ಗಣಪತಿ ಪೂಜೆ, ವಾಸ್ತು ಶಾಂತಿ, ಸ್ಥಳ ಶುದ್ಧಿಕರಣ, ನವಗ್ರಹ ಹೋಮ, ವಾಸ್ತು ಹೋಮ ಮುಂತಾದ ಆಚರಣೆಗಳ ಮೂಲಕ ಬಸವೇಶ್ವರ ಶಿಲಾ ವಿಗ್ರಹ ಶುದ್ಧಿಕರಣ ನಡೆಯಲಿದೆ
ಸುತ್ತೂರು
ಸುತ್ತೂರು ಶ್ರೀ ಕ್ಷೇತ್ರದ ಬಳಿಯ ತುಮ್ಮನೇರಳೆ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಬಸವೇಶ್ವರರ ನೂತನ ಪುತ್ಥಳಿಯನ್ನು ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅನಾವರಣಗೊಳಿಸಲಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ಮಠದ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ನಂತರ ಗಣಪತಿ ಪೂಜೆ, ಯಾಗ ಮಂಟಪ ಪ್ರವೇಶ, ವಾಸ್ತು ಶಾಂತಿ, ಸ್ಥಳ ಶುದ್ಧಿಕರಣ, ಪ್ರಧಾನ ದೇವತಾ ಕಳಸ ಪ್ರತಿಷ್ಠಾಪನೆ, ನವಗ್ರಹ ಹೋಮ, ವಾಸ್ತು ಹೋಮ, ಮುಂತಾದ ಆಚರಣೆಗಳ ಮೂಲಕ ಬಸವೇಶ್ವರ ಶಿಲಾ ವಿಗ್ರಹ ಶುದ್ಧಿಕರಣವನ್ನು ತುಮ್ಮನೇರಳೆ ಶಿವಾರ್ಚಕರ ತಂಡ ನಡೆಸಿಕೊಡಲಿದೆ ಎಂದು ತುಮ್ಮನೇರಳೆ ಗ್ರಾಮದ ಬಸವ ಬಳಗದಿಂದ ಬಂದಿರುವ ಅಹ್ವಾನ ಪತ್ರಿಕೆ ತಿಳಿಸಿದೆ.
ಮೈಸೂರು ಜಿಲ್ಲೆಯ ಮೊಸನಬಾಯನಹಳ್ಳಿಯ ಶಿಲ್ಪಿ ಶ್ರೀ ಕೆ ರಾಜಾಚಾರ್ ಅವರು ಬಸವೇಶ್ವರ ಪುತ್ಥಳಿಯನ್ನು ಸಿದ್ದಪಡಿಸಿದ್ದಾರೆ.
ದೇವನೂರಿನ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು, ಮಲ್ಲನಮೂಲೆ ಸುಕ್ಷೇತ್ರದ ಪೂಜ್ಯ ಶ್ರೀ ಚೆನ್ನಬಸವ ಸ್ವಾಮಿಗಳು, ವಾಟಾಳಿನ ಪೂಜ್ಯ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳು, ಕುದೇರಿನ ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳು, ದಂಡಿಕೆರೆಯ ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು, ಹೊಸಕೋಟೆಯ ಪೂಜ್ಯ ಶ್ರೀ ಗುರುಸ್ವಾಮಿಗಳು ದಿವ್ಯ ಸಮ್ಮುಖ ವಹಿಸಲಿದ್ದಾರೆ.
ನಮಸ್ಕಾರ ಸ್ನೇಹಿತರೆ ಬಸವಣ್ಣನವರು ಯಜ್ಞಾದಿ ಮಹಾಪೂರ್ಣಾ ವಿತ ಗಣಪತಿ ಪೂಜೆ ಯಜ್ಞ ಯಗಾದಿಗಳು ಹೋಮ ಹವನ ಇವೆಲ್ಲವನ್ನು ವಿರೋಧಿಸಿದ್ದರು ಆದರೆ ಈಗಿನ ಕೆಲಸಕ್ಕೆ ಬಾರದ ಸ್ವಾಮೀಜಿಗಳು ಯಜ್ಞ ಯಗಾದಿ ಹೋಮ ಹವನ ಗಣಪತಿ ಪೂಜೆ ಇವುಗಳ ಮೂಲಕ ಬಸವಣ್ಣನವರಿಗೆ ಮೋಸ ಮಾಡುತ್ತಿದ್ದಾರೆ.
