ಲಿಂಗಾಯತ ಧರ್ಮದ ಬಗ್ಗೆ ನಾನು ಹೇಳಿದ ಮಾತು ತಿರುಚಲಾಗಿದೆ: ಶಂಕರ ಬಿದರಿ

ಎಂ. ಎ. ಅರುಣ್
ಎಂ. ಎ. ಅರುಣ್

ಬೆಂಗಳೂರು

ಜಾತಿ ಗಣತಿಯನ್ನು ವಿರೋಧಿಸಿ ವೀರಶೈವ ಮಹಾಸಭಾ ನಡೆಸಿದ ಅಕ್ಟೋಬರ್ 22ರ ಸಭೆ ರಾಜ್ಯಾದ್ಯಂತ ಸುದ್ದಿ ಮಾಡಿತು. ಸಿದ್ದರಾಮಯ್ಯ ಸರಕಾರದ ನಾಲ್ಕು ಸಚಿವರು, ಎಲ್ಲಾ ಪಕ್ಷಗಳ 55ಕ್ಕೂ ಹೆಚ್ಚು ಶಾಸಕರು ಜಾತಿ ಗಣತಿಯನ್ನು ವಿರೋಧಿಸುವ ನಿರ್ಣಯಕ್ಕೆ ಸಹಿ ಹಾಕಿದರು.

ಸಭೆಯಲ್ಲಿ ಅಷ್ಟೇ ಗಮನ ಸೆಳೆದ ಮತ್ತೊಂದು ಬೆಳವಣಿಗೆಯೆಂದರೆ ಕೆಲವು ಮಾಧ್ಯಮಗಳ ಪ್ರಕಾರ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿಯವರು ನೀಡಿದ ಒಂದು ಹೇಳಿಕೆ.

“ಲಿಂಗಾಯತ ಅನ್ನುವುದು ಒಂದು ಪಂಥ. ನಾವು ಈಗ ಪ್ರತ್ಯೇಕ‌ ಧರ್ಮ ಅಂತ ಹೇಳಲ್ಲ,” ಎಂದು ಶಂಕರ ಬಿದರಿ ಭಾಷಣ ಮಾಡಿದರು ಎಂದು ಸುವರ್ಣ ನ್ಯೂಸ್, ನ್ಯೂಸ್ 18 ವರದಿ ಮಾಡಿದವು.

ಈ ವರದಿಗಳನ್ನು ಮತ್ತಷ್ಟು ಮಾಧ್ಯಮಗಳು ಬಳಸಿಕೊಂಡವು. ಲಿಂಗಾಯತ ಧರ್ಮದ ಹೋರಾಟವನ್ನು ವಿರೋಧಿಸುವ ವಾಟ್ಸ್ ಆಪ್ ಗುಂಪುಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅದು ದೊಡ್ಡದಾಗಿ ವೈರಲ್ ಕೂಡ ಆಯಿತು. ಕೆಲವು ಲಿಂಗಾಯತ ಸಂಘಟನೆಗಳು ಮತ್ತು ಸ್ವಾಮೀಜಿಗಳು ಈ ಹೇಳಿಕೆ ತೀವ್ರವಾಗಿ ಖಂಡಿಸಿ ಪ್ರತಿಭಟನೆಗೂ ಮುಂದಾದರು.

ಬಸವ ಮೀಡಿಯಾದ ಜೊತೆ ಮಾತನಾಡುತ್ತ ಶಂಕರ ಬಿದರಿಯವರು ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದರು.

‘ನಾನು ಹೇಳಿದ ಮಾತು ತಿರುಚಲಾಗಿದೆ. ಯಾವ ಮಾಧ್ಯಮಗಳಲ್ಲಿ ಇದು ವರದಿಯಾಯಿತು, ಅವು ಯಾವ ಸಂಘಟನೆಗೆ ಸೇರಿದ ಮಾಧ್ಯಮಗಳು ಎಂದು ಗಮನಿಸಬೇಕು. ಎಲ್ಲಾ ಪ್ರಬುದ್ಧವಾಗಿ ಯೋಚಿಸಬೇಕು,’ ಎಂದರು.

