ನಂಜನಗೂಡು
ಬಸವಣ್ಣನವರು ಪ್ರಶ್ನಿಸುತ್ತಿದ್ದ ರೀತಿ ವೈಧಿಕ ಸಂಪ್ರದಾಯಸ್ಥರಿಗೆ ಹಿಡಿಸಲಿಲ್ಲ. ಅವರು ಉತ್ತರಕೊಡಲು ಸಾಧ್ಯವಾಗದಿದ್ದಾಗ ಬಸವಣ್ಣನವರು ಮನೆತೋರೆದು ಕೂಡಲಸಂಗಮದತ್ತ ನಡೆದರು ಎಂದು ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ರವಿವಾರ ಹೇಳಿದರು.
ಪಟ್ಟಣದಲ್ಲಿ ‘ಬಸವಣ್ಣನವರ ಜೀವನ ದರ್ಶನ’ ಎಂಬ ವಿಚಾರವಾಗಿ ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು 30 ದಿನಗಳ ಪ್ರವಚನ ನೀಡುತ್ತಿದ್ದಾರೆ. ಫ.ಗು. ಹಳಕಟ್ಟಿನಗರದಲ್ಲಿ ನಾಲ್ಕನೇ ವರ್ಷದ ಬಸವ ಮಾಸ ಕಾರ್ಯಕ್ರದ ಅಂಗವಾಗಿ ಪ್ರವಚನ ನಡೆಯುತ್ತಿದೆ.

ಮೊದಲಿಗೆ ಬಸವ ಮಾಸ ಸಮಿತಿಯ ಅಧ್ಯಕ್ಷರಾದ ಆಯರಳ್ಳಿಯ ಪ್ರಭುಸ್ವಾಮಿ ದಂಪತಿಗಳು ಹಾಗು ಬಸವೇಶ್ವರಿ ಮಾತಾಜಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡಿ ದಿನದ ಕಾರ್ಯಕಮಕ್ಕೆ ಚಾಲನೆ ನೀಡಿದರು.
ಉಪನ್ಯಾಸಕರಾದ ಸನತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ವಕೀಲೆ ಮಾನಸ ಅವರಿಂದ ಪ್ರಾರ್ಥನೆ ಶ್ರೀಮತಿ ಜ್ಯೋತಿ ಸುರೇಶ್ ಅವರಿಂದ, ವಂಧನಾರ್ಪಣೆ ಕುಮಾರಿ ಐಶ್ವರ್ಯ ಅವರಿಂದ ನಡೆಯಿತು. ಕುಮಾರಿ ಕೀರ್ತನಾ ಆರೋಗ್ಯ ಮಾಹಿತಿ ನೀಡಿದರು.