ಇವೆಲ್ಲವುದರ ಬದಲು ಲಿಂಗಾಯತರಿಗೆ ಲಿಂಗ ಪೂಜೆಯ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತಾ ಲಿಂಗ ದೀಕ್ಷೆ ಮಾಡುತ್ತಾ ಬಸವಣ್ಣನವರ ತತ್ವಗಳನ್ನು ಇಡೀ ವಿಶ್ವಕ್ಕೆ ಸಾರುತ್ತ ಬಸವೇಶ್ವರರ ಮೂರ್ತಿಯನ್ನು ಅನಾವರಣಗೊಳಿಸಿದರೆ ಬಸವಣ್ಣನವರಿಗೆ ನಾವು ಮಾಡುವ ದೊಡ್ಡ ಉಪಕಾರವಾಗಿರುತ್ತದೆ
ಲಿಂಗಾಯತರಿಗೆ ಫಸ್ಟ್ ಲಿಂಗ ದೀಕ್ಷೆ ಕೊಟ್ಟು ಲಿಂಗಾಯತರ ಕೊರಳಲ್ಲಿ ಲಿಂಗ ಇರುವಂತೆ ಮಾಡುವಂತ ಕೆಲಸ ನಿಮ್ಮಂತ ಸ್ವಾಮೀಜಿಗಳ ಮೊದಲ ಕೆಲಸ ಅದು ಬಿಟ್ಟು ಹೋ ಮಾಯ ಹೋಮ ಹವನ ಯಜ್ಞ ಮಾಡುವುದರಿಂದ ಯಾರಿಗೆ ಉಪಯೋಗವಿಲ್ಲ.
ಬಸವಣ್ಣನವರು ವೈದಿಕತೆಯನ್ನು ವಿರೋಧಿಸಿದ್ದಾರೆ ಆದರೆ ನೀವು ಅದೇ ವೈದಿಕೀಯ ವೈದಿಕತೆಯನ್ನು ತೇಲ ಮೇಲೆ ಹೊತ್ತುಕೊಂಡು ಹೋರುತ್ತಿದ್ದೀರಿ. ಬಸವಣ್ಣನವರ ಪ್ರಕಾರ ಒಂದು ಹೆಣ್ಣಿಗೆ ಒಂದೇ ಗಂಡು ಹಾಗೆ ಲಿಂಗಾಯತರಿಗೆ ಶರಣ ಸತಿ ಲಿಂಗಪತಿ ಎಂದು ಹೇಳುವ ಮೂಲಕ ಛಲಬೇಕು ಶರಣಂಗೆ ಪರ ದೈವ ನೊಲ್ಲೇನಂಬ ಛಲಬೇಕು ಶರಣಂಗೆ ಪರಸತಿಯ ನೊಲ್ಲೇ ನಂಬ ಛಲಬೇಕು ಶರಣಂಗೆ ಪರಧನವನಲ್ಲೇನಂಬ.
ನಾವು ಏನಾದರೂ ಯಜ್ಞ ಯುಗಾದಿಗಳ ಮೂಲಕ ಬಸವಣ್ಣನವರ ಪುತ್ತಳಿ ಪ್ರತಿಷ್ಠಾಪನೆ ಮಾಡಿದ್ದೆ ಆದರೆ ಏನು ಮಾಡಿದ ಹಂಗೆ ಅನ್ನೋದು ನಿಮಗೆ ಬಿಟ್ಟಿದ್ದು
ಅಕ್ಷರಶಃ ನಿಜ. ಸರಿಯಾಗಿ ಹೇಳಿದ್ದೀರಿ.
ಗುರು ಬಸವ ತಂದೆಯ ಪ್ರತಿಮೆ ಶುದ್ದಿಕರಣದ ಅವಸ್ಯಕತೆಗೆ ಬರಲು ಅದನ್ನು ಅಶುದ್ದಿ ಮಾಡಿದವರಾರು ಪ್ರತಿಮೆ ಶುದ್ದೀಕರಣದ ಮುಂಚೆ ನಿಮ್ಮ ಕೊಳಕು ಮನಸ್ಸನ್ನು ಶುದ್ದೀಕರಿಸಿಕೋಳ್ಳಿ.
ವಿಶ್ವಗುರು ಬಸವಣ್ಣನವರ ಶುದ್ದೀಕರಣಕ್ಕೆ ಗಣಪತಿ ಪೂಜೆ ಹೋಮದ ಮಾಡಿ ಮಾಡುವ ನಿಮ್ಮ ಹಿನಮಸ್ಥಿಗೆ ನಿಮ್ಮ ಮುಖಕ್ಕೆ ಮಸಿ ಬಳಿದುಕೊಳ್ಳುವದೆ ಸೂಕ್ತ.
ಅಜ್ಞಾನದ ಪರಮಾವದಿ… ಬಸವಾದಿ ಶರಣರು ಇವರಿಗೆ ವಚನ ಜ್ಞಾನಪ್ರಾಪ್ತಿಸಲಿ….
Basavanna avarege Avamana maduthheruva Dodda matada Sanna buddeya. Dadda swamiji galege dekkara
ಲಿಂಗಾಯತ ಧರ್ಮ ಇತಿಹಾಸ ಮತ್ತು ಸತ್ಯಾ ಸತ್ಯತೆ
————————————————–
1) ಇತಿಹಾಸ ಪುರುಷ ಬಸವಣ್ಣನವರೇ ಲಿಂಗಾಯತಕ್ಕೆ ಧರ್ಮಗುರು. ಸ್ಥಾವರಲಿಂಗೋದ್ಭವರು ಎನ್ನಲಾದ ಕಾಲ್ಪನಿಕ ರೇಣುಕಾಚಾರ್ಯರೇ ವೀರಶೈವಕ್ಕೆ ಧರ್ಮಗುರು.
2) ಲಿಂಗಾಯತರಲ್ಲಿ 770 ಅಮರಗಣಂಗಳೆಲ್ಲ ನಾಯಕರು. ವೀರಶೈವರು 770 ಅಮರಗಣಂಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
3) ಲಿಂಗಾಯತರು ಏಕದೇವೋಪಾಸಕರು. ಇಷ್ಟಲಿಂಗಯೋಗ ಅವರ ಪೂಜಾ ವಿಧಾನ. ಇಷ್ಟಲಿಂಗವು ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣ ಚೈತನ್ಯದ ಕುರುಹು. ಬಹುದೇವೋಪಾಸಕ ವೀರಶೈವರು ಮೂರ್ತಿ ಪೂಜಕರು.
4) ಲಿಂಗಾಯತ ಧರ್ಮದಲ್ಲಿ ಹೋಮ, ಹವನ ಮತ್ತು ವೇದಘೋಷಗಳಿಲ್ಲ.ವೀರಶೈವರಲ್ಲಿ ಇವೆಲ್ಲ ಇವೆ.
5) ಮೂಢನಂಬಿಕೆಯ ಆಗರಗಳಾದ ಜ್ಯೋತಿಷ ಮತ್ತು ಪಂಚಾಂಗವನ್ನು ಲಿಂಗಾಯತರು ನಂಬುವುದಿಲ್ಲ. ವೀರಶೈವರು ನಂಬುತ್ತಾರೆ.
6) ಲಿಂಗಾಯತರಿಗೆ ಆಚಾರವೇ ಸ್ವರ್ಗ, ಅನಾಚಾರವೇ ನರಕ. ವೀರಶೈವರು ಸ್ವರ್ಗ, ನರಕಗಳನ್ನು ನಂಬುತ್ತಾರೆ.
7) ಲಿಂಗಾಯತರದು ಅನುಭವಮಂಟಪ ಮಹಾಮನೆ ಸಂಸ್ಕೃತಿ, ವೀರಶೈವರಿಗೆ ದೇವಾಲಯಗಳು ಬೇಕು.
