ಬೆಳಗಾವಿ:
ಜಾಗತಿಕ ಲಿಂಗಾಯತ ಮಹಾಸಭಾ ಮಹಾನಗರ ಹಾಗೂ ತಾಲೂಕ ಘಟಕಗಳ ಸಂಯುಕ್ತಾಶ್ರಯದಲ್ಲಿ ರವಿವಾರ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ ನಡೆಯಿತು.

ಶ್ರೀ ಸಿದ್ಧರಾಮೇಶ್ವರ ಪ್ರೌಢಶಾಲೆಯಲ್ಲಿ ನಡೆದು, ನಗರ ಹಾಗೂ ತಾಲೂಕಿನ 42 ಶಾಲೆಗಳಿಂದ 80 ವಿದ್ಯಾರ್ಥಿಗಳು, 20 ಯುವಕ-ಯುವತಿಯರು ಹಾಗೂ ಹಿರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದರು.

ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಗಳ ಕಂಠಪಾಠದಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ವಚನಗಳು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುತ್ತ ಮಾನವನ ವ್ಯಕ್ತಿತ್ವಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ಪ್ರಾರಂಭದಲ್ಲಿ ಹಿರಿಯ ಉಪಾಧ್ಯಕ್ಷ ಮೋಹನ ಗುಂಡ್ಲೂರ ವಚನ ಪ್ರಾರ್ಥನೆ ಮಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ.ಬೂದಿಹಾಳ ಅವರು ಪ್ರಾಸ್ತಾವಿಕ ಮಾತನಾಡಿ, ಸರ್ವರನ್ನೂ ಸ್ವಾಗತಿಸಿದರು.
ಸಂಚಾರಿ ಗುರು ಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ಅವರು ಸ್ಪರ್ಧೆಯ ನಿಯಮಗಳನ್ನು ಹಾಗೂ ನಿರ್ಣಾಯಕರ ಕರ್ತವ್ಯಗಳನ್ನು ವಿವರಿಸಿದರು.

ವೇದಿಕೆಯ ಮೇಲೆ ಮಹಾನಗರ ಘಟಕದ ಅಧ್ಯಕ್ಷ ಎಸ್.ಜಿ.ಸಿದ್ನಾಳ, ತಾಲೂಕ ಘಟಕದ ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಎಂ.ಎಂ.ಬಾಳಿ, ರಾಜಶೇಖರ ಪಾಟೀಲ, ಮಹಾನಂದಾ ಪರುಶೆಟ್ಟಿ ಇದ್ದರು.
ಡಾ. ಅಡಿವೆಪ್ಪ ಇಟಗಿ ಕಾರ್ಯಕ್ರಮ ನಿರೂಪಿಸಿದರು.
ನಿರ್ಣಾಯಕರಾಗಿ ನಗರ ಹಾಗೂ ತಾಲೂಕ ಘಟಕಗಳ ಪದಾಧಿಕಾರಿಗಳಾದ ಆನಂದ ಕೊಂಡಗುರಿ, ಎಫ್.ಆರ್.ಪಾಟೀಲ, ಈರಣ್ಣ ಚಿನಗುಡಿ, ಸಿದ್ಧರಾಮ ಸಾವಳಗಿ, ಪ್ರವೀಣಕುಮಾರ ಚಿಕಲಿ, ಎನ್.ಎಫ್. ಉಪ್ಪಿನ, ಶೋಭಾ ಶಿವಳ್ಳಿ, ಪ್ರೀತಿ ಮಠದ, ರಾಜಶ್ರೀ ಬೆಣಚನಮರಡಿ, ಭಾರತಿ ರಾಮಗುರವಾಡಿ, ನೇತ್ರಾವತಿ ರಾಮಾಪುರಿ, ಕೆಂಪಣ್ಣ ರಾಮಾಪುರಿ, ಲಾಳಸಂಗಿ, ಬಸವರಾಜ ಮತ್ತಿಕೊಪ್ಪ, ಶ್ರೀಮತಿ ಹುಬ್ಬಳ್ಳಿ, ಸಾವಕ್ಕ ಉಪ್ಪಿನ, ಮಹಾದೇವಿ ಬೂದಿಹಾಳ ಹಾಗೂ ಶಿಕ್ಷಕರು ಕಾರ್ಯನಿರ್ವಹಿಸಿದರು.

ವಚನ ಕಂಠಪಾಠ ಸ್ಪರ್ಧಯಲ್ಲಿ ಖುಷಿ ಅನಿಲಕುಮಾರ ಹಿರೇಮಠ 218 ವಚನಗಳು ಪ್ರಥಮ ಸ್ಥಾನ, ಸಂಕೇತ ಮೇಟಿ 174 ವಚನಗಳು ದ್ವಿತೀಯ, ಲಾವಣ್ಯ ಜಗಜಂಪಿ 113 ವಚನಗಳು ಹೇಳಿ ತೃತೀಯ ಸ್ಥಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಯಿತು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
