ನಿಜಾಚರಣೆ ವಿವಾಹ ನಡೆಸಿಕೊಟ್ಟ ಪೂಜ್ಯ ನಿಜಗುಣಾನಂದ ಶ್ರೀ
ಚೆನ್ನಮ್ಮನ ಕಿತ್ತೂರು:
ಅಲ್ಲೊಂದು ಮದುವೆ ಅಲ್ಲಿ ಮಂತ್ರಘೋಷಗಳಿರಲಿಲ್ಲ ಬದಲಿಗೆ ಬಸವಾದಿ ಶರಣರ ವಚನಗಳ ಪಠಣವಿತ್ತು. ಪರಂಪರಾಗತ ಸಾಂಪ್ರದಾಯಿಕ ಆಚರಣೆಗಳಿರಲಿಲ್ಲ, ಬದಲಿಗೆ ಮನಸ್ಸುಗಳ ಬೆಸೆಯುವ ಶರಣರ ಸಾಂಪ್ರದಾಯಿಕ ಆಚರಣೆಗಳಿದ್ದವು.
ಅಲ್ಲಿ ಪುರೋಹಿತರಿರಲಿಲ್ಲ, ಬದಲಿಗೆ ವಚನ ಬೋಧನೆಗೆ ನಾಡಿನ ಪ್ರಗತಿಪರ, ವೈಚಾರಿಕ ಚಿಂತಕರಾದ ನಿಜಗುಣಾನಂದ ಮಹಾಸ್ವಾಮಿಗಳು ವಚನ ಮಾಂಗಲ್ಯ ನಡೆಸಿಕೊಟ್ಟರು.

ಕಲ್ಯಾಣ ಮಂಟಪದ ಸ್ವಾಗತಕ್ಕೆ ಸಾಮಾನ್ಯವಾಗಿ ಇರುವಂತೆ ಗಣೇಶ ವಿಗ್ರಹ ಇರಲಿಲ್ಲ. ಬದಲಿಗೆ ಈ ದೇಶದ ಸಮಗ್ರತೆ, ಐಕ್ಯತೆ ಪ್ರಗತಿಯ ಪ್ರತೀಕವಾದ ಸಂವಿಧಾನ ಪೀಠಿಕೆ ಇಡಲಾಗಿತ್ತು. ಇತರೆ ಮದುವೆ ರೀತಿಯ ಮ್ಯೂಸಿಕ್ ಬ್ಯಾಂಡ ಅಲ್ಲಿರಲಿಲ್ಲ. ಬದಲಿಗೆ ವಚನ ಗಾಯನ ಇತ್ತು.
ಸಂವಿಧಾನ ಪೀಠಿಕೆ ಓದುವ ಮೂಲಕ ಪರಸ್ಪರ ನವದಂಪತಿಗಳಾದ ‘ಮಹಾಂತೇಶ’ ಮತ್ತು ‘ಆರತಿ’ ಅವರ ಮದುವೆ ಅರ್ಥಪೂರ್ಣ.
ಅರೇ ಇದೇನಿದು ಅಂತೀರಾ?

ಹೌದು ಇಂಥದ್ದೊಂದು ವಿಭಿನ್ನ ಮಾದರಿಯ ವಚನ ಮಾಂಗಲ್ಯ ನಡೆದಿದ್ದು ಅಂಬಡಗಟ್ಟಿ ಊರಿನ ಕಲ್ಯಾಣ ಮಂಟಪದಲ್ಲಿ. ಚೆನ್ನಮ್ಮನ ಕಿತ್ತೂರು ಸಮೀಪದ ಕಡತನಾಳ ಗ್ರಾಮದ ಡಾ. ಮಹಾಂತೇಶ ಮತ್ತು ಡಾ. ಆರತಿ ಈ ರೀತಿ ವಿಭಿನ್ನವಾಗಿ ಮದುವೆ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಆಗಿದ್ದಾರೆ.
ಸಂವಿಧಾನ ಪೀಠಿಕೆಯನ್ನು ಮುದ್ರಿಸಿದ ಇಪ್ಪತ್ತಾರು ಪುಟಗಳ ‘ವಚನ ಮಾಂಗಲ್ಯ’ ಆಮಂತ್ರಣ ಪತ್ರಿಕೆಯು ನಾಡಿನಾದ್ಯಂತ ಪ್ರಗತಿಪರರ ಗಮನ ಸೆಳೆದಿದ್ದು ವಿಶೇಷ. ಪೂಜ್ಯ ನಿಜಗುಣಾನಂದ ಶ್ರೀಗಳು, ನಿಷ್ಕಲ ಮಂಟಪ ಬೈಲೂರು ಇವರ ನೇತೃತ್ವದಲ್ಲಿ ನಾಡಿನ ಹಲವು ಬಸವಪರ ಸ್ನೇಹಿತರ ಸಹಕಾರದೊಂದಿಗೆ ಜರುಗಿದ ಈ ವಿವಾಹ ಅರ್ಥಪೂರ್ಣವಾಗಿ ಜರುಗಿದೆ.

