ಬಸವ ಜಯಂತಿ ಜತೆ ರೇಣುಕಾ ಜಯಂತಿ ಜೋಡಿಸುವ ಶಂಕರ ಬಿದರಿ ಸುತ್ತೋಲೆ ಹಾಸ್ಯಾಸ್ಪದ
ಕೂಡಲಸಂಗಮ
ಕೆಲವರ ಓಲೈಕೆಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಜೊತೆಗೆ ಕಾಲ್ಪನಿಕ ರೇಣುಕಾಚಾರ್ಯರ ಜಯಂತಿ ಆಚರಿಸುವಂತೆ ಸುತ್ತೋಲೆ ಹೊರಡಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಭಾನುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತ್ಯದ ಅರಿವು ಇದ್ದರು ಕೆಲವರನ್ನು ಒಲೈಸಲು ಅಸತ್ಯವನ್ನು ಹೇಳುವುದು ಅಪರಾಧ. ಸಾಮಾಜಿಕ ಬದಲಾವಣೆ ಮಾಡಿ ಜನರಿಗೆ ವೈಚಾರಿಕ ಪ್ರಜ್ಞೆ ಮೂಡಿಸಿದ ಬಸವಣ್ಣನವರ ಜಯಂತಿಯೊಂದಿಗೆ ಕಾಲ್ಪಿನಿಕ ರೇಣುಕಾಚಾರ್ಯರನ್ನು ತಗಲುಹಾಕುವ ಹುನ್ನಾರ ಮಾಡಿರುವುದು ದುರಂತ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆ ಅಲ್ಲ. ಅವರು ಹೊರಡಿಸುವ ಆದೇಶಕ್ಕೆ ಲಿಂಗಾಯತರು ಗಮನ ಹರಿಸುವ ಅಗತ್ಯ ಇಲ್ಲ. ಬಸವಣ್ಣನವರಿಗೆ ಅಗೌರವ ತೋರಿಸುವ ಉದ್ಧೇಶದಿಂದಲೇ ಇಂತಹ ಕೃತ್ಯ ಮಾಡುತ್ತಿರುವರು. ಇದನ್ನು ಎಲ್ಲ ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
2023 ರಲ್ಲಿ ಬಸವಕಲ್ಯಾಣದಲ್ಲಿ ಜರುಗಿದ ಲಿಂಗಾಯತ ಮಹಾಧಿವೇಶನದಲ್ಲಿ, ಎಲ್ಲಾ ಲಿಂಗಾಯತ ಸಂಘ ಸಂಸ್ಥೆಗಳು ಒಟ್ಟಾಗಿ ಜಾಗತಿಕ ಲಿಂಗಾಯತ ಮಹಾಸಭೆಯನ್ನು ಅಧಿಕೃತ ” ಲಿಂಗಾಯತರ ಪ್ರಾತಿನಿಧಿನಕ ಸಂಸ್ಥೆ” ಎಂದು ಘೋಷಿಸಿ ಪರಮಾಧಿಕಾರ ನೀಡಿದೆ.
Perfect.fine.
ಈ ವರೆಗೆ ಆಚರಣೆ ಇಲ್ಲದ್ದು ಈಗೆ ಕೆ. ಎಲ್ಲಾಶರಣರ ಜಯಂತಿ ಯನ್ನು ಕಲಾನುಕ್ರಮ ವಾಗಿ ವರ್ಷ ದಲ್ಲಿ ಆಚರಿಸುತ್ತಿರುವ ದು. ತಿಳಿದ ವಿಷಯ ವಾಗಿದೆ.
ನಾವು ಹೀಗೆ ಕಿತ್ತಾಡ್ತಾ ಇದ್ದರೆ ಮೂಲೆಗುಂಪಾಗೋದು ಸತ್ಯ. ಎಷ್ಟೋ ಜನ ಲಿಂಗವನ್ನು ಧರಿಸದೆ, ಕೆಲವರು ಮಾಂಸಾಹಾರ ಸೇವಿಸುತ್ತಾ ಧರ್ಮವನ್ನು ಮರೆತು ಬದುಕುತ್ತಿದ್ದಾರೆ. ಇಂದಿನ ಕೆಲ ಯುವಕರಿಗೆ ಧರ್ಮವು ಗೊತ್ತಿಲ್ಲ ವಚನಗಳ ಅರಿವು ಇಲ್ಲ. ಎಲ್ಲರೂ ಒಂದಾದರೆ ವೀರಶೈವ ಲಿಂಗಾಯತ ಧರ್ಮ ಉಳಿಯು ತ್ತದೆ. ಹಾದಿ ಬೀದಿಯಲ್ಲಿ ಕಿತ್ತಾಡಿದರೆ ಧರ್ಮ ಅಳಿದು ಹೋಗುತ್ತದೆ.
