ಮಕ್ಕಳಿಗೆ ವಚನಗಳ ಪರಿಚಯ ಮಾಡಿಸುವುದು ನಮ್ಮ ಜವಾಬ್ದಾರಿ: ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ಶರಣರ ವಚನ ಅಧ್ಯಯನದ ಕೊರತೆಯಿಂದ ಇಂದಿನ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬಸವೇಶ್ವರ ದೇವಸ್ಥಾನ ಸಮಿತಿಯ ನವೀಕೃತ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಮತ್ತು ಯುವಕರಿಗೆ ವಚನ ಸಾಹಿತ್ಯ ಮಾರ್ಗದರ್ಶನ ನೀಡುವುದಲ್ಲದೆ, ಉತ್ತಮ ಜೀವನಕ್ಕೆ ದಾರಿದೀಪವಾಗಿದೆ. ಮಕ್ಕಳಿಗೆ ವಚನ ಆಶಯದ ದಾರಿ ತೋರಿಸುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಶಿವರಾತ್ರಿ ಕುರಿತು ಮಾತನಾಡಿದ ಸಚಿವರು, ಲಿಂಗಾಯತ ಸಮುದಾಯದವರು ಇಷ್ಟಲಿಂಗ ಪೂಜೆಯಿಂದ ನಿತ್ಯ ಶಿವರಾತ್ರಿ ಆಚರಿಸುತ್ತಾರೆ ಎಂದು ಹೇಳಿದರು.

ಇಷ್ಟಲಿಂಗವು ಮಾನವ ಜೀವನದಲ್ಲಿ ಶುದ್ಧಾಚಾರ, ಸಮಾನತೆ ಮತ್ತು ಕಾಯಕತತ್ವವನ್ನು ಬೋಧಿಸುವ ಸಂಕೇತವಾಗಿದೆ. ಲಿಂಗಪೂಜೆಯ ಆತ್ಮೀಯ ಮತ್ತು ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದ ಡಾ. ಚನ್ನವೀರ ಶಿವಾಚಾರ್ಯರು ಲಿಂಗಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ಶರಣು ಸಲಗರ, ಹುಲಸೂರಿನ ಡಾ. ಶಿವಾನಂದ ಸ್ವಾಮೀಜಿ, ಗೋರ್ಟಾದ ಪ್ರಭು ಸ್ವಾಮೀಜಿ, ಖೇರ್ಡಾದ ಶಿವಲಿಂಗ ಸ್ವಾಮೀಜಿ, ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಅಧ್ಯಕ್ಷ ಬಸವರಾಜ ಕೋರಕೆ, ಅನಿಲ ನರಗಟ್ಟೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ,  ಬಸವರಾಜ ತೋಂಡಾರೆ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *