ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಶಕ್ತಿ ಹೊಂದಿವೆ: ಶಾಂತಲಿಂಗ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ವಚನಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನು ನೀಡುತ್ತವೆ. ವಚನಗಳು ಜೀವನದ ಒಳನೋಟ, ಪೂರ್ಣ ಜ್ಞಾನ ನೀಡಿ, ಸಂವೇದನಾಶೀಲ ವ್ಯಕ್ತಿಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿವೆ ಎಂದು ಭೈರನಟ್ಟಿಯ ಪೂಜ್ಯ ಶಾಂತಲಿಂಗ ಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2775 ಶಿವಾನುಭವದ ಸಮ್ಮುಖ ವಹಿಸಿ ಅವರು ಮಾತನಾಡಿದರು.

ತೋಂಟದಾರ್ಯ ಮಠ ವಿಶಿಷ್ಟ ವಿಷಯಗಳ ಮೇಲೆ ಶಿವಾನುಭವ ಮಾಡುವುದು ಒಂದು ವಿಶೇಷ. ಮಕ್ಕಳು ಜಗ ಬೆಳಗುವ ದೀಪಗಳು, ಮಕ್ಕಳ ಬಗ್ಗೆ ಶಿವಾನುಭವ ಕಾರ್ಯಕ್ರಮ ಇದು. ಮಕ್ಕಳು ಬೆಳೆಯುವಾಗಲೇ ಅವರ ಸಿರಿ ಕಾಣಬಹುದು.

ತಾಯಿ ಮಮತಾಮಯಿ ಅಂತೆಯೇ, ಆಡಿ ಬಾ ನನ ಕಂದ ಅಂಗಾಲು ತೊಳದೇನು ತೆಂಗೀನ ಎಳನೀರು ತಗೊಂಡು  ಬಂಗಾರ ಮಾರಿ ತೋಳದೇನ ಎನ್ನುವಳು.

ಮಕ್ಕಳೆಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ ಎಂದು ಮಕ್ಕಳು ಮತ್ತು ವಚನಗಳನ್ನು ಉಲ್ಲೇಖಿಸಿ ದೃಷ್ಟಾಂತಗಳೊಂದಿಗೆ, ಆಶೀರ್ವಚನ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ರಾಜೇಂದ್ರ ಗಡಾದರವರು ‘ವಚನಗಳ ಬೆಳಕಿನಲ್ಲಿ ಮಕ್ಕಳ ಪಥ’ ಎಂಬ ವಿಷಯ ಕುರಿತು ಮಾತನಾಡುತ್ತಾ, ಮಕ್ಕಳು ಭವಿಷ್ಯದ ಕನಸುಗಳು. ಮಕ್ಕಳನ್ನು ಸರಿದಾರಿಗೆ ತರುವ ಸಂಸ್ಕೃತಿ ಇಂಥ ಶಿವಾನುಭವದಿಂದ ಸಾಧ್ಯ. ಸತ್ಯ ಅಹಿಂಸೆ ನ್ಯಾಯ ಸಮಾನತೆ ನಂಬಿಕೆ ಇವುಗಳನ್ನು ಶರಣರು ತಿಳಿಸಿಕೊಟ್ಟರು.

ಈಗಿನ ಮಕ್ಕಳು ವಿದ್ಯಾವಂತರು ಆದರೆ ಅವರು ವಿದೇಶದಲ್ಲಿರುತ್ತಾರೆ.ಅವರ ತಂದೆ-ತಾಯಿ ವೃದ್ಧಾಶ್ರಮ ದಲ್ಲಿರುತ್ತಾರೆ. ಮಕ್ಕಳು ಸಾಕಷ್ಟು ವಿದ್ಯಾವಂತರಾಗುವುದರ ಜೊತೆಗೆ ವಿಚಾರವಂತರಾಗಬೇಕು.

ವಚನಗಳಲ್ಲಿರುವ ಮೌಲ್ಯಗಳನ್ನು ಮಕ್ಕಳ ಮನದ ಪಟಲದಲ್ಲಿ ಬಿತ್ತಬೇಕು. ಮಕ್ಕಳಿಗೆ ತಿಳಿಯುವಂತ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು.

ಮಕ್ಕಳ ಆಗು ಹೋಗುಗಳನ್ನು ಕೇಳುವಷ್ಟು ಸಮಯ ಹೆತ್ತವರಿಗೆ ಇಲ್ಲವಾಗಿದೆ. ಜಗತ್ತಿಗೆ ಉತ್ತಮ ಮನುಷ್ಯನ ಅವಶ್ಯಕತೆ ಇದೆ ಎಂದು ಅರ್ಥಪೂರ್ಣವಾಗಿ ಮಾತನಾಡಿದರು.

ಡಿ.ಎಸ್. ಕರ್ಕಿ ಪ್ರಶಸ್ತಿ ಪಡೆದ ಯುವಕವಿ, ರಂಗನಟ, ನಿರ್ದೇಶಕರಾದ ರಣತೂರಿನ ಸಂತೋಷ ಅಂಗಡಿ ಅವರನ್ನು ಸನ್ಮಾನಿಸಲಾಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಮತ್ತು ಕುಮಾರ ಹಿರೇಮಠ ಇವರು ವಚನ ಸಂಗೀತ ನಡೆಸಿಕೊಟ್ಟರು.

ಧರ್ಮ ಗ್ರಂಥ ಪಠಣವನ್ನು ಕುಮಾರಿ ಶ್ರಾವಣಿ ಪಾಟೀಲ ಹಾಗೂ ವಚನ ಚಿಂತನವನ್ನು ಕುಮಾರಿ ಅದಿತಿ ಇಂಗಳಳ್ಳಿ ಪ್ರಸ್ತುತ ಪಡಿಸಿದರು.

ದಾಸೋಹ ಸೇವೆಯನ್ನು ಕೆ. ಎಸ್. ವೀರಭದ್ರಪ್ಪ ಅವರ ಸ್ಮರಣಾರ್ಥ ಕೆ.ಎಸ್. ನಾಗರಾಜ, ಸಂಡೂರ ಮಾಡಿದರು. ಅವರು ಸಹೋದರಿಯರಾದ ಸಾವಂತ್ರವ್ವ ಪಿಳ್ಳೆ ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

 ಸೋಮಶೇಖರ ಪುರಾಣಿಕ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಅವರು ಪರಿಚಯಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oq

Share This Article
Leave a comment

Leave a Reply

Your email address will not be published. Required fields are marked *