‘ಟಿ.ವಿ ಧಾರಾವಾಹಿಯಲ್ಲಿ ಸಿದ್ಧಲಿಂಗೇಶ್ವರರ ಚರಿತ್ರೆ ಹಾಳು ಮಾಡಲಾಗುತ್ತಿದೆ’

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಎಡೆಯೂರು ಸಿದ್ಧಲಿಂಗೇಶ್ವರರ ಮೇಲೆ ಬರುತ್ತಿರುವ ಟಿ.ವಿ ಧಾರಾವಾಹಿಯಲ್ಲಿ ಅವರ ಚರಿತ್ರೆ ಹಾಳು ಮಾಡಲಾಗುತ್ತಿದೆ. ಏನೇನೋ ಪವಾಡ ಇತ್ಯಾದಿ ಸೃಷ್ಟಿಸಿ, ಸಂಬಂಧವಿಲ್ಲದ ವೈದಿಕ ಪ್ರಕ್ರಿಯೆಗಳನ್ನು ಜೋಡಿಸಿ ಮನಸ್ಸಿಗೆ ತೋಚಿದಂತೆ ಹೇಳಲಾಗುತ್ತಿದೆ, ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ರವಿವಾರ ಹೇಳಿದರು.

ಇಲ್ಲಿ ನಡೆದ ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ‘ಇದನ್ನು ಎಲ್ಲ ಸ್ವಾಮೀಜಿಗಳು ಖಂಡಿಸಬೇಕು,’ ಎಂದು ಹೇಳಿದರು.

ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲೆಯ ಕನಕಪುರದ ದೇಗುಲಮಠದ ಅಧ್ಯಕ್ಷರಾದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ‘ತೋಂಟದ ಸಿದ್ಧಲಿಂಗ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು.

ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ‘ತೋಂಟದ ಸಿದ್ಧಲಿಂಗ ಶ್ರೀ’ ಪ್ರಶಸ್ತಿಯನ್ನು ರಾಮನಗರ ಜಿಲ್ಲೆಯ ಕನಕಪುರದ ದೇಗುಲಮಠದ ಅಧ್ಯಕ್ಷರಾದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರಿಗೆ ಪ್ರದಾನ ಮಾಡಿದರು.

ಖೊಟ್ಟಿ ವಚನ

‘12ನೇ ಶತಮಾನದ ನಂತರ ಶರಣ ಚಳವಳಿಗೆ 400 ವರ್ಷ ಹಿನ್ನಡೆ ಆಗಿತ್ತು. 16ನೇ ಶತಮಾನದಲ್ಲಿ ಶರಣ ಚಳವಳಿಗೆ ಮರುಹುಟ್ಟು ನೀಡಿದ ಕೀರ್ತಿ ಸಿದ್ಧಲಿಂಗೇಶ್ವರರಿಗೆ ಸಲ್ಲುತ್ತದೆ, ಎಂದು ಹೇಳಿದರು.

ವಚನ ಸಾಹಿತ್ಯದಲ್ಲಿ ಖೊಟ್ಟಿ ವಚನಗಳು ಸೇರಿಕೊಂಡಿವೆ. ಇವುಗಳನ್ನು ಇಟ್ಟುಕೊಂಡು ಕೆಲವರು ವೀರಶೈವ ಲಿಂಗಾಯತ ಸಮುದಾಯದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

‘ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ನೈಜ ವಚನಗಳ ಶೋಧ ಮತ್ತು ವರ್ಗೀಕರಣ ಕಾರ್ಯವನ್ನು ವೀರಣ್ಣ ರಾಜೂರು, ಅಶೋಕ ದೊಮ್ಮಲೂರು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇದಕ್ಕಾಗಿ ಫ.ಗು.ಹಳಕಟ್ಟಿ ವಚನ ಸಂಶೋಧನಾ ಕೇಂದ್ರದ ಕಚೇರಿ ಪ್ರಾರಂಭಿಸಲಾಗಿದೆ’ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಾಗಡಿ ಗದ್ದುಗೆ ಮಠದ ಮಹಾಂತ ಸ್ವಾಮೀಜಿ, ನೆಲಮಂಗಲದ ಪವಾಡ ಬಸವಣ್ಣದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *