ಕಾಲ್ಪನಿಕ ಜನಕನ ಒಡ್ಡೋಲ ಅನುಭವ ಮಂಟಪಕ್ಕೆ ಸಮವೇ?
ದಾವಣಗೆರೆ
ವೀಣಾ ಬನ್ನಂಜೆ ಅವರು ಶರಣರನ್ನು ಚೆನ್ನಾಗಿ ಅಧ್ಯಯನ ಮಾಡಿದವರು. ಆದರೂ ಶರಣರ ವಿಚಾರಗಳಲ್ಲಿ ಅವರ ಮಾತು ಯಾವಾಗಲೂ ಒಡೆದ ಮಡಕೆಯಂತಿರುತ್ತದೆ.
ಇರಲಿ, ಅವರು ಅನುಭವ ಮಂಟಪ ಇರಲಿಲ್ಲ, ಇದ್ದರೂ ಅದಕ್ಕೆ ಪ್ರೇರಣೆ ಆಗಿದ್ದು ಜನಕ ರಾಜನ ಕಾಲದಲ್ಲಿ ನಡೆಸುತ್ತಿದ್ದ ಚರ್ಚಾಗೋಷ್ಠಿ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.
ಒಂದು ಉದಾಹರಣೆ ಕೊಡುತ್ತಾರೆ. ಸೂರ್ಯ ಇಲ್ಲದಿದ್ದರೆ ಬೆಳಕು ಚಂದ್ರ, ಚಂದ್ರ ಇಲ್ಲದಿದ್ದರೆ ನಕ್ಷತ್ರ ಅಂತೆಲ್ಲಾ ಅಲ್ಲಿ ಚರ್ಚೆ ಮುಂದುವರೆಯುತ್ತದೆ.
ಈ ಪ್ರಶ್ನೋತ್ತರ ತಳಬುಡ ಇಲ್ಲದ್ದು. ಈ ಚರ್ಚೆಗೆ ವೈಜ್ಞಾನಿಕತೆ ಇಲ್ಲ. ಸೂರ್ಯ ಇಲ್ಲದಿದ್ದರೆ ಚಂದ್ರ ಬೆಳಕು ಕೊಡಲು ಸಾಧ್ಯವಿಲ್ಲ. ಸೂರ್ಯ ಭೂಮಿಗೆ ಸಮೀಪದಲ್ಲಿ ಇರುವ ನಕ್ಷತ್ರ. ಇಂಥಹ ಅಸಂಬದ್ಧ ಪ್ರಶ್ನೋತ್ತರ ಅನುಭವ ಮಂಟಪದಲ್ಲಿ ನಡೆಯಲೇ ಇಲ್ಲ. ಅನುಭವ ಮಂಟಪದಲ್ಲಿ ಶರಣರ ಅನುಭವ ಮತ್ತು ಅನುಭಾವದ ಚಿಂತನೆ ನಡೆಯುತ್ತಿತ್ತು.
ಮುಂದುವರೆದು ಬನ್ನಂಜೆ ಹೇಳುತ್ತಾರೆ ಅಲ್ಲಿ ಒಮ್ಮೆ ಸೋತವರು ಮತ್ತೆ ಪ್ರಶ್ನೆ ಕೇಳುವಂತಿಲ್ಲ. ಅಂತ ಆದರೆ ಅನುಭವ ಮಂಟಪದ ಚರ್ಚೆಗಳಲ್ಲಿ ಯಾವ ಶರಣರು ಸೋಲಲಿಲ್ಲ, ಯಾವ ಶರಣರು ಗೆಲ್ಲಲಿಲ್ಲ. ಅಲ್ಲಿ ಗೆದ್ದದ್ದು ವೈಚಾರಿಕತೆ, ಮಾನವೀಯತೆ, ದಯೆ ಸಹೋದರತ್ವ ಮತ್ತು ಪ್ರೀತಿ.

