ಉಳವಿ ರಸ್ತೆ ಅಭಿವೃದ್ಧಿಪಡಿಸಲು ಒತ್ತಾಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೈಲಹೊಂಗಲ

ಉತ್ತರ ಕರ್ನಾಟಕದ ಜನರ ಆರಾಧ್ಯದೈವ ಉಳವಿ ಶ್ರೀ ಚನ್ನಬಸವೇಶ್ವರ ಮಾರ್ಗದ ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ, ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿಯ ಸಚಿವರ ಗೃಹಕಚೇರಿಯಲ್ಲಿ ನಾನಾ ಸಂಘಟನೆಗಳಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಬೈಲಹೊಂಗಲ, ಶ್ರೀ ಉಳವಿ ಚನ್ನಬಸವೇಶ್ವರ ಪಾದಯಾತ್ರೆ ಹಾಗೂ ಚಕ್ಕಡಿ ಜಾತ್ರಾ ಸಮಿತಿ ಬೈಲಹೊಂಗಲ, ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ, ಇವರುಗಳ ವತಿಯಿಂದ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಲಾಯಿತು.

ರಾಯಣ್ಣ ಸಮಿತಿ ಅಧ್ಯಕ್ಷ ರಾಜು ಸೊಗಲ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಇಡೀ ವಿಶ್ವಕ್ಕೆ ಮಾದರಿಯಾಗಿರುವ ಬಸವಾದಿ ಶರಣರ ಪುಣ್ಯಪವಿತ್ರ ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಜನರ ಆರಾಧ್ಯ ದೈವ ಉಳವಿಯ ಶ್ರೀ ಚನ್ನಬಸವೇಶ್ವರರ ಜಾತ್ರೆಗೆ ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕರ್ನಾಟಕದಿಂದ ಲಕ್ಷಾಂತರ ಜನರು ತೆರಳುತ್ತಾರೆ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಉಳವಿಗೆ ತೆರಳುವ ರಸ್ತೆಯು ತೀರಾ ಹದಗೆಟ್ಟು ಹೋಗಿದೆ, ವಿಶೇಷವಾಗಿ ಪಾಟೊಳ್ಳಿ ಕ್ರಾಸ್ ದಿಂದ ಉಳವಿ ಕ್ಷೇತ್ರದವರೆಗೆ ತುಂಬಾ ಹಾಳಾಗಿದೆ.

ತಾವು ಬುದ್ಧ, ಬಸವ, ಅಂಬೇಡ್ಕರ್ ಅವರ ಅಪ್ಪಟ ಅಭಿಯಾನಿಯಾಗಿರುವಿರಿ. ಉಳವಿಯ ಶ್ರೀ ಚನ್ನಬಸವೇಶ್ವರರು ಉತ್ತರ ಕರ್ನಾಟಕ ಜನರ ಪವಿತ್ರ ಪುಣ್ಯ ಕ್ಷೇತ್ರವಾಗಿರುವುದರಿಂದ ತಾವು, ಇದನ್ನು ಗಂಭೀರವಾಗಿ ಪರಿಗಣಿಸಿ ಈ ರಸ್ತೆ ಸುಧಾರಣೆಗೆ ಶೀಘ್ರ ಕ್ರಮಕೈಕೊಳ್ಳಬೇಕೆಂದು ಸಚಿವರಲ್ಲಿ ವಿನಂತಿಸಲಾಗಿದೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಶಿವಾನಂದ ತಂಬಾಕೆ, ರಾಜು ಕುಡಸೋಮಣ್ಣವರ, ಬಸವರಾಜ ಬೋಳಗೌಡರ, ರಾಜು ನಾಶೀಪುಡಿ, ರಮೇಶ ಯರಗಣ್ಣವರ, ಗಂಗಾರಾಮ ಶೀಗಿಹಳ್ಳಿ, ಬಾಲು ಜಾಡಗಿ, ಕುಮಾರ ಗಾಳಿ, ನಾಗರಾಜ ಲಕ್ಕಪ್ಪಗೌಡರ, ಜಗದೀಶ ಮಾಳಗಿ ಉಪಸ್ಥಿತರಿದ್ದರು.

Share This Article
1 Comment
  • ಅದಕ್ಕೆ ಅವರಿಂದ ಏನು ಆಶ್ವಾಸನೆ ಸಿಕ್ಕಿತು? ಅದನ್ನೇ ಹೇಳ್ತ ಇಲ್ಲಾ

Leave a Reply

Your email address will not be published. Required fields are marked *