ಕಲಬುರ್ಗಿ:
ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಬಸವ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ
“ವಚನ ವೈಭವ” ೨೪ ನೇ ದಿನದ ಕಾರ್ಯಕ್ರಮ ಶರಣ ಅಂಬಾರಾಯ ಬಿರಾದಾರ ಮತ್ತು ಶರಣ ಸತೀಶ ಪಾಟೀಲ ಅವರ ಮನೆಯಲ್ಲಿ ಜರುಗಿತು.
ಅನುಭಾವವನ್ನು ಶರಣ ಶಿವಪುತ್ರಪ್ಪ ಕಂಠಿಗೈದರು. ಅಧ್ಯಕ್ಷತೆಯನ್ನು ಮಹಾಂತ ಜ್ಯೋತಿ ಪ್ರತಿಷ್ಠಾನದ ಶರಣರಾದ ಶಿವರಾಜ ಪಾಟೀಲ ವಹಿಸಿದ್ದರು.
ಪ್ರಭುಲಿಂಗ ಮಹಾಗಾಂವಕರ, ರವೀಂದ್ರ ಶಾಬಾದಿ, ರವಿ ಸಜ್ಜನ, ಧನರಾಜ ತಾಂಬೋಳಿ, ಸಿದ್ಧರಾಮ ಯಳವಂತಗಿ, ನಳಿನಿ ಮಹಾಗಾಂವಕರ, ಸಾವಿತ್ರಿ ಪಾಲ್ಕಿ, ಶಾರದಾ ಓಗಿ, ಬಸಮ್ಮ ರಾಜಾಪೂರ ಮತ್ತೀತರ ಶರಣ ಶರಣೆಯರು ಭಾಗವಹಿಸಿದ್ದರು.