ವಚನ ದರ್ಶನದ ಸದಾಶಿವ ಶ್ರೀಗೆ ಮಠದ ಬೆಂಬಲವಿಲ್ಲ: ಹಿರಿಯ ಶ್ರೀಗಳಿಂದ ನೇರ ಖಂಡನೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

‘ಕೈವಲ್ಯ ಶ್ರೀ ನಿಲುವು ನಮ್ಮ ಮಠದ ಪರಂಪರೆಗೆ ವಿರುದ್ಧವಾಗಿದೆ. ನಮ್ಮದು ಬಸವ ತತ್ವದ ಮಠ.’

ಗದಗ

ಸಂಘ ಪರಿವಾರದ ‘ವಚನ ದರ್ಶನ’ ಪುಸ್ತಕದ ಗೌರವ ಸಂಪಾದಕ ಕೈವಲ್ಯ ಸದಾಶಿವಾನಂದಸ್ವಾಮಿ ಅವರ ನಿಲುವು, ಅಭಿಪ್ರಾಯ ಅವರ ವೈಯಕ್ತಿಕ, ಅವುಗಳಿಗೆ ಮಠದ ಒಪ್ಪಿಗೆಯಿಲ್ಲ ಎಂದು ನಗರದ ಜಗದ್ಗುರು ಶಿವಾನಂದ ಮಠದ ಪೂಜ್ಯ ಅಭಿನವ ಶಿವಾನಂದ ಮಹಾಸ್ವಾಮಿಗಳು ರವಿವಾರ ಹೇಳಿದರು.

ಶ್ರೀ ಮಠದ ಪೀಠಾಧ್ಯಕ್ಷರಾಗಿರುವ ಶಿವಾನಂದ ಮಹಾಸ್ವಾಮಿಗಳು ಕೈವಲ್ಯ ಶ್ರೀಗಳ ಹಿರಿಯರು. ವಚನಗಳನ್ನು ತಿರುಚಿರುವ ‘ವಚನ ದರ್ಶನ’ ಪುಸ್ತಕವನ್ನು ಸಮರ್ಥಿಸಿಕೊಳ್ಳುವ ‘ಲಿಂಗಾಯತ ಧ್ವನಿಯಾಗಿ’ ಕೈವಲ್ಯ ಶ್ರೀ ಸಂಘ ಪರಿವಾರದ ಮಾಧ್ಯಮಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

‘ವಚನ ದರ್ಶನಕ್ಕೆ’ ಪ್ರತಿಯಾಗಿ ಬಂದಿರುವ ‘ವಚನದರ್ಶನ – ಮಿಥ್ಯ V/S ಸತ್ಯ’ ಗ್ರಂಥ ಬಿಡುಗಡೆಯ ಸಮಾರಂಭದಲ್ಲಿ ಷಟಸ್ಥಲ ಧ್ವಜಾರೋಹಣ ಮಾಡಿ ಅಭಿನವ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು.

ಬಸವತತ್ವಕ್ಕೆ ವ್ಯತಿರಿಕ್ತವಾಗಿರುವ ಕೈವಲ್ಯ ಶ್ರೀಗಳ ಅಭಿಪ್ರಾಯ ಅವರ ವೈಯಕ್ತಿಕ ವಿಚಾರ. ಅದಕ್ಕೆ ನಮ್ಮ ಹಾಗೂ ನಮ್ಮ ಶಿವಾನಂದ ಮಠದ ಒಪ್ಪಿಗೆ ಇಲ್ಲ. ನಮ್ಮ ಮಠದ ಪರಂಪರೆಯೂ ಅದಲ್ಲ, ಅವರ ವಿಚಾರಗಳನ್ನು ನಾವು ಖಂಡಿಸುತ್ತೇವೆ ಎಂದು ಅಭಿನವ ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ಶಿವಾನಂದ ಮಠದ ಪರಂಪರೆಯಲ್ಲಿ ಜಾತಿ ನೋಡದೆ ಲಿಂಗಧಾರಣೆ ಮಾಡಿದ್ದೇವೆ. ಕುರುಬ ಜನಾಂಗ, ತಳವಾರ ಜನಾಂಗದವರನ್ನು ನಮ್ಮ ಮಠಕ್ಕೆ ಪೀಠಾಧಿಕಾರಿಗಳನ್ನಾಗಿ ಮಾಡಿದ್ದು ಇದೆ. ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಹಿರಿಯ ಶಿವಾನಂದ ಸ್ವಾಮಿಗಳ ಆಶೀರ್ವಚನ ಕೇಳಿ ಮುಸ್ಲಿಂ ವ್ಮಕ್ತಿಯೊಬ್ಬ ಲಿಂಗದೀಕ್ಷೆ ಪಡೆದುಕೊಂಡು, ರೋಣದ ಮಠಕ್ಕೆ ನೇಮಕವಾಗಿದ್ದರು. ಅವರೀಗ ಲಿಂಗೈಕ್ಯರಾಗಿದ್ದಾರೆ ಎಂದರು.

