ಮೊಳಕಾಲ್ಮುರು
ವೀರಶೈವ-ಲಿಂಗಾಯತರ ಸಮುದಾಯದ ಜನಸಂಖ್ಯೆ ಅರಿಯಲು ಖಾಸಗಿ ಜಾತಿ ಜನಗಣತಿ ಮಾಡುವುದಾಗಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವೀರಶೈವ ಮಹಾಸಭಾದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಘಟಕದ ಸೇವಾದೀಕ್ಷಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡುತ್ತಾ ರಾಜ್ಯದಲ್ಲಿನ ವೀರಶೈವ ಲಿಂಗಾಯತರ ಜನಸಂಖ್ಯೆಯ ಸತ್ಯಾಂಶ ತಿಳಿಯಲು ಈ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದರ ಬಗ್ಗೆ ಸಮುದಾಯದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಮತ್ತು ಶಂಕರ ಬಿದರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಮಹಾಸಭಾದ ಉಪಾಧ್ಯಕ್ಷರೂ ಆಗಿರುವ ಖಂಡ್ರೆ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ವೀರಶೈವ ಮಹಾಸಭಾದಿಂದ ರಾಜ್ಯದ ಯಾವುದಾದರೂ ಒಂದು ಜಿಲ್ಲೆಯಲ್ಲಿ ‘ಸಾಮಾಜಿಕ ಸಮೀಕ್ಷೆ’ ನಡೆಸಲಾಗುವುದು. ಅದನ್ನು ರಾಜ್ಯ ಸರ್ಕಾರ ನಡೆಸಿರುವ ಸಾಮಾಜಿಕ ಸಮೀಕ್ಷೆಯೊಂದಿಗೆ ಹೋಲಿಕೆ ಮಾಡಿ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿಯಲಾಗುವುದು’ ಎಂದು ಹೇಳಿದರು.
“ಸರಕಾರ ನಡೆಸಿರುವ ಜನಗಣತಿ ವರದಿ ಮಂಡನೆಗೆ ನಮ್ಮ ವಿರೋಧವಿಲ್ಲ. ಆದರೆ ಜನಸಂಖ್ಯೆ ಕುರಿತಂತೆ ಕೆಲವೊಂದು ಅನುಮಾನಗಳಿವೆ. ಅವುಗಳ ನಿವಾರಣೆಗಾಗಿ ಖಾಸಗಿಯಾಗಿ ಸಮೀಕ್ಷೆ ನಡೆಸಿ ತಾಳೆ ಮಾಡಲಾಗುವುದು’ ಎಂದು ಹೇಳಿದರು.
Janaganati madi but upyoga agbeku yellarige Naya sigbeku