8 ) ಲಿಂಗಾಯತರದು ಕಾಯಕ ಸಿದ್ಧಾಂತ. ವೀರಶೈವರದು ಕರ್ಮ ಸಿದ್ಧಾಂತ.
9) ಲಿಂಗಾಯತರ ಧರ್ಮಗ್ರಂಥ ವಚನ ಸಂಪುಟ. ವೀರಶೈವರ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ.
10) ಅವೈದಿಕ ಲಿಂಗಾಯತರಿಗೆ ವಚನವೇ ಸರ್ವಸ್ವ. ವೇದಾಗಮಗಳನ್ನು ನಂಬುವ ವೀರಶೈವರು ವೈದಿಕ ಸಂಪ್ರದಾಯದವರು.
11) ಲಿಂಗಾಯತರಿಗೆ ಅರಿವೇ ಗುರು. ವೀರಶೈವರಲ್ಲಿ ಭಕ್ತರು ಗುರುವಿನ (ಆಚಾರ್ಯರ) ಗುಲಾಮರು.
12) ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ’ಎಂದು ಹೇಳಿದವರು. ವೀರಶೈವ ಪಂಚಾಚಾರ್ಯರಿಗೆ ಪಲ್ಲಕ್ಕಿ ಬೇಕು.
13) ಲಿಂಗಾಯತರದು ನಿರ್ಜಾತಿ ವ್ಯವಸ್ಥೆ. ಬಸವ ತತ್ತ್ವವನ್ನು ಜನ ಮನದಲ್ಲಿ ಮೂಡಿಸುವ ಲಿಂಗವಂತರು ಶರಣ ಜಂಗಮರಾಗಬಹುದು. ವೀರಶೈವರದು ಜಾತಿ ವ್ಯವಸ್ಥೆ. ಅವರ ಪ್ರಕಾರ ಜಾತಿ ಜಂಗಮರೇ ಗುರುಗಳಾಗಬೇಕು.
14) ಲಿಂಗಾಯತರಿಗೆ ಪಂಚಸೂತಕಗಳಿಲ್ಲ. ವೀರಶೈವರಿಗೆ ಪಂಚಸೂತಕಗಳಿವೆ.
15) ಲಿಂಗಾಯತ ಬಸವಾದ್ವೈತ. ಶಿವ, ಗಂಗೆ, ಪಾರ್ವತಿ, ಮತ್ತು ಕೈಲಾಸ ನಂಬುವ ವೀರಶೈವ ದ್ವೈತ.
16) ವೀರಶೈವರು ಪಂಚಾಚಾರ್ಯ ಸಂಪ್ರದಾಯವನ್ನು ಬಿಟ್ಟು ಬಸವಣ್ಣನವರೇ ಧರ್ಮಗುರು ಮತ್ತು ವಚನಗಳೇ ಧರ್ಮಗ್ರಂಥ ಎಂದು ಒಪ್ಪಿಕೊಂಡಾಗ ಮಾತ್ರ ಲಿಂಗಾಯತ ಸಮಾಜ ಒಂದಾಗಬಲ್ಲುದು. ಅವೈದಿಕ ಲಿಂಗಾಯತ ಮತ್ತು ವೈದಿಕ ವೀರಶೈವತದ್ವಿರುದ್ಧ ಸಿದ್ಧಾಂತಗಳ ಮೇಲೆ ನಿಂತಿರುವುದರಿಂದ ಒಂದಾಗಲು ಬೇರೆ ಮಾರ್ಗವೇ ಇಲ್ಲ. ಇರುವುದೊಂದೇ ಮಾರ್ಗ; ಬಸವಮಾರ್ಗ.
ವೀರಶೈವ ಪದ ಹರಿಹರ /ರಾಘವಾ೦ಕ . ಕೆರೆ ಪದ್ಮರಸ, ಚಾಮರಸರ ಕೃತಿಗಳಲ್ಲಿ ಕಂಡು ಬಂದಿಲ್ಲಾ ,೧೩೬೪ ಮೊದಲ ಬಾರಿ ವೀರಶೈವದ ಬಳಕೆಯಾಗಿದೆ. ಶಿವಾಗಮದಲ್ಲಿಯೂ ವೀರಶೈವ ಪದ ಬಂದಿಲ್ಲ .ಬಸವಣ್ಣನ ಹೊರತಾಗಿ ಲಿಂಗಾಯತ ಧರ್ಮಕ್ಕೆ ಇನ್ನೋಬ್ಬ ಧರ್ಮಗುರುವಲ್ಲಾ .