‘ನಮ್ಮ ಧರ್ಮದ ಬೇಡಿಕೆಗೆ ಇನ್ನೂ ಸರಕಾರದ ಒಪ್ಪಿಗೆ ಸಿಕ್ಕಿಲ್ಲ. ಸ್ವತಂತ್ರ ಧರ್ಮದ ಬಗ್ಗೆ ಅಧಿಕೃತ ಸರಕಾರಿ ಆದೇಶ ಬರುವವರೆಗೂ ನಾವು ಪ್ರತ್ಯೇಕ ಧರ್ಮ ಎಂದು ಗಣತಿಗಳಲ್ಲಿ ಹೇಳಲು ಆಗುವುದಿಲ್ಲ.

ನಾನು ಭಾಷಣದಲ್ಲಿ ಹೇಳಿದ್ದು “ನಾವು ಈಗ ಲಿಂಗಾಯತ ಅಂತ ಬರೆಯುವುದಿಲ್ಲ” ಎಂದು. ಇಲ್ಲಿ “ಈಗ” ಎಂದು ಒತ್ತು ಕೊಟ್ಟು ಹೇಳಿರುವುದನ್ನು ಗಮನಿಸಬೇಕು. ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಕ್ಕಮೇಲೆ ಲಿಂಗಾಯತ ಅಂತ ಬರೆಯಬೇಕು.

ನಮ್ಮ ಸಮಾಜದ ಹಲವಾರು ಹಿಂದುಳಿದ ಪಂಗಡಗಳು “ಲಿಂಗಾಯತ” ಎಂದು ಬರೆಸುತ್ತಿಲ್ಲ. ಅವರನ್ನು ಲಿಂಗಾಯತಕ್ಕೆ ಸೇರಿಸಬೇಕೆಂದರೆ ಸದ್ಯಕ್ಕೆ “ಹಿಂದೂ/ಲಿಂಗಾಯತ” ಎಂದು ಬರೆಯುವುದು ಅನಿವಾರ್ಯ.

ವೀರಶೈವ ಮಹಾಸಭಾ ಆಗಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅರ್ಜಿ ಕೊಟ್ಟಿದೆ. ಆ ಬೇಡಿಕೆಗೆ ನಾವು ಬದ್ದ,’ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವೀರಶೈವ ಮಹಾಸಭಾದ ಕಡೆಯಿಂದ ಸರಕಾರದ ಮೇಲೆ ಒತ್ತಡ ತರುವ ಆಲೋಚನೆ ಇದೆಯಾ ಅಂತ ಕೇಳಿದೆ.

“ನಾವು ಆಗಲೇ ಒತ್ತಡ ಹಾಕಿ ಅರ್ಜಿ ಕೊಟ್ಟಿದೀವಿ. ಪ್ರತ್ಯೇಕ ಧರ್ಮಕ್ಕೆ ಕೆಲಸಮಾಡುವಂತೆ ಬಿಜೆಪಿ ಎಂ.ಪಿ, ಶಾಸಕರಿಗೆ ಹೇಳಿ,” ಎಂದು ಹೇಳಿದರು.

Share This Article
14 Comments
  • ಯಾವ ಖಾದಿ ಖದೀಮನಿಗೂ ಕಡಿಮೆ ಇಲ್ಲದಂತಹ ಸ್ಪಷ್ಟನೆ !

    • ಬಿದರಿಯವರ ಹೇಳಿಕೆ ಅಸ್ಪಷ್ಟವಾಗಿದೆ. ಕಾರಣ ಗೊತ್ತಾಗುತ್ತಿಲ್ಲ. ಅವರ ದಾವಣಗೆರೆ ಸಮಾವೇಶದಲ್ಲಿ ಅವರೇ ತೆಗೆದುಕೊಂಡ ನಿರ್ಣಯಕ್ಕೆ ಅವರೇ ಬದ್ದರಾಗುವುದಿಲ್ಲವೇ? ಲಿಂಗಾಯತ ಒಂದು ಸ್ವತಂತ್ರ ಧರ್ಮವಲ್ಲವೇ? ಜನಗಣತಿಯಲ್ಲಿ ನಮ್ಮ ಧರ್ಮ‌ಲಿಂಗಾಯತ ಎಂದು ಬರೆಯಲು ಸಾದ್ಯವಿಲ್ಲವೇ? ಕಳೆದ ಜನಗಣತಿಯಲ್ಲಿ ನಾವು ಲಿಂಗಾಯತ ಧರ್ಮ ದವರೆಂದು ಬರೆಸಿಲ್ಲವೇ? ರಾಜ್ಯ ಸರಕಾರ ಲಿಂಗಾಯತ ಧರ್ಮ ಬಗ್ಗೆ ಅದಿಸೂಚನೆ ಹೊರಡಿಸಿಲ್ಲವೆ? ಲಿಂಗಾಯತ ಧರ್ಮ ಎಂದು ನಮೂದಿಸಲು ಎಲ್ಲೂ ಸಮಸ್ಯೆ ಇಲ್ಲ. ದಯಮಾಡಿ ಗೊಂದಲ ಸೃಷ್ಟಿಸಿ ಸಮಾಜದ ದಾರಿ ತಪ್ಪಿಸಬೇಡಿ.

