ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು.
ಬಸವ ಪಂಚಮಿ ಅಂಗವಾಗಿ ಮಕ್ಕಳ್ಳಿಗೆ ಹಾಲು ಮತ್ತು ಓದಲು ಬೇಕಾದ ಪರಿಕರಗಳನ್ನು ನೀಡಿ ಶಿಕ್ಷಣ, ವೈಚಾರಿಕ ಪ್ರಜ್ಞೆ ಮತ್ತು ಬುದ್ದ, ಬಸವ, ಅಂಬೇಡ್ಕರ್ ವಿಚಾರಧಾರೆ ಅಳುವಡಿಸಿಕೊಂಡು ಬದುಕಿದರೆ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂಬ ಅರಿವು ಮಕ್ಕಳಲ್ಲಿ ಮೂಡಿಸಲಾಯಿತು.
ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಒಟ್ಟು 20 ವಿದ್ಯಾರ್ಥಿಗಳಲ್ಲಿ ಒಬ್ಬ ವಿಧ್ಯಾರ್ಥಿನಿಯ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಎನ್.ಬಿ. ಶಿವರುದ್ರಪ್ಪ, ಮತ್ತು ಹರ್ಷಿತಾ ಎಂಬ ಇನ್ನೂಬ್ಬ ವಿಧ್ಯಾರ್ಥಿನಿಯ ಐಎಎಸ್ ತರಬೇತಿ ಜವಾಬ್ದಾರಿಯನ್ನು ಶರಣ ಶ್ರೀಶೈಲ ಜಿ ಮಸೂತೆ
ತೆಗೆದುಕೊಂಡರು.