ಲಿಂಗಾಯತ ಒಂದು ಸ್ವತಂತ್ರ ಧರ್ಮ. ವೀರಶೈವ ಶೈವ ಧರ್ಮದ ಭಾಗ ಆದರೆ ವೀರಶೈವ ಆಚರಣೆಗಳು ನಮ್ಮ ಬಸವಾದಿಪ್ರಮಥರ ಶರಣ ಸಿದ್ಧಾಂಥದ ಅಷ್ಟಾ ವರಣ,ಪಂಚಾಚಾರ , ಷಟ ಸ್ಥಲ ಕದ್ದಿದ್ದಾರೆ ಅಥವಾ ಅನುಕರಣೆ ಮಾಡಿದ್ದರೆ. ವೀರಶೈವರು ಲಿಂಗಾಯತರೆನ್ನಬಹುದು ಆದರೆ ಲಿಂಗಾಯತರು ವೀರಶೈವರಲ್ಲ.
————————————————————————————————————————————————————
ಬಸವಣ್ಣ ಪುತಳಿಗೆ ಸುದ್ದಿಕರಣ 🤦♂️🤦♂️🤦♂️….. ಅವರಿಗೆ ಅವಮಾನ ಇದರಿಂದ 🤦♂️🤦♂️🤦♂️
“ವೈದಿಕರು ಬಸವಣ್ಣನನ್ನು ಭೌತಿಕವಾಗಿ ಕೊಂದರೆ ಲಿಂಗಾಯಿತರು ಸೈದ್ಧಾಂತಿಕವಾಗಿ ಕೊಂದರು” ಹೀಗೇದು ಯಾರೋ ಪ್ರಗತಿಪರ ಸಾಹಿತಿಗಳು ಹೇಳಿದ್ದನ್ನು ಬಹಳ ಹಿಂದೆಯೇ ಕೇಳಿದ್ದ ನೆನಪು.
ಬಸವ ತತ್ವ ಅಷ್ಟ ಸುಲಭವಾಗಿ ಸಾಯುವುದಿಲ್ಲ. ಕೊಲ್ಲುವ ಪ್ರಯತ್ನಗಳು ಇನ್ನು ನಡೆಯುತ್ತಲೇ ಇವೆ. 😭😭
ಬೇಡವೊ ಇಲಿಚಯ್ಯಾ ! ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ
ಇಂದು ಬಂದು ನಮ್ಮ ವಸ್ತ್ರವ ಕಡಿದೆ. ಬೇಡವೋ ಇಲಿಚಯ್ಯಾ ! ನಿನಗಂಜರು ನಿನ್ನ ಗಣಪತಿಗಂಜರು; ಕೂಡಲಚೆನ್ನಸಂಗನ ಶರಣರು ಕಂಡಡೆ
ನಿನ್ನ ಹಲ್ಲ ಕಳೆವರು
ಹಂ(ದಂ?)ತವ ಮುರಿವರು
ಬಸವಾದಿ ಶರಣರ ಕುರಿತು ಈ ಹಿಂದೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿರುವ ಪೂಜ್ಯರು ಈಗ ಬಸವಾದಿ ಶರಣರ ತತ್ವಗಳಿಗೆ ಅವಮಾನ ಮಾಡುವ ಕಾರ್ಯಕ್ಕೆ ಮುಂದಾಗಿರುವದು ದುರ್ದೈವವೆಂದೇ ಹೇಳಬೇಕಾಗುತ್ತದೆ. ಹಣ ಮತ್ತು ಅಧಿಕಾರದ ಆಸೆ ಮನುಷ್ಯನನ್ನು ಎಷ್ಟೋಂದು ಪ್ರಪಾತಕ್ಕ ತೆಗೆದುಕೊಂಡು ಹೋಗುತ್ತದೆ ಎಂಬುದಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಸಿಗಲಾರದು. ಒಂದುವೇಳೆ ಇದರಲ್ಲಿ ಅಧಿಕಾರ ಮತ್ತು ಹಣದ ಪ್ರಭಾವ ಇಲ್ಲವೆಂದಾದರೆ ಈ ಇರ್ವರೂ ಪೂಜ್ಯರು ಇಷ್ಟೊಂದು ದೊಡ್ಡ ಪ್ರಮಾನದಲ್ಲಿ ಬಸವಾದಿ ಶರಣರ ತತ್ವಗಳಿಗೆ ಅವಮಾನ ಮಾಡಲು ಮುಂದಾಗಿದ್ದಾದರೂ ಏತಕ್ಕೆ ಎಂಬುದನ್ನು ಸಮಾಜಕ್ಕೆ ತಿಳಿಸಿದರೆ ಒಳ್ಳೆಯದು.
ಬಸವಣ್ಣನವರು ಹೋಮ ಹವನ ಯಜ್ಞ ಯಾಗಾದಿಗಳನ್ನು ವಿರೋಧಿಸಿ ಇಷ್ಟಲಿಂಗ ಉಪಾಸನೆಯನ್ನು ಜಾತಿ ಮತ ಲಿಂಗ ಭೇದ ಇಲ್ಲದೆ ಎಲ್ಲರಿಗೂ ಬೋಧಿಸಿದರು. ಎಲ್ಲರಿಗೂ ಏಕ ದೇವೋಪಾಸನೆ ಬೋಧಿಸಿ ಹಣೆಯಲ್ಲಿ ವಿಭೂತಿ ಕೊರಲಲ್ಲಿ ಇಷ್ಟ ಲಿಂಗ ಧರಿಸುವ ಮೂಲಕ ಎಲ್ಲರೂ ಒಂದೇ ಎಂದು ಸಾರಿದರು. ನೀವು ಅದೂ ಲಿಂಗಾಯತ ಧರ್ಮದ ಸ್ವಾಮಿಗಳಾಗಿ ಬಸವ ತತ್ವ ಸಿದ್ಧಾಂತ ಪ್ರಚಾರ ಮಾಡುವವರಾಗಿ ಬಸವಣ್ಣನವರ ಮೂರ್ತಿಗೇ ಹೋಮ ಹವನದ ಮೂಲಕ ಶುದ್ಧೀಕರಣ ಮಾಡುವ ಮೂಲಕ ಬಸವಣ್ಣನವರಿಗೆ ಮತ್ತು ಅವರ ತತ್ವಕ್ಕೆ ಅವಮಾನ ಮಾಡಿದ್ದೀರಿ. ಈಗ ಲಿಂಗಾಯತ (ವೀರಶೈವ) ಜನಾಂಗದವರು ಎಲ್ಲ ಬಿಟ್ಟು ಬರೀ ಮದುವೆಯಲ್ಲಿ ಮಾತ್ರ ಇಷ್ಟ ಲಿಂಗ ಧಾರಣೆ ಮಾಡಿ ನಂತರ ತೆಗೆದಿಡುತ್ತಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನೀವು ಏನನ್ನು ಹೇಳಲು ಹೊರಟಿದ್ದೀರಿ. ದಯವಿಟ್ಟು ಕಾರ್ಯಕ್ರಮಗಳಲ್ಲಿ ಜನಗಳಿಗೆ ಇಷ್ಟಲಿಂಗ ಧಾರಣೆ ಮಾಡಿ ಅವರಿಗೆ ಪೂಜೆ ಮಾಡುವ ವಿಧಾನ ತಿಳಿಸಿ ಲಿಂಗಾಯತ ಧರ್ಮದ ತತ್ವ ಸಿದ್ಧಾಂತ ಮತ್ತು ವಿಚಾರಗಳನ್ನು ಪ್ರಚಾರ ಮಾಡಬೇಕಾಗಿ ವಿನಂತಿಸುತ್ತೇನೆ. ನಮಸ್ಕಾರಗಳು ಶರಣು ಶರಣಾರ್ಥಿ.
ಸರಿಯಾಗಿ ಹೇಳಿದ್ದೀರಾ ಶರಣರೇ