ದಾವಣಗೆರೆ
ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರು ವೀಣಾ ಕಾಶಪ್ಪನವರನ್ನು ವೀರಶೈವ ಮಹಾಸಭೆಯ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿರುತ್ತಾರೆ.
ವೀಣಾ ಕಾಶಪ್ಪನವರು ಶಿವಶಂಕರಪ್ಪನವರನ್ನು ಭೇಟಿ ಮಾಡಿ ಅಧ್ಯಕ್ಷರಿಂದ ಆದೇಶದ ಪ್ರತಿಯನ್ನು ಹಾಗೂ ಆಶೀರ್ವಾದವನ್ನು ಪಡೆದಿರುತ್ತಾರೆ.