ಬೀದರ
ವಿಜಯೋತ್ಸವ 2025ರ ಅಂಗವಾಗಿ ಕರ್ನಾಟಕ ಮಾರುವಾಡಿ ಯುಥ್ ಫೆಡರೇಶನ್ ಹಾಗೂ ಎ.ಡಿ.ಡಿ. ಇನಿಶಿಯೇಟಿವ್ ಫೌಂಡೇಶನ್, ಬೆಂಗಳೂರು ಸಹಯೋಗದಲ್ಲಿ ಬೀದರ ಜಿಲ್ಲೆಯ ಸಾರ್ವಜನಿಕ ಬಂಧುಗಳಿಗೆ ಉಚಿತ ಕೃತಕ ಕಾಲು, ಕೈ ಜೋಡಣೆ ಶಿಬಿರವನ್ನು ಆಯೋಜಿಸಲಾಗಿದೆ.
ಆಸಕ್ತ ಫಲಾನುಭವಿಗಳು ಬೀದರ ನಗರದ ಶರಣ ಉದ್ಯಾನದಲ್ಲಿ ಸ್ವತಃ ಆಗಮಿಸಿ ತಮ್ಮ ಹೆಸರನ್ನು ದಿನಾಂಕ: 31-01-2025 ರೊಳಗಾಗಿ ನೊಂದಾಯಿಸಿಕೊಳ್ಳಬಹುದಾಗಿದೆ. ಸದರಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾ. ಆಶಾ ಪ್ರಭಾ 8095588466 ಇವರಿಗೆ ಕರೆ ಮಾಡಿ ವಿಷಯ ತಿಳಿದುಕೊಳ್ಳಬಹುದು ಎಂದು ಬೀದರ ಬಸವಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ
ಪೂಜ್ಯ ಡಾ. ಅಕ್ಕ ಗಂಗಾಂಬಿಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ವಚನ ವಿಜಯೋತ್ಸವ ಫೆಬ್ರುವರಿ 10 ರಿಂದ 12 ರವರೆಗೆ ಬಸವಗಿರಿಯಲ್ಲಿ ಆಯೋಜಿಸಲಾಗುತ್ತಿದೆ. ಈ ವಚನ ವಿಜಯೋತ್ಸವದಲ್ಲಿ ನಾಡಿನ ಪ್ರಗತಿಪರ ಚಿಂತಕರು, ಪೂಜ್ಯರು, ಕಲಾವಿದರು ಭಾಗವಹಿಸಲಿದ್ದಾರೆ.