ಇಂಥದ್ದೊಂದು ಅರ್ಥಪೂರ್ಣ ವಚನ ಮಾಂಗಲ್ಯಕ್ಕೆ ಸಚಿವ ಸತೀಶ್ ಜಾರಕಿಹೊಳಿ, ನಾಯಕರಾದ ಬಿ.ಕೆ ಹರಿಪ್ರಸಾದ್ ದಂಪತಿ, ಶಾಸಕರಾದ ಆಸೀಫ ಸೇಠ್, ಶಾಸಕ ವಿಜಯಾನಂದ ಕಾಶಪ್ಪನವರ, ಬಾಬಾಸಾಹೇಬ ಪಾಟೀಲ, ಮಲ್ಲಿಕಾ ಘಂಟಿ, ಡಾ ಜೆ.ಎಸ್. ಪಾಟೀಲ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು, ನಾಡಿನ ಹಲವಾರು ಪ್ರಗತಿಪರ ಚಿಂತಕರು, ಸಾಹಿತಿಗಳು, ಸಂಘ ಸಂಸ್ಥೆಗಳ ಮುಖಂಡರು, ಪ್ರಾಧ್ಯಾಪಕರು ಹಾಜರಾಗಿ ವಿಭಿನ್ನ ಮಾದರಿಯ ವಚನ ಮಾಂಗಲ್ಯವನ್ನು ಶ್ಲಾಘಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ.

ಓರ್ವ ಪ್ರಾಥಮಿಕ ಶಾಲಾ ಶಿಕ್ಷಕರ ಸುಪುತ್ರ ಮಹಾಂತೇಶ ಕಂಬಾರ ಮನೋವಿಜ್ಞಾನ ವಿಷಯದಲ್ಲಿ ಪಿಎಚ್ಡಿ ಮಾಡಿದ್ದು ಎಂ.ಎಸ್.ಸಿ. ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಇವರ ಪತ್ನಿ ಆರತಿ ಕೂಡ ಎಂ.ಎ ಪಿ.ಎಚ್.ಡಿ. ವ್ಯಾಸಂಗ ಮಾಡಿದ್ದು ವಚನಮಾಂಗಲ್ಯದ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟ ಇವರಿಗೆ ನೀವೂ ಬೆಸ್ಟ್ ಆಫ್ ಲಕ್ ಹೇಳಿರಿ.

ವಚನ ಮಾಂಗಲ್ಯದ ಮೂಲಕ ನವ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳಿಗೆ ಶುಭಾಶಯಗಳು 💐💐🙏🙏
💐
🙏🙏
ಅರಿವು ಆಚಾರವುಳ್ಳ ಜ್ಞಾನಿಗಳು ಇ ರೀತಿ ಜಗದಗಲ ಮುಗಿಲಗಲ ಸಮಸಮಾಜ ಸುಖಿಸಿಮಾಜ ತತ್ವವುಳ್ಳ
ಬಸವ ಧರ್ಮ ಆಚರಣೆಯಂತೆ ಕಲ್ಯಾಣ ಮಾಡಿಕೊಂಡ
ನವದಂಪತಿಗಳಿಗೆ ಕಲ್ಯಾಣವಾಗಲೆಂದು ಬಸವಣ್ಣನಲ್ಲಿ ಪ್ರಾರ್ಥಿಸುವೆ 🙏🙏
ಶರಣ ಶರಣೆಯರ ವಿವಾಹದ ಶುಭಾಷಯಗಳು
ವಿವಾಹದ ಶುಭಾಶಯಗಳು
Congratulations to couple, meaningful ritual , 26 pages wedding card with constitutional values is meaningful , I believe such weddings will inspire many to follow the Basava philosiphy and live by constitutional values.
ವಿವಾಹದ ಶುಭಾಶಯಗಳು