿಸಲು ನಿರ್ಧರಿಸಬೇಕು.
4) ಕನಿಷ್ಠ 25/30 ಸಾವಿರ ಯುವಕ ಯುವತಿಯರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು,
ಭ್ರಷ್ಟಾಚಾರದ ವಿರುದ್ಧ ದನಿ ಎತ್ತಲು ನಿರ್ಣಯ ಕೈಗೊಳ್ಳಬೇಕು.
ಇಂಥಹ ವಿಚಾರಕ್ಕೆ ಪೂರಕವಾದ ನಿರ್ಧಾರ ತರಳಬಾಳು ಹುಣ್ಣಿಮೆಯಲ್ಲಿ ಯುವಕ ಯುವತಿಯರು ಕೈಗೊಳ್ಳಲಿ ಎಂಬುದು ಬಸವಾಭಿಮಾನಿಗಳ ಆಶಯ.

ಸಂದರ್ಭೋಚಿತ ನುಡಿ. 👌🏼
ಈ ಆಶಯಗಳು ಈಡೇರಿದರೆ 21ನೇಯ ಶತಮಾನದಲ್ಲಿ ಮತ್ತೊಮ್ಮೆ ಸಣ್ಣದೊಂದು ಬಸವಕ್ರಾಂತಿ ನಡೆದಂತೆ. 🙏🏼
ತರಳಬಾಳು ಹುಣ್ಣಿಮೆ ಗುರುವರ್ಯರ ಅಂತರಂಗದಲ್ಲಿಯೂ ಬದಲಾವಣೆ ತರಲಿ ಎಂದು ಭಕ್ತ ಸಮೂಹ ಆಶಿಸುತ್ತದೆ.