ಜನಕನ ಒಡ್ಡೋಲಗದಲ್ಲಿ ನಡೆದಿದ್ದು ಪರಲೌಕಿಕ ಚರ್ಚೆ ಎಂದಿದ್ದೀರಿ, ಆದರೆ ಅನುಭವ ಮಂಟಪದಲ್ಲಿ ನಡೆದಿದ್ದು ಇಹಲೋಕದ ಅಭ್ಯುದಯ.
ಜನಕನದು ಒಡ್ಡೋಲಗದಲ್ಲಿ ಮಹಾಭಾರತ ಬರೆದ ವ್ಯಾಸನ ಮಗ ಭಾಗವಹಿಸಿದ ಬಗ್ಗೆ ಹೇಳಿದ್ದೀರಿ. ರಾಮಾಯಣ ನಡೆದ ಎಷ್ಟೋ ಲಕ್ಷ ವರ್ಷಗಳ ನಂತರ ಮಹಾಭಾರತ ನಡೆದಿದೆ ಅಂತ ಕಥೆಯಿದೆ.. ಹಾಗೆಯೇ ಎಷ್ಟೋ ಜನ ವಿದ್ವಾಂಸರು ಇವೆರಡೂ ಕಾಲ್ಪನಿಕ ಕಥೆ ಎನ್ನುತ್ತಾರೆ.
ಜನಕನ ಒಡ್ಡೋಲಗ ಕಾಲ್ಪನಿಕ ಎಂಬುದು ನಿಮ್ಮ ಮಾತಿನಲ್ಲಿಯೇ ಗೋತ್ತಾಗುತ್ತದೆ. ಇಂಥಹ ಕಾಲ್ಪನಿಕ ಕಥಗಳಲ್ಲಿ ಬರುವ ಪ್ರಸಂಗ ನಿಮಗೆ ಐತಿಹಾಸಿಕ ಅಂತ ಅನಿಸುತ್ತದೆ ಐತಿಹಾಸಿಕವಾಗಿ ನಡೆದ ಅನುಭವ ಮಂಟಪ ನಿಮಗೆ ಕಾಲ್ಪನಿಕ ಅನಿಸುತ್ತದೆ.
ಅನುಭವ ಮಂಟಪ ಐತಿಹಾಸಿಕ ಅಂತ ಬಹಳಷ್ಟು ವಿದ್ವಾಂಸರು ವಚನಗಳ ಆಧಾರದಲ್ಲಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಅನುಭವ ಮಂಟಪ ಈಗ ನೀವು ಕಾಲ್ಪನಿಕ ಎನ್ನಲು ಕಾರಣವೇನು? ನಿಮ್ಮ ಸಮುದಾಯದ ಅಸ್ತಿತ್ವ ಉಳಿಸಿಕೊಳ್ಳಲೇ?
ಬಸವಣ್ಣನವರನ್ನು ಜಗತ್ತು ಒಪ್ಪುತ್ತಾ ಇದೆ. ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದೆ. ಜಗತ್ತಿನ ಮೊಟ್ಟ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿಸಿದರು ಬಸವಣ್ಣನವರು ಎಂಬುದನ್ನು ಜಗತ್ತಿನ ವಿದ್ವಾಂಸರು ಒಪ್ಪುತಿದ್ದಾರೆ. ಈ ಮೂಲಕ ಅವರ ವಿಚಾರಗಳು ಜಗತ್ತಿಗೆ ಮುಟ್ಟಿದರೆ ಅಜ್ಞಾನದ ಮೂಟೆಯಂತಿರುವ ಸನಾತನ ಧರ್ಮದ ಅಸ್ತಿತ್ವ ನಾಶ ಆಗುತ್ತದೆ ಈ ಭಯಕ್ಕೆ ನೀವು ಅನುಭವ ಮಂಟಪವನ್ನು ಕಾಲ್ಪನಿಕ ಅಂದಿರಬೇಕು.