ಸಮಾನತೆಯ ಶ್ರೇಷ್ಠ ವಿಚಾರ ಬಸವಣ್ಣನವರದಾಗಿತ್ತು. ಎಲ್ಲರಿಗೂ ಅವರು ಬೆಲ್ಲದಂಗೆ ಬೇಕಾಗಿದ್ದರು. ಅವರದು ತ್ಯಾಗ, ಕ್ರಾಂತಿಯ ವಿಚಾರವಾಗಿತ್ತು. ಹೀಗಾಗಿ ಅವರ ಹೆಸರು ಅಚ್ಚಳಿಯದೇ ಉಳಿದುಕೊಂಡಿದೆ.

ಜಾಗತಿಕ ಜಾಗೃತಿ ಉಂಟು ಮಾಡಿದವರಲ್ಲಿ ಅತ್ಯಂತ ಪ್ರಮುಖರು ಬಸವಣ್ಣನವರು. ಜಾತಿ ಗುಂಗೇ ಅವರಲ್ಲಿ ಇರಲಿಲ್ಲ. ಎಲ್ಲರನ್ನೂ ಒಂದು ಎಂದವರು. ಅದರಂತೆ ಆಚರಣೆ ಮಾಡಿ ತೋರಿಸಿದವರು ಹೀಗಾಗಿ ಬಸವಣ್ಣನವರ ಹೆಸರು ಅಜರಾಮರವಾಗಿದೆ ಎಂದು ಎಂದು ಶಿವಾನಂದ ಸ್ವಾಮೀಜಿ ಹೇಳಿದರು.

ಈಗ ಬಿಡುಗಡೆಯಾಗಿರುವ ವಚನ ದರ್ಶನ ಮಿಥ್ಯ- ಸತ್ಯ ಪುಸ್ತಕವನ್ನು ಎಲ್ಲರೂ ಓದಬೇಕು. ಲಿಂಗಾಯತ ಧರ್ಮದಲ್ಲಿ ಎಲ್ಲರೂ ಸಂಘಟಿತರಾಗಬೇಕು. ಬಸವ ತತ್ವ ಆಚರಣೆಗೆ ಮುಂದಾಗಬೇಕೆಂದು ಹೇಳಿದರು.

‘ಮಿಥ್ಯ ಸತ್ಯ’ ಜಾಗತಿಕ ಲಿಂಗಾಯತ ಮಹಾಸಭಾ, ಅ.ಭಾ. ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಕಾಯಕ ಶರಣರ ಸಮುದಾಯ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಬಸವದಳ, ಬಸವ ಕೇಂದ್ರ, ಬುದ್ಧ ಬಸವ ಅಂಬೇಡ್ಕರ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಲೋಕಾರ್ಪಣೆಯಾಯಿತು.

ಗ್ರಂಥ ಪರಿಚಯವನ್ನು ಜಾ.ಲಿಂ. ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಮಾಡಿಕೊಟ್ಟರು.

ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜ ಯೋಗೀಂದ್ರ ಮಹಾಸ್ವಾಮೀಜಿ ಮಾತನಾಡಿದರು.

ಸಾನಿಧ್ಯವನ್ನು ಬೆಟಗೇರಿ ಕುರುಹಿನಶೆಟ್ಟಿ ಮಠಾಧೀಶರಾದ ಪೂಜ್ಯ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ, ಕಪ್ಪತಗುಡ್ಡ ನಂದಿವೇರಿಮಠದ ಪೂಜ್ಯ ಶಿವಕುಮಾರ ಸ್ವಾಮೀಜಿ, ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಹಾಂತೇಶ ಪಾಟೀಲ ಮಾತನಾಡಿದರು.

ಶರಣಬಸಪ್ಪ ಗುಡಿಮನಿ, ಡಾ. ಧನೇಶ ದೇಸಾಯಿ, ಬಾಲಚಂದ್ರ ಭರಮಗೌಡರ, ಶ್ರೀದೇವಿ ಶೆಟ್ಟರ, ವಿಜಯಲಕ್ಷ್ಮಿ ಮಾನ್ವಿ ವೇದಿಕೆ ಮೇಲಿದ್ದರು.

ಬಸವದಳ, ಲಿಂಗಾಯತ ಮಹಾಸಭಾದ ಶರಣ-ಶರಣೆಯರು ಧ್ವಜಗೀತೆ, ಪ್ರಾರ್ಥನೆ ಗೀತೆ, ವಚನ ಮಂಗಲ ಹಾಡಿದರು. ಆರಂಭದಲ್ಲಿ ಸಂವಿಧಾನ ಪೀಠಿಕೆಯ ಪ್ರಮಾಣವಚನ ಎಲ್ಲರೂ ಸ್ವೀಕರಿಸಿದರು. ಗೌರಕ್ಕ ಬಡಿಗಣ್ಣವರ ಬೋಧಿಸಿದರು.

ಪ್ರಾಸ್ತಾವಿಕವಾಗಿ ಮಾತಾಡಿ, ಸ್ವಾಗತ ಮಾಡಿದವರು ಜೆ.ಎಲ್.ಎಂ. ಜಿಲ್ಲಾಧ್ಯಕ್ಷ ಕೆ.ಎಸ್. ಚಟ್ಟಿ. ಕಾರ್ಯಕ್ರಮ ನಿರ್ವಹಣೆ ಶಿವಣ್ಣ ಮುಗದ, ವಂದನಾರ್ಪಣೆಯನ್ನು ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಮಾಡಿದರು.

ಲಿಂಗಾಯತ ವಿವಿಧ ಕಾಯಕ, ಪಂಗಡಗಳ ಮುಖ್ಯಸ್ಥರಾದ ಫಕೀರಪ್ಪ ಹೆಬಸೂರ, ಕೆ.ಎ. ಬಳಿಗೇರ, ಪ್ರಕಾಶ ಘೋಡಕೆ, ಮಹೇಶ ಮಡಿವಾಳರ, ಜೆ.ಡಿ. ಗಾರವಾಡ, ಎಸ್.ಎನ್. ಬಳ್ಳಾರಿ, ಟಿ. ವೈ. ಹಡಪದ, ಆಂಜನೇಯ ಕಟಗಿ, ಸುರೇಶ ಕಟ್ಟಿಮನಿ, ಕುಬೇರ ಗುಡದಳ್ಳಿ, ದಶರಥ ಕೊಳ್ಳಿ, ಶಿವಕುಮಾರ ಪಾಟೀಲ, ಶಿವಮೂರ್ತೆಪ್ಪ ಅಗಸಿಮನಿ, ಬಸವರಾಜ ಬಿಂಗಿ, ಅನಿಲ ಪಾಟೀಲ, ವೀರೇಶ ಮುನವಳ್ಳಿ, ಶಿವಾನಂದ ಚಕ್ರಸಾಲಿ, ಸುಧಾ ಹುಚ್ಚಣ್ಣವರ, ಜಯಶ್ರೀ ಹುಬ್ಬಳ್ಳಿ, ಶಾಂತಾ ತುಪ್ಪದ, ಸುರೇಶಬಾಬು ನಾರಾಯಣಪುರ ಮತ್ತಿತರರು ವೇದಿಕೆಯಲ್ಲಿ ಆಸೀನರಾಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
7 Comments
  • ಬಸವ ತತ್ವವನ್ನು ಗಟ್ಟಿ ಧ್ವನಿಯಲ್ಲಿ ಹೇಳಿದ ತಮಗೆ ಶರಣು ಶರಣಾರ್ಥಿ

