ತೇರದಾಳ
ಇಲ್ಲಿ ಪರಮಪೂಜ್ಯ ಡಾ. ಮಹಾಂತ ಪ್ರಭು ಸ್ವಾಮೀಜಿ ಅವರು ಬಸವ ಪುರಾಣ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕ್ರಿ.ಶ 14ನೇ ಶತಮಾನದಲ್ಲಿ ಭೀಮಕವಿ ಬರೆದ ಬಸವ ಪುರಾಣ ಇಂದಿಗೂ ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿದೆ.
ಬಸವ ಪುರಾಣದ ಮಹಿಮೆ ಅಪಾರ ಎಂದು ಓದಿದ್ದೇವು, ಕೇಳಿದ್ದೇವು. ಆದರೆ ಡಾ. ಮಹಾಂತ ಪ್ರಭು ಸ್ವಾಮಿಗಳು ಈಗ ಒಂದು ಮಹಾ ಪವಾಡವನ್ನೆ ಸೃಷ್ಟಿಸಿದ್ದಾರೆ. ಈ ಭಯಂಕರ ಮಳೆಯಲ್ಲಿ ಇಪ್ಪತ್ತು ಸಾವಿರ ಜನರು ಕೆಸರಿನಲ್ಲಿ ಕುಳಿತು ಪ್ರವಚನ ಆಲಿಸುತ್ತಿರುವ ವಿಡಿಯೋ ನೋಡಿದರೆ ಸೋಜಿಗ ಎನಿಸುತ್ತದೆ. ಮೂವತ್ತು ಸಾವಿರ ಹೋಳಿಗಿ ಪ್ರಸಾದ ನಡೆದದ್ದು ನಿಜಕ್ಕೂ ರೋಮಾಂಚನ!