ಬನ್ನಂಜೆಯವರೇ ಈಗಾಗಲೇ ಸತ್ಯ ಜಗತ್ತಿಗೆ ಗೊತ್ತಾಗಿದೆ ಇನ್ನೂ ನಿಮ್ಮ ಪ್ರಯತ್ನ ಫಲ ಕೊಡುವುದಿಲ್ಲ ಬಸವಾದಿ ಶರಣರು ಈಗ ಕರ್ನಾಟಕಕ್ಕೆ ಸೀಮಿತ ಅಲ್ಲ ಅವರು ಈಗ ವಿಶ್ವವ್ಯಾಪಿ ನಿಮ್ಮಿಂದ ತಡೆಯಲು ಅಸಾಧ್ಯ.
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲದೇ, ಯೋಚಿಸಿ.
Was there freedom to enter Janaka court for the Shudras and panchamas?. Then how can it be a democratic institution? Brahminism is the negation of Equality. Liberty and Fraternity. Anubhava Manta po a was democratic all in lusive and feminine friendly institution. You. Madam have no right to claim social equality and gender equality.
ವೀಣಾ ಬನ್ನಂಜೆ ಯವರು ಮಾತನಾಡಿದ ಸಭೆಯು ಪೂರ್ವ ನಿಯೋಜಿತ ಎಂದೆನಿಸುತ್ತದೆ. ಅನುಭವ ಮಂಟಪ ದ ವಿಷಯವನ್ನೆ ಅಲ್ಲಗಳೆಯಲು ಈಯಮ್ಮನನ್ನು ಕರೆಸಿ ಮಾತನಾಡಿಸಿರಬಹುದು. ಬಸವಣ್ಣ ನವರನ್ನು ಕರ್ನಾಟಕ ಸರ್ಕಾರ “ಕರ್ನಾಟಕದ ಸಾಂಸ್ಕೃತಿಕ ನಾಯಕ ” ಎಂದು ಘೋಷಿಸಿರುವುದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿಯೇ ಇಂತಹ ವಾಮ ಮಾರ್ಗದ ಮೂಲಕ ಊಳಿಡುತ್ತಿದ್ದಾರೆ. ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷ ಕಳೆದರೂ ಕರ್ನಾಟಕದ ಲಿಂಗಾಯತ ರಲ್ಲಿ ಸಂಭ್ರಮವೇ ಕಾಣುತ್ತಿಲ್ಲ. ನಮ್ಮ ಶರಣ ಧರ್ಮಕ್ಕೆ ಈ ತರಹ ಕಿರುಕುಳ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಬೇಕು. 2-3 % ಇರುವವರನ್ನು ನೋಡಿ ಲಿಂಗಾಯತರು ಕಲಿಯಬೇಕು. ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದಕ್ಕೆ ಈ ನರಿಗಳು ಊಳಿಡುತ್ತಿವೆ.
During janka ruling, there was only rajguru,king system was prevailing. They both are not having self sustainable income. Hence thet created five groups for there services. 1) raj bhat, police 2) purohit: people who brings pooja items for gurus worship. 3) vaishyas: who supply all the day to day materials for both family, soldiers etc., 4) servent for them: cooker, launders ,health workers, other housekeeping workers.5) people who supply farm products like, banana, fruits, honey, coconut, mangoes, dates, nuts, etc,. For all the families. They are calked five varnas. Every citizen of the india has to pay: subscription, donation, guift, guru dakshana, etc, in the forms hidden taxation. If not sufficient again they will celebrate maney number of religious functions, festivities which gives regular income to lead the life of kings,gurus, worship people in India. They always keep caste, creed, colour, regional Imbalance. By bifurcating mind’s of the people and rule the world like any thing else they like. That was not a standardised system. Hence our Basaveshwara has simplified the living process. Everyone has to work for eight hours, sleep for eight hours, eight hours for personal life or daily routine duties. They simplified pooja system. Which is more convenient to everyone during sandya. Kala: one hour before sun raise, and after sun sett one hours . God bless everyone easily. He has gifted s ishtalinga for peace and calm worship. Which is symbol cosmic energy, soul, super soul or invisible man. Hence it’s a very quiet natural processes for worshiping the God. It is very different from vedas, upanishada, puranas, up puranas etc., rest will be next time. Than you for reading my letter.
