ಧಾರವಾಡದ ಪ್ರಸಿದ್ಧ ಎಲ್. ಇ. ಎ ಕ್ಯಾಂಟೀನ್ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಇತ್ತೀಚಿಗೆ ಹೊಸ ಕಟ್ಟಡದ ಉದ್ಘಾಟನೆಯನ್ನು ಲಿಂಗಾಯತ ಧರ್ಮದ ಪ್ರಕಾರ ಗುರು ಪ್ರವೇಶ ಕಾರ್ಯಕ್ರಮವನ್ನು ಬಸವ ಕೇಂದ್ರದ ಸದಸ್ಯರು ಬಸವಂತಪ್ಪ ತೋಟದ ಅವರ ನೇತೃತ್ವದಲ್ಲಿ
ನಡೆಸಿಕೊಟ್ಟರು.
ವಿಶ್ವ ಗುರು ಬಸವಣ್ಣನವರ ಭಾವ ಚಿತ್ರ ಇಟ್ಟು, ಷಟ್ಸ್ಥಲ ಧ್ವಜ ಹಾರಿಸಿ, ಕುಟುಂಬದ ಸದಸ್ಯರು ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಇಟ್ಟುಕೊಂಡು ವಚನಗಳನ್ನು ಹೇಳುತ್ತ ಕ್ಯಾಂಟೀನನ್ನು ಪ್ರವೇಶ ಮಾಡಿ ಉದ್ಘಾಟಿಸಿದರು.
ನಮ್ಮ ಕುಟುಂಬದವರು ಬಸವ ತತ್ವವನ್ನು 25 ವರ್ಷಗಳಿಂದ ಪಾಲಿಸ್ತಾ ಬಂದಿದ್ದೇವೆ. ಇದರಿಂದ ನಿಜಾ ಆಚರಣೆಗಳನ್ನು ಮಾಡುವಾಗ ನಮಗೆ ಯಾವುದೇ ಆತಂಕಗಳು ಇರುವುದಿಲ್ಲ, ಭಯಾನೂ ಇರೋದಿಲ್ಲ, ಮನಸ್ಸಿಗೆ ನೆಮ್ಮದಿ ಇರುತ್ತದೆ ಎಂದು ರಾಜು ಮರಳಪ್ಪನವರ ತಿಳಿಸಿದರು.
75 ವರ್ಷದ ರಾಜು ಶಿವಪ್ಪ ಮರಳಪ್ಪನವರ ಅವರು ಹಲವು ದಶಕಗಳಿಂದ ಬಸವ ತತ್ವದ ನಿಜಾಚರಣೆಯನ್ನು ಪಾಲಿಸುತ್ತಾ ಬಂದಿದ್ದಾರೆ.
ಈ ಎಲ್,ಈ,ಏ ಕ್ಯಾಂಟೀನ 75 ವರ್ಷಗಳಿಂದ ನಡಿತಾ ಇದೆ, ಹಳೆ ಸ್ಥಳದಿಂದ ಪಕ್ಕದಲ್ಲಿರುವ ಹೊಸ ಕಟ್ಟಡಕ್ಕೆ ಈಗ ಶಿಫ್ಟ್ ಆಗಿದೆ,
ಕ್ಯಾಂಟೀನ್ ಮುಂದೆ ಒಂದು ಬೋರ್ಡ್ ಇದೆ, ಹೊಟೇಲ್ ಬೋರ್ಡಿನಲ್ಲಿ ಹೆಚ್ಚಾಗಿ ಇಂದಿನ ಸ್ಪೆಷಲ್ ಎಂದು ಬರೆದಿರುತ್ತಾರೆ ಆದರೆ ಈ ಕ್ಯಾಂಟೀನ್‌ನಲ್ಲಿ ವಚನಗಳನ್ನು ಬರೆದಿರುತ್ತಾರೆ, ದಿನಂಪ್ರತಿ ಒಂದು ಅಥವಾ ಎರಡು ವಚನಗಳನ್ನು ಮ್ಯಾನೇಜರ್ ಆದಂತಹ ಜೈಕರ್ ಅವರು ಬರೆಯುತ್ತಾರೆ, ಮೊದಲು ನಾಯಕರ ಮ್ಯಾನೆಜರ್ ಬರೆಯುತ್ತಿದ್ದರು.
ನಗರದ ಪ್ರಮುಖ ಕೈಗಾರಿಕೆಯೊದ್ಯಮಿ ಸರಸಾನಂದ ದೊಡ್ಡವಾಡ, ಡಾ. ಎಸ, ಅರ್, ಜಂಬಗಿ, ಎಲ್. ಇ. ಎ ಕ್ಯಾಂಟೀನಿನ ಮಾಲೀಕರಾದ ರಾಜು ಶಿವಪ್ಪ ಮರಳಪ್ಪನವರ, ಅಭಿಲಾಷ ಮತ್ತು ಇತರ ಕುಟುಂಬ ವರ್ಗದವರು ಹಾಜರಿದ್ದರು.