ಪಂಚಾಚಾರ್ಯರ ನಿಜ ಸ್ವರೂಪ:(1/12)
ಪ್ರಾಚೀನ ಕರ್ನಾಟಕದಲ್ಲಿ ಕಾಳಾಮುಖ, ಪಾಶುಪತ, ಮಹಾವ್ರತಿ, ಶುದ್ಧ ಶೈವ ಎಂಬ ಆಗಮ ಶೈವ ಪಂಥಗಳ ಅನುಯಾಯಿಗಳಿದ್ದರು.* ಅವರು ಪ್ರಧಾನವಾಗಿ ಸ್ಥಾವರ ಲಿಂಗ ಪೂಜಿಸುತ್ತಿದ್ದರು.
ಅವರಲ್ಲಿ ಸೈದ್ಧಾಂತಿಕವಾಗಿ ಬಲಿಷ್ಠವಾಗಿದ್ದವರು ಶುದ್ಧ ಶೈವ ಬ್ರಾಹ್ಮಣರು. ಆಂಧ್ರದಲ್ಲಿ ಆರಾಧ್ಯರೆಂದು ಪ್ರಸಿದ್ದರಾಗಿ, ಹೋಮ, ವರ್ಣ, ಜಾತಿ, ಮಡಿ, ಗೋತ್ರಗಳಲ್ಲಿ ಮುಳುಗಿದ್ದರು.
ಬಸವಣ್ಣನವರ ಪ್ರಭಾವದಿಂದ ಈ ಶೈವ ಪಂಥಗಳು ಶರಣ ಚಳುವಳಿಯಲ್ಲಿ ಕರಗಿಹೋದವು. ಆದರೆ ಒಳಬಂದರೂ ಶುದ್ಧ ಶೈವರು ತಮ್ಮ ವೈದಿಕ ತತ್ವಗಳನ್ನು ಬಿಡದೆ ಪ್ರತ್ಯೇಕವಾಗಿ ಉಳಿದುಕೊಂಡರು.
ಬಸವ ತತ್ವಕ್ಕೆ ವೈದಿಕತೆ ಬೆರೆಸಿ ಅರ್ಧ ಲಿಂಗಾಯತ, ಅರ್ಧ ಬ್ರಾಹ್ಮಣರಾದರು. ತಮ್ಮ ಮಿಶ್ರಧರ್ಮವನ್ನು ಶರಣ ಸಮಾಜದ ಮೇಲೆ ಹೇರಲು ನಿರಂತರವಾಗಿ ಪ್ರಯತ್ನಿಸಿದರು.
ಇತರ ಶರಣರನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಜಂಗಮ ಜಾತಿ ಸೃಷ್ಟಿಸಿ ಗುರುಗಳಾದರು. ಸಂಸ್ಕೃತ ಪೋಷಿಸಿ, ಹೋಮ, ಹವನ, ವೇದ ಘೋಷಗಳಂತಹ ವೈದಿಕ ಆಚರಣೆಗಳನ್ನು ರೂಢಿಗೆ ತಂದರು.
ತಮ್ಮ ಮಿಶ್ರ ಧರ್ಮವನ್ನು ವೀರಶೈವವೆಂದು ಕರೆದು, ಲಿಂಗಾಯತ ಧರ್ಮಕ್ಕೆ ಸವಾಲಾಗಿ ಬೆಳೆಸಿದರು. ಅದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲು ಪಂಚಾಚಾರ್ಯ ಮಠಗಳನ್ನು ಕಟ್ಟಿದರು.
(‘ಪಂಚಾಚಾರ್ಯರ ನಿಜ ಸ್ವರೂಪ ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)
- ಶಾಸನ, ಕಾವ್ಯಗಳಲ್ಲಿ ಈ ನಾಲ್ಕು ಪ್ರಮುಖ ಶೈವ ಪಂಥಗಳು ಬೇರೆ ಹೆಸರುಗಳಿಂದಲೂ ಕಾಣಿಸಿಕೊಳ್ಳುತ್ತವೆ.