ಬೆಳಗಾವಿ
2025ರ ಲಿಂಗಾಯತ ದಿನದರ್ಶಿಕೆ ಮುದ್ರಣವಾಗಿ, ಮಾರುಕಟ್ಟೆಯಲ್ಲಿ ಲಭ್ಯವಿದೆ.
ಆರು ವರ್ಷಗಳಿಂದ ಇದನ್ನು ಹೊರತರುತ್ತಿರುವ ಲಿಂಗಾಯತ ಕ್ರಾಂತಿ ಪತ್ರಿಕೆಯ ಶಿವಾನಂದ ಬಸವರಾಜ ಮೆಟ್ಯಾಲ ಅವರು ವೈದಿಕ ದಿನದರ್ಶಿಕೆಗೆ ಪರ್ಯಾಯವಾಗಿ ಬೆಳೆದಿರುವ ಲಿಂಗಾಯತ ದಿನದರ್ಶಿಕೆಯ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ.
2015-16 ರಲ್ಲಿ ಆರಂಭವಾದ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಸ್ಪೂರ್ತಿಯಿಂದ ಲಿಂಗಾಯತ ಕ್ರಾಂತಿ ಶುರುವಾಯಿತು. ಪತ್ರಿಕೆ ರಾಜ್ಯಾದ್ಯಂತ ಚಂದಾ ಸದಸ್ಯರನ್ನು ಹೊಂದಿ ಬಸವತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕಂಡಿತು.
ಆಗ ಲಿಂಗಾಯತರಿಗೆ ದಿನಾಂಕ, ದಿನ ವಿಶೇಷಗಳು, ತಿಳಿಯಲು ವೈದ್ಧಿಕ ದಿನದರ್ಶಿಕೆ ತೆಗೆದುಕೊಂಡು ನೋಡಬೇಕಾಗಿತ್ತು. ಅದರಿಂದ ನಾವೇ ಏಕೆ ಲಿಂಗಾಯತ ಧರ್ಮದ ಆಧಾರದ ಮೇಲೆ ಬಸವಾದಿ ಶರಣರ ಚಿಂತನೆಯುಳ್ಳ ದಿನದರ್ಶಿಕೆ ತೆರೆಯಬಾರದು ಎಂದು ಆಲೋಚಿಸಿದೆವು.
ಪೂಜ್ಯಶ್ರೀ ನಿಜಗುಣಾನಂದ ಸ್ವಾಮೀಜಿ, ನೇತ್ರತ್ವದಲ್ಲಿ ಶಿಕ್ಷಕರಾದ ಬಸವರಾಜ ಹುಬ್ಬಳ್ಳಿ, ಪ್ರಕಾಶ ಕಶಟ್ಟಿ, ಸಿದ್ದಣ್ಣಾ ಲಂಗೊಟ್ಟಿ, ಜಿ.ಬಿ ಹಳ್ಯಾಳ, ಶಂಕರ ಗುಡಸ, ವಿರೇಶ ಹಲಕಿ, ಬಸವರಾಜ ಕಡೇಮನಿ ಹಾಗೂ ಹತ್ತಾರು ಮಠಾದೀಶರು, ಬಸವತತ್ವ ಚಿಂತಕರ ಮಾರ್ಗದರ್ಶನದಲ್ಲಿ 2019 ರಲ್ಲಿ 2020ರ ಲಿಂಗಾಯತ ದಿನದರ್ಶಿಕೆ ಪ್ರಥಮ ಬಾರಿ ಮುದ್ರಣವಾಯಿತು. ಮೊದಲನೇ ವರ್ಷವೇ ಲಕ್ಷಾಂತರ ಬಸವ ಅನುಯಾಯಿಗಳಿಗೆ ತಲುಪಿ ಅತ್ಯಂತ ಜನಪ್ರಿಯತೆ ಪಡೆಯಿತು. ಅಂದಿನಿಂದ ಇಲ್ಲಿಯವರೆಗೆ ಸತತ 6ವರ್ಷಗಳಂದ ಯಶಸ್ವಿಯಾಗಿ ಮುದ್ರಣವಾಗುತ್ತಿದೆ.
ವೈದ್ಧಿಕತೆಯಿಂದ ವೈಜ್ಞಾನಿಕತೆಗೆ ಜನಸಾಮಾನ್ಯರ ಮನಃ ಪರಿವರ್ತನೆಗೆ ಪ್ರಮುಖ ಪಾತ್ರವಹಿಸಿದೆ.
2025ರ ಲಿಂಗಾಯತ ದಿನದರ್ಶಿಕೆ ಮುದ್ರಣವಾಗಿದೆ.
ಪ್ರತಿಗಳಿಗಾಗಿ ಸಂಪರ್ಕಿಸಿ.
ಮೊ: 8884000008 9741544397