  • ಇದು ಮಠದ ಅಭಿಪ್ರಾಯ ಅಲ್ಲ ಅಂದ ಮೇಲೆ, ಲಿಂಗಾಯತ ಧರ್ಮ ವಿರೋಧಿ, ಮಠದ ತತ್ವದ ವಿರುದ್ಧ ನಿಲುವು ಹೊಂದಿರುವ ಸ್ವಾಮಿಗಳಿಗೆ ಮಠದಿಂದ ಹೊರಗೆ ಹಾಕಬೇಕು ಅಲ್ಲವೇ?

  • ಮತ್ತ ಅಲೆನ್ ಮಾಡಾಕ್ಕ ಆ ಸ್ವಾಮಿ ಆದಾನು? ಹೊರಗೆ ದಬ್ಬಬಾಬರದೆ?..😅

  • ವಚನಧರ್ಶನ ಪರವಾಗಿ ಮಾತನಾಡಿದ ಸ್ವಾಮಿಗಳನ್ನು ಮಠ್ ದಿಂದ ಹೊರಗೆ ಹಾಕಿ

  • ಬಸವಧರ್ಮ / ಲಿಂಗಾಯತ ಧರ್ಮ ಮೂಢನಂಬಿಕಗೆ ಹೊರತಾದ ಚಾತುರ್ವರ್ಣಕ್ಕೆ ಹೊರತಾದ ದೇವಾಲಯಕ್ಕೆ ಹೊರತಾದ ಹುಟ್ಟು ಸಾವು ಇರುವ ದೈವಕ್ಕೆ ಹೊರತಾದ ಸಕಲ ಪ್ರಾಣಿಗಳವಧೆಗೆ ಹೊರತಾದ ಮೃತದೇಹವನ್ನು ದಹಿಸುವ ಕ್ರಿಯೆಗೆ ಹೊರತಾದ ಅಲ್ಲದೆ ಪ್ರಕೃತಿಯ ಸಹಜ ಕ್ರಿಯೆಯಂತೆ ಹೂಳುವ, ಹುಟ್ಟಿನಿಂದ ಜಾತಿ ಧರ್ಮ ನಿರ್ಧರಿಸದ, ಮನುಕುಲವನ್ನು ದ್ವೇಶಿಸದ, ಯುದ್ಧಕ್ಕೆ ಪ್ರಚೋದಿಸದ, ಕಾಯಕವನ್ನು ಉಚ್ಚ ನೀಚ ಎಂದು ಪರಿಗಣಿಸದೆ ಗೌರವಿಸುವ, ವರ್ಗ,ವರ್ಣ ಲಿಂಗ ಭೇದ ಮಾಡದ ವೈಜ್ಞಾನಿಕ ತಳಹದಿಯ ಮೇಲೆ ಕಟ್ಟಲಾದ ಧರ್ಮ.

  • ಕೖವಲ್ಯ ಸದಾಶಿವಸ್ವಾಮಿಗೆ ಭೇಟಿಯಾಗಿ ಅವರ ಈ ನಡವಳಿಕೆಗಳನ್ನು ಖಂಡಿಸಿ, ಸಂಘಿಗಳ ಮೋಸದಾಟಕ್ಕೆ ತನ್ನ್ಬಬಳಸಿಕೊಂಡುದಕ್ಕಾಗಿ, ಅದರ ಮುಖ್ಯ ಕುತಂತ್ರಿ ಬಿ ಎಲ್ ಸಂತೋಷ ಎನ್ನುವ ಸಂಘಿ ಗೋಮುಖವ್ಯಾಘ್ರನಿಗೆ ಧಿಕ್ಕಾರ್ ಹೇಳುವಂತೆ ಮಾಡಿ, ಒಂದು ಪ್ರತಿಭಟನೆಪತ್ರವನ್ನು ರವಾನಿಸಬೇಕು.

Leave a Reply

Your email address will not be published. Required fields are marked *