    • ಈಗಾಗಲೇ ಕನಾ೯ಟಕದಲ್ಲಿ 3 ಲಕ್ಷ ಜನ ಧಮ೯ ಲಿಂಗಾಯತ ಎಂಬುದಾಗಿ ಬರೆಸಿದ್ದೆವೆ .
      ಈಗಲೂ ಅದಸ೯ ಕಾಲಂ ದಲ್ಲಿ “ಧಮ೯ ಲಿಂಗಾಯತ ” ಎಂಬುದಾಗಿ ಬೆರೆಸಬಹುದು
      ಉಪ ಪಂಗಡ ಕಾಲಂ ದಲ್ಲಿ (ಅವರಿಗಿಸ್ಟವಾದರೆ) ತಮ್ಮ ತಮ್ಮ ಉಪ ಪಂಗಡ ಬೆರೆಸಬಹುದು.
      ಈ ರಿತಿಯ ವಿಚಾರಗಳನ್ನು ಮಹಾಸಭಾದ ಅಧ್ಯಕ್ಷರು ಸ್ಪಷ್ಟವಾಗಿ ಹೆಳಬೆಕೆ ವಿನಹ
      ಗೊಂದಲದ ಹೇಳಿಕೆಗಳನ್ನು ಕೊಟ್ಟು ಜನಗಳನ್ನು ದಾರಿ ತಪ್ಪುವಂತೆ ಮಾಡಬಾರದು.

      • Hwdu nimma matu nija hintha bejavbdari janarindha namma darmadindha hivarannu doora hidabekku jai lingyatha jai basava

  • ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಗುತ್ತಲೇ, ಬಹುಶಃ ಶೇ 90% ರಷ್ಟು ವೀರಶೈವ-ಲಿಂಗಾಯತರೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮೊಟ್ಟಮೊದಲೇ ನಿಂತಿರುತ್ತಾತೆ. ಅದರ ಮುನ್ಸೂಚನೆಯೇ ಈ ಸ್ಪಷ್ಟೀಕರಣ

  • ಬೆಳಗಾವಿಯಲ್ಲಿ RSS ಪಥ ಸಂಚಲನ ಸಮಾರಂಭದಲ್ಲಿ ಭಾಗವಹಿಸಿ ಭಾಷಣ ಮಾಡಿದ ಬಗ್ಗೆ ಬಿದರಿಯವರ ಹೇಳಿಕೆ ಏನು?

  • State president Sri. Bidari has advised appropriately at the present juncture. When separate “Dharma” demand has not yet been granted, it’s foolish to declare as another Dharma which will not be entered by the Surveyor. Hence in the given circumstances, declare as Hindu-Lingayat if one has any Common Sense !

  • Nonsense statement.
    We have the provision to enroll ourselves under OTHERS in Religion column and Lingayath in Caste column.
    Common Sense is not that common to all.

  • Respected Bidri sit,
    Till you honor RSS; difficult to understand ‘ Basava philosophy’. Please come out of political caccoon &understand Vachanas & reinvented.

  • Nonsense statement.
    We have the provision to enroll ourselves under OTHERS in Religion column and Lingayath in Caste column.
    Common Sense is not that common to all.

  • ಲಿಂಗಾಯತ ಅಸ್ಮಿತೆ ಇಲ್ಲದವರು ಲಿಂಗಾಯತ ಆಗಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *