ಕುರುಕುಂದಿ
ಲಿಂಗೈಕ್ಯ ಶರಣ ವೀರಭದ್ರಪ್ಪ ಕುರಕುಂದಿ ಅವರ ಸ್ವಗ್ರಾಮದಲ್ಲಿ ನಡೆದ ಅಂತಿಮ ಯಾತ್ರೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡು ವಚನ ಹಾಡುತ್ತ, ವಚನ ಹೇಳುತ್ತ ಭಾಗವಹಿಸಿದರು.
ಲಿಂಗಾಯತ ಧರ್ಮಾಚರಣೆಯಂತೆ ಅಂತಿಮ ವಿಧಿವಿಧಾನಗಳು ನಡೆದವು. ವಿಭೂತಿಯಲ್ಲಿ ಲೀನರಾದ ಶರಣ ಕುರಕುಂದಿ ವೀರಭದ್ರಪ್ಪನವರು.
ಇಳಕಲ್ಲ ಗುರುಮಹಾಂತ ಮಹಾಸ್ವಾಮಿಗಳು, ಮನಗೂಳಿಯ ವಿರತೀಶಾನಂದ ಸ್ವಾಮಿ, ಬಸವಪ್ರಭು ಸ್ವಾಮಿ ದಾವಣಗೆರೆ, ಶಿರೂರು ಮಹಾಂತ ಸ್ವಾಮಿ ಸೇರಿದಂತೆ ಹಲವಾರು ಪೂಜ್ಯರು ಶರಣರ ಅಂತಿಮ ಸಂಸ್ಕಾರ ಕ್ರಿಯೆಯಲ್ಲಿ ಭಾಗವಹಿಸಿದರು.
ದಿನಾಂಕ 09ರಂದು ಕುರಕುಂದಿ ಗ್ರಾಮದಲ್ಲಿ ಲಿಂಗೈಕ್ಯ ವೀರಭದ್ರಪ್ಪ ಕುರಕುಂದಿ ಶರಣರ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವಚನಮೂರ್ತಿ ಅಶೋಕ ಬರಗುಂಡಿ ಶರಣರು ಹೇಳಿದರು.
