ಕಂಠಪಾಠ ಸ್ಪರ್ಧೆ: ಅತಿ ಹೆಚ್ಚು ವಚನ ಹೇಳಿದವರಿಗೆ 20 ಸಾವಿರ ರೂ ಬಹುಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಕಲ್ಯಾಣ

ಮಕ್ಕಳಲ್ಲಿ ವಚನ ಪ್ರಜ್ಞೆ ಬೆಳೆಸಲು ನವಂಬರ್ 17ರಂದು ಬೆಳಿಗ್ಗೆ 10ಗಂಟೆಗೆ ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ರಾಜ್ಯಮಟ್ಟದ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅನುಭವ ಮಂಟಪ ಬಸವಕಲ್ಯಾಣ ಅಧ್ಯಕ್ಷರು ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಸುದ್ದಿಘೋಷ್ಠಿಯಲ್ಲಿ ಬುಧವಾರ ಹೇಳಿದರು.

ಅತಿ ಹೆಚ್ಚು ವಚನ ಹೇಳಿದ ಸ್ಪರ್ದಾಳುಗಳಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಹಾಗೂ ದ್ವಿತೀಯ ಬಹುಮಾನ 15 ಸಾವಿರ ರೂಪಾಯಿ ಮತ್ತು ತೃತೀಯ ಬಹುಮಾನ 10 ಸಾವಿರ ರೂಪಾಯಿ ನೀಡಿ ಪ್ರೋತ್ಸಾಹಿಸಿ ಗೌರವಿಸಲಾಗುವುದು.

ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳು, ಮಹಿಳೆಯರು, ಪುರುಷರು, ವಿದ್ಯಾರ್ಥಿಗಳು ಭಾಗಿಯಾಗಬೇಕು, ಸ್ಪರ್ಧೆಯಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ ಎಂದು ಪೂಜ್ಯ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಗುರುನಾಥ ಗಡ್ಡೆ, ಸಚಿನ್ ಕೋಟೆ, ಗಂಗಾಧರ, ಕಲ್ಯಾಣರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅನುಭವ ಮಂಟಪ ಉತ್ಸವದ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ.

ಬಹುಮಾನಗಳು

ಸ್ಪರ್ಧೆಯು ಪ್ರಥಮ ಬಹುಮಾನ 20 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 15 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 10 ಸಾವಿರ ರೂಪಾಯಿ ಒಳಗೊಂಡಿದೆ.

ಸ್ಪರ್ಧೆಯ ನಿಯಮಗಳು

1) ಬಸವಣ್ಣನವರ ವಚನಗಳು ಮಾತ್ರ ಹೇಳಬೇಕು. ವಚನ ಪೂರ್ತಿಯಾಗಿ ಹೇಳಬೇಕು.

2) ಎಲ್ಲರಿಗೂ ಉಚಿತ ಪ್ರವೇಶ ಉಂಟು.

3) ವಸತಿ ಮತ್ತು ಪ್ರಸಾದ ವ್ಯವಸ್ಥೆ ಉಚಿತವಾಗಿ ಒದಗಿಸಲಾಗುವುದು.

4) ತಾವು ಹೇಳುವ ವಚನಗಳನ್ನು ದಾಖಲಿಸಿದ ನೋಟ್ ಬುಕ್ ಸಿದ್ಧಪಡಿಸಿಕೊಂಡು ಬರಬೇಕು.

5) ವಚನ ನೆನಪಿಸಿಕೊಳ್ಳಲು ಮಧ್ಯದಲ್ಲಿ 30 ಸೆಕೆಂಡು ಮಾತ್ರ ಕಾಲಾವಕಾಶ ಇರುತ್ತದೆ.

6) ಹಿಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ ವಿಜೇತರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

7) ವಯಸ್ಸಿನ ನಿರ್ಬಂಧ ಇರುವುದಿಲ್ಲ. ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಭಾಗವಹಿಸಬಹುದು.

8) ರಾಜ್ಯಮಟ್ಟದ ಸ್ಪರ್ಧೆ ಇದಾಗಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಯವರು ಭಾಗವಹಿಸಬಹುದು.

9) ತೀರ್ಪುಗಾರರ ನಿರ್ಣಯವೇ ಅಂತಿಮ ನಿರ್ಣಯವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಪೂಜ್ಯ ಶಿವಾನಂದ ಸ್ವಾಮಿಗಳು
89719 48583,

ಪೂಜ್ಯ ಸತ್ಯಕ್ಕತಾಯಿ 98806 22770,

ಶರಣ ಬಾಬು ಬೆಲ್ದಾಳ 98807 68662
ಮೊಬೈಲ್ ಸಂಖ್ಯೆಗಳ ಮೂಲಕ ಇವರನ್ನು ಸಂಪರ್ಕಿಸಬಹುದು.

Share This Article
Leave a comment

Leave a Reply

Your email address will not be published. Required fields are marked *