ಉಳವಿ
ಉಳವಿ ಶ್ರೀ ಕ್ಷೇತ್ರದಲ್ಲಿ ಮಾರ್ಚ್ 9ರ ರವಿವಾರದಂದು ಶರಣ ಗಣಮೇಳ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ವೀರಮಾತೆ ಅಕ್ಕನಾಗಲಾಂಬಿಕ ಪೀಠದ 7ನೇ ಪೀಠಾರೋಣ ಕಾರ್ಯಕ್ರಮ ಬಸವಧರ್ಮ ಪೀಠ, ಶ್ರೀ ಚನ್ನಬಸವೇಶ್ವರ ಮಹಾಮನೆ, ಹೆಬ್ಬಾಳ ಚಿಲುಮೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಡಾ. ಮಾತೆ ಗಂಗಾದೇವಿ, ಪೀಠಾಧ್ಯಕ್ಷರು ಬಸವ ಧರ್ಮಪೀಠ, ಕೂಡಲಸಂಗಮ, ವಹಿಸುವರು. ನೇತೃತ್ವವನ್ನು ಪೂಜ್ಯ ಚನ್ನಬಸವಾನಂದ ಸ್ವಾಮೀಜಿ, ಬಸವಧಾಮ ಉಳಿವಿ ವಹಿಸುವರು.
ಸಾನಿಧ್ಯವನ್ನು ಪೂಜ್ಯ ಮಾತೆ ದಾನೇಶ್ವರಿ, ವೀರಮಾತೆ ಅಕ್ಕ ನಾಗಲಾಂಬಿಕಾ ಪೀಠ, ಉಳಿವಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಉಳವಿ ಗ್ರಾಮ ಪಂಚಾಯತಿ ಅಧ್ಯಕ್ಷ ಶರಣ ಮಂಜುನಾಥ ಮೊಕಾಶಿ, ಧ್ವಜಾರೋಹಣವನ್ನು ಶರಣ ಶಿವಾನಂದ ಪರಪ್ಪ ಬೆಳಗಾವಿ, ಪ್ರಗತಿಪರ ರೈತರು ಮಾಡಲಿದ್ದಾರೆ. ವಿಶೇಷ ಆಹ್ವಾನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಅಂದು ಮುಂಜಾನೆ ಪೂಜೆ ಪ್ರಾರ್ಥನೆ ಹುಬ್ಬಳ್ಳಿ ಧಾರವಾಡ ಶರಣ-ಶರಣೆಯರಿಂದ ನಡೆಯಲಿದೆ. ಧರ್ಮಗುರು ಪೂಜೆ ಲಿಂಗಾಯತ ಧರ್ಮ ಮಹಾಸಭಾ, ಹುಬ್ಬಳ್ಳಿ ಶರಣ-ಶರಣೆಯರಿಂದ ನಡೆಯಲಿದೆ. ಸಾಮೂಹಿಕ ಇಷ್ಟಲಿಂಗ ಪೂಜೆ ಮುಂಜಾನೆ 9ಗಂಟೆಗೆ ಪ್ರಾರಂಭಗೊಳ್ಳುವುದು.
ಬಸವ ಧರ್ಮಪೀಠ, ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿವೆ. ಪ್ರಸಾದ ದಾಸೋಹ ವ್ಯವಸ್ಥೆ ಇರುತ್ತದೆ ಎಂದು ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ರವಿಶಂಕರ, ಬಳ್ಳಾರಿ ತಿಳಿಸಿದ್ದಾರೆ.


