ಉಡುಪಿ
ಶರಣ (ಶ್ರಾವಣ) ಮಾಸ ಅರುಹುವಿನ ಮಹಾಮನೆಯ ಶರಣರ ಅನುಭಾವ ಸಂಗಮ ಕಾರ್ಯಕ್ರಮ 2025 ಜುಲೈ 24 ರಿಂದ ಆಗಸ್ಟ್ 22 ರವರೆಗೆ, ಪ್ರತಿದಿನ ಸಂಜೆ 6:30 ರಿಂದ 7.30 ರವರೆಗೆ ಉಡುಪಿಯ ಮನೆ ಮನೆಗಳಲ್ಲಿ ನಡೆಯಲಿದೆ.
ಮಹಾಜಗದ್ಗುರು ಬಸವಣ್ಣ ಧರ್ಮಾರ್ಥ ದತ್ತಿ, ಬೆಂಗಳೂರು ಹಾಗೂ ಅಲ್ಲಮಪ್ರಭು ಅನುಭಾವ ಪೀಠ, ಉಡುಪಿ ಆಶ್ರಯದಲ್ಲಿ ಶರಣರಾದ ಸಂಗಪ್ಪ ತಡವಾಲ, ಸಿದ್ಧಬಸಯ್ಯ ಚಿಕ್ಕಮಠ, ಜಗನ್ನಾಥಪ್ಪ ಪನಸಾಲೆ, ಶರಣೆ ಸುನಂದ ಪನಸಾಲೆ ಅವರುಗಳು ಅನುಭಾವ ನಡೆಸಿಕೊಡುವರು.
ಉಡುಪಿ ನಗರದಲ್ಲಿ ಸುಮಾರು 2000 ಜನ ಬಸವನಿಷ್ಠರು ಇದ್ದಾರೆ ಎಂದು ಸಿದ್ದಬಸಯ್ಯ ಚಿಕ್ಕಮಠ ಹಾಗೂ ಜಗನ್ನಾಥಪ್ಪ ಪನಸಾಲೆ ತಿಳಿಸಿದರು.