ವೀಣಾ ಬನ್ನಂಜೆ ಅವರು ಹೇಳಿರುವುದನ್ನು ಕೆಲವು ಅಜ್ಞಾನಿಗಳು ತಪ್ಪು ಅರ್ಥ ಮಾಡಿಕೊಂಡಿದ್ದಾರೆ. ಪುರಾತನ ಕಾಲದ ನಮ್ಮ ವೇದ, ಪುರಾಣ, ಉಪನಿಷತ್, ರಾಮಾಯಣ, ಮಹಾಭಾರತ ಗ್ರಂಥಗಳು ಇವು ಯಾವುದೂ ಸುಳ್ಳಲ್ಲ, ಕಾಲ್ಪನಿಕವೂ ಅಲ್ಲ. ಎಲ್ಲವೂ ನಡೆದ ಘಟನೆಗಳೇ ಆಗಿವೆ. Threetayuga 1296000 ವರ್ಷಾಗಳ ಹಿಂದೆ ನಡೆದ ಸತ್ಯ ಘಟನೆ. ಆಗ ವರ್ಣಾಶ್ರಮ ಪದ್ಧತಿ ಇತ್ತು. ಆಗ ಎಲ್ಲರೂ ಸಮಾನರಂತೆ ಕಾಣುತ್ತಿದ್ದರು. ಈಗಿನ ರೀತಿ ಜಾತಿ ಪದ್ಧತಿ ಇರಲಿಲ್ಲ. ನಮ್ಮ ಸನಾತನ ಧರ್ಮವನ್ನು ಕೀಳಾಗಿ ನೋಡಬೇಡಿ. ಈಗಿನ ಜಾತಿ ಪದ್ದತಿಯನ್ನು ಮುಸಲ್ಮಾನ ಕ್ರಿಶ್ಚಿಯನ್ನರು ವಿಷ ಬೇಜ ಬಿತ್ತಿ ಜಾರಿಗೆ ತಂದರು. ನಿಮಗೆ ಬೇಕಾದರೆ ಇತಿಹಾಸವನ್ನು ಓದಿ. ಗೂಗಲ್ನಲ್ಲಿ ಹುಡುಕಿ ಸತ್ಯ ಗೊತ್ತಾಗುತ್ತದೆ. ಸುಮ್ಮನೆ ಪುರೋಹಿತ ವರ್ಗವನ್ನು ದೂಶಿಸ ಬೇಡಿ. ಈಗಿನ ಕಲಿಯಗ ಕಾಲಕ್ಕೆ ತಕ್ಕಂತೆ ಬಸವಣ್ಣ ನವರು ಅನುಭವ ಮಂಟಪವನ್ನು ಮಾಡಿದ್ದಾರೆ. ಇದು ಸತ್ಯ. ಅದೇ ರೀತಿ ಜನಕ ಮಹಾರಾಜರು ರಾಜಸಭೆಯನ್ನು ಮಾಡುತ್ತಿದ್ದರು. ಅದೂ ಸತ್ಯ. ನಮ್ಮ ವೇದ ಸಾಹಿತ್ಯವನ್ನು ಇನ್ನು ಮೇಲಾದರೂ ನಿಂದಿ ಸಬೇಡಿ. ಸತ್ಯವನ್ನು ತಿಳಿಯಬೇಕಾದರೆ ರಾಮಾಯಣವನ್ನು ಓದಿ.ಬಸವಣ್ಣನವರು ಊರೂರು ತಿರುಗಿ ಎಲ್ಲರನ್ನು ಲಿಂಗ ಪೂಜಾ ಆರಾಧಕಾರನ್ನಾಗಿ ಮಾಡುತ್ತಿದ್ದರು. ಈಗ ನೀವೇನು ಮಾಡುತ್ತಿದ್ದೀರೆಂದು ಇಡೀ ದೇಶಕ್ಕೆ ಗೊತ್ತು. ಕಾವಿ ಬಟ್ಟೆ ಹಾಕಿಕೊಂಡು ರಾಜಕಾರಣಿಗಳ ಹಿಂದೆ ಸುತ್ತುತ್ತೀರಿ. ಮತಾಂತರವನ್ನು ತಡೆಗಟ್ಟಿ.