Veerashiva’s did lot of institutions in Karnataka. Kindly unite together.
💯
ರೆವಣ ಸಿದ್ದೇಶ್ವರ ರನ್ನ ರೇಣುಕಾಚಾರ್ಯ ಮಾಡಲು ಹೊರಟಿರೋದು ಒಂದು ದೊಡ್ಡ ದುರಂತ.
ಬಿದರಿಯವರು ಈ ಹೇಳಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಮತ್ತು ಸಮಾಜದ ಮುಂದೆ ಕ್ಷಮೆಯಾಚಿಸಬೇಕು.ಇಂಥಹ ಗೊಂದಲ ಹುಟ್ಟಿಸುವ ಕೆಲಸ ಮತ್ತು ಹೇಳಿಕೆಗಳನ್ನು ಕೊಡಬಾರದು.
ಒಂದು ಕೋಟಿ ಜನ ಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯಿತರು ಮೊದಲು ಸುಳ್ಳು ಜಾತಿ ಆಧಾರಿತ ವರದಿಯನ್ನು ಧಿಕ್ಕರಿಸೋದು ಬಿಟ್ಟು ರೇಣುಕಾಚಾರ್ಯರ ಜಯಂತಿಯನ್ನು ಬಸವ jayantiy9ndige ಮಾಡಲು ಉದ್ದೇಶಿಸಿರುವ ತಪ್ಪಾದರೂ ಏನು ಮೊದಲು ವರದಿ ವಿರೋಧಿಸಿ ಕಾರಣ ಸಮುದಾಯದ ಜನರನ್ನೇ ಭಾತಿ ಮಾಡಿ ಸರ್ವೇ ಮಾಡದೇ 75 ಲಕ್ಷ ಎಂಬ ಅಂಕಿ ಅಂಶ ಎಲ್ಲಿಂದ ಬಂತು prashnisi- ವರದಿ ತಿರಸ್ಕರಿಸಿ
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ವೀರಶೈವ ಲಿಂಗಾಯತ ಅನ್ನುವ ಈ ಸಂಘಟನೆಯೇ ತಪ್ಪು ಏಕೆಂದರೆ ವೀರಶೈವ ಎನ್ನುವ ಪದ ಸಮಾಜವನ್ನು ಒಡಕು ಮಾಡುವುದು.ಜಾತಿ ಪದ್ಧತಿಯನ್ನು ಉಳಿಸಿಕೊಂಡು ಪೋಷಿಸುವುದು .ಅದರ ಆಚಾರ ವಿಚಾರಗಳೇ ಬೇರೆ ಲಿಂಗಾಯಿತ ಧರ್ಮದ ಆಚಾರ ವಿಚಾರಗಳೇ ಬೇರೆ .ಅಪ್ಪ ಬಸವಣ್ಣನವರ ಚಿಂತನೆಗಳು, ಸಮಾಜ ಮುಖಿಯಾಗಿ ಸಮಾಜದಲ್ಲಿರುವ ಪ್ರತಿಯೊಬ್ಬರನ್ನು ಎತ್ತಿಕೊಳ್ಳುವ ನಿಟ್ಟಿನಲ್ಲಿ ತುಂಬಾ ಕಳಕಳಿಯಿಂದ ಜ್ಯೋತಿ ಮುಟ್ಟಿ ಜ್ಯೋತಿಯಾಗುವ ಧರ್ಮವನ್ನು ಸಾರಿದ ಅಪ್ಪ ಬಸವಣ್ಣನವರ ಉದ್ದೇಶ ವೀರಶೈವದಲ್ಲಿ ಇಲ್ಲ ಕಾರಣ ಯಾವತ್ತೂ ವೀರಶೈವದಲ್ಲಿ ಲಿಂಗಾಯತ ಲಿಂಗಾಯತದಲ್ಲಿ ವೀರಶೈವ ಇರಲು ಸಾಧ್ಯವಿಲ್ಲ.ಅರ್ಥಮಾಡಿಕೊಂಡವರು ನೇರವಾಗಿ ನಾನು ಲಿಂಗಾಯತ ಧರ್ಮೀಯ ಎಂದು ಎದೆಯ ಮೇಲೆ ಇಷ್ಟ ಲಿಂಗವನ್ನು ಕಟ್ಟಿಕೊಂಡು ಒಪ್ಪಿಕೊಂಡು ಇರಬೇಕು.ಯಾವ ಕಾರಣಕ್ಕೂ ಲಿಂಗಾಯತ ಧರ್ಮಕ್ಕೆ ವೀರಶೈವವನ್ನು ತಗಲು ಹಾಕಬೇಡಿ
ಶರಣು ಶರಣಾರ್ಥಿ🙏🙏🙏