ಕೊಪ್ಪಳ
ಪಟ್ಟಣದಲ್ಲಿ ರವಿವಾರ ನಡೆದ ಶಿವಶರಣ ಮಾದಾರ ಚನ್ನಯ್ಯ ಜಯಂತಿ ಆಚರಣೆ ಸಮಾರಂಭದಲ್ಲಿ “ವಚನ ಹೃದಯ – ವಚನಾಂಕಿತಗಳ ವೈಶಿಷ್ಟ್ಯತೆ ಮತ್ತು ವೈವಿಧ್ಯ – ಭಾಗ ಒಂದು” ಗ್ರಂಥ ಬಿಡುಗಡೆಯಾಯಿತು.
ಧಾರವಾಡ ತಾಲೂಕಿನ ಮನಗುಂಡಿಯ ಶ್ರೀ ಬಸವಾನಂದ ಸ್ವಾಮಿಗಳು ರಚಿಸಿರುವ ಪುಸ್ತಕವನ್ನು ಶರಣ ಸಾಹಿತಿ ಡಾ ಸಂಗಮೇಶ ಕಲಹಾಳ ಪರಿಚಯ ಮಾಡಿಕೊಟ್ಟರು.

‘ವಚನ ಹೃದಯ’ ಬಸವಾದಿ ಶರಣರ ವಚನಾಂಕಿತಗಳ ವೈಶಿಷ್ಟ್ಯತೆ ಮತ್ತು ವೈವಿಧ್ಯತೆಗಳನ್ನು ವಿಶ್ಲೇಷಿಸುವ ಗ್ರಂಥವಾಗಿದೆ. ಹೊರಗಣ್ಣಿನ ಕೊರತೆ ಮೆಟ್ಟಿನಿಂತು, ಒಳಗಣ್ಣಿನ ಅಸಾಧಾರಣ ಸಾಮರ್ಥ್ಯ ಬಳಸಿಕೊಂಡ ಸಾಧಕರು ನಮ್ಮ ಬಸವಾನಂದ ಸ್ವಾಮೀಜಿಯವರು. ಒಳಗಣ್ಣಿನ ಶಕ್ತಿ-ಸಾಮರ್ಥ್ಯ ಎಂತಹದು ಎಂಬುದಕ್ಕೆ ಅವರ “ವಚನ ಹೃದಯ ಗ್ರಂಥ” ರಚನೆಯೇ ಸಾಕ್ಷಿಯಾಗಿದೆ, ಎಂದು ಕಲಹಾಳ ಹೇಳಿದರು.

ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಗಾಣದ ಕಣ್ಣಪ್ಪ ಶಿವಾನುಭವ ಸಮಿತಿ ಇತ್ಯಾದಿ ಬಸವಪರ ಸಂಘಟನೆಗಳು ಗುರುಬಸವ ಮಹಾಮನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದವು.