ಸವಣೂರ:
ಬಸವಾದಿ ಶರಣರ ವಚನಗಳ ಸಂದೇಶ ಪಾಲಿಸಿ ಅನುಸರಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಎಸ್.ಪಿ. ಯಶೋದಾ ವಂಟಗೋಡಿ ಹೇಳಿದರು.
ಅಕ್ಕನ ಬಳಗದ ವತಿಯಿಂದ ಇತ್ತೀಚಿಗೆ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನೊಳಗೆ ಕ್ರೂರ ಪ್ರಾಣಿಗಳ ಗುಣ ಹಾಗೂ ಶರಣರ ಸದ್ಗುಣಗಳು ಈ ಎರಡೂ ಇವೆ. ಯಾವ ಗುಣವನ್ನು ಬಳಕೆ ಮಾಡುವುದು ಎಂಬುದು ಮನುಷ್ಯನ ಆಯ್ಕೆಯಾಗಿದೆ ಎಂದು ತಿಳಿಸಿದರು.
ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದು, ತಮ್ಮ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ವಿವಿಧ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಅಕ್ಕನ ಬಳಗದ ವತಿಯಿಂದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕಲಿಸುವ ಯೋಜನೆಯನ್ನು ರೂಪಿಸಬೇಕು ಎಂದು ಕರೆ ನೀಡಿದರು. ಸಮಾಜಕ್ಕಾಗಿ ನಾವು ಕಳೆಯುವ ಸಮಯ ಇತರರ ಜೀವನಕ್ಕೆ ಮಾರ್ಗದರ್ಶನವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಪರಿಮಳಾ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗೀತಾ ಹಾಗೂ ಸುನಂದಾ ಚಿನಾಪುರ ವಿಶೇಷ ಅತಿಥಿಗಳಾಗಿ ಮಾತನಾಡಿದರು. ಅಕ್ಕನ ಬಳಗದ ಅಧ್ಯಕ್ಷೆ ವಿದ್ಯಾವತಿ ಹಾವಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕ್ಕನ ಬಳಗದ ಪದಾಧಿಕಾರಿಗಳಾದ ಜಯಲಕ್ಷ್ಮಿ ತೆಗಿಹಳ್ಳಿ, ಜ್ಯೋತಿ ಅಂಗಡಿ, ಲೀಲಾವತಿ ಗಾಣಿಗೇರ, ಅನ್ನಪೂರ್ಣ ಅಡವಿಸ್ವಾಮಿಮಠ, ಅಲಕಾ ಸಿಂಧೂರ, ವಿಜಯಲಕ್ಷ್ಮಿ ಮೆಣಸಿನಕಾಯಿ, ಈರಮ್ಮ ಗಡೆಪ್ಪನವರ, ಕುಸುಮಾ ಗುಂಜಳ, ಸವಿತಾ ಬೆಣ್ಣಿ, ಶೋಭಾ ಬೆಣ್ಣಿ, ಸಾವಕ್ಕ ಬಿಕ್ಕಣ್ಣನವರ, ಮಮತಾ ಹಾವಣಗಿ, ಡಾ. ಸವಿತಾ ಮುರಡಿ, ಶಾರದಾ ನಾರಾಯಣಪುರ, ಪುಷ್ಪಾಬತ್ತಿ, ಲಲಿತಾ ಮೆಣಸಿನಕಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಅಕ್ಕನ ಬಳಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
