ವೈರಲ್ ಆಗುತ್ತಿರುವ ಎನ್ ಜಿ. ಮಹಾದೇವಪ್ಪ ಅವರ ‘ಲಿಂಗಾಯತರು ಹಿಂದೂಗಳಲ್ಲ’ ಪುಸ್ತಕ

ಬಸವ ಮೀಡಿಯಾ
ಬಸವ ಮೀಡಿಯಾ

ವಚನ ದರ್ಶನ ವಿವಾದದ ಹಿನ್ನಲೆಯಲ್ಲೇ ಎನ್ ಜಿ. ಮಹಾದೇವಪ್ಪ ಅವರ “ಲಿಂಗಾಯತರು ಹಿಂದೂಗಳಲ್ಲ” ಪುಸ್ತಕ ಗಮನ ಸೆಳೆಯುತ್ತಿದೆ. ಇದರ ಮುಖಪುಟ ಮತ್ತು ಅದನ್ನು ಪರಿಚಯಿಸುವ ಒಂದು ಸಣ್ಣ ಬರಹ ಕೂಡ ವೈರಲ್ ಆಗುತ್ತಿದೆ:

ಇಷ್ಟು ದಿನ ತೆರೆಮರೆಯಲ್ಲಿ ಲಿಂಗಾಯತ ಧರ್ಮಕ್ಕ ಅಡೆಗೋಡೆಯಾಗಿದ್ದ ಸಂಘ ಪರಿವಾರ ಈ ದಿನಗಳಲ್ಲಿ ನೇರವಾಗಿ ಕಣಕ್ಕಿಳಿದು ಲಿಂಗಾಯತ ಧರ್ಮವನ್ನು ಇಡೀಯಾಗಿ ಅಪೋಷನ್ ತಗೆದುಕೊಳ್ಳಲು ಏನು ಮಾಡಬೇಕೋ ಅದನ್ನೆಲ್ಲ ಮಾಡತೊಡಗಿದೆ.

ಅದಕ್ಕಾಗಿ ಕಳೆದ ಇಪ್ಪತ್ತು ವರ್ಷಗಳಿಂದ ತಯಾರಿ ಮಾಡಿಕೊಂಡಿದೆ. ಅದಕ್ಕೆ ಬೇಕಾದ ಸಾಮಾಗ್ರಿ ಸಿದ್ಧಪಡಿಸಿಕೊಂಡಿದೆ ಲಿಂಗಾಯತ ಸ್ವಾಮಿಗಳನ್ನೊಳಗೊಂಡು ಯುವಕರಲ್ಲಿ ತನ್ನ ಐಡಿಯಾಲಾಜಿ ವ್ಯವಸ್ಥಿತವಾಗಿ ತುಂಬಿದೆ. ಹುಸಿತ್ವ, ಮತ್ತು ನೈತಿಕವಲ್ಲದ ದಾರಿಯಲ್ಲಿ ಅವರು ನಡೆಯುವಂತೆ ಮಾಡಿದೆ. ತನ್ನ ಉದ್ದೇಶ ಸಾಕಾರ ಮಾಡಲು ಅದು ಏನನ್ನಾದರೂ ಮಾಡಲು ಸಿದ್ಧ. ಅದು ನಮ್ಮ ಕಣ್ಣೆದುರು ನಡೆಯುತ್ತಿದೆ.. ಬಸವಣ್ಣನ ಆಶಯಗಳನ್ನು ತಿರುಚುವ ಕಾರ್ಯಗಳನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದೆ. ಅದಕ್ಕೆಲ್ಲ ಸುಳ್ಳೇ ಮೂಲ.

ಶರಣ ತತ್ವಕ್ಕೆ ಮಸಿ ಬಳೆಯಲು ಈಗ ಕರ್ನಾಟಕದಾದ್ಯಂತ ಓಡಾಡುತ್ತಿದೆ. ಅದರ ಮೂರ್ತರೂಪವೇ ವಚನ ದರ್ಶನ ಅಭಿಯಾನ. ಲಿಂಗಾಯತರನ್ನು ಮುಂದು ಮಾಡಿಯೇ ಲಿಂಗಾಯತರನ್ನು, ಲಿಂಗಾಯತವನ್ನು ಮುಳುಗಿಸುವ ಕಾರ್ಯವನ್ನು ಅತ್ಯಂತ ಭರದಿಂದ ಮಾಡತೊಡಗಿದೆ. ಬಿಜೆಪಿಯ ರಾಜಕಾರಣ ಅದರ ಜತೆಗೆ ನಿಂತಿದೆ. ವಚನ ದರ್ಶನಕ್ಕೆ ಅಗತ್ಯ ಇರುವ ಎಲ್ಲ ಬೆಂಬಲ ಈ ರಾಜಕಾರಣದ ಮೂಲಗಳಿಂದ ಸಿಗತೊಡಗಿದೆ. ಸಂಘ ಪರಿವಾರದವರು ಇದರಲ್ಲಿ ತೊಡಗಿಸಿಕೊಂಡು ಹಿಂದೂ ಭ್ರಮೆಯಲ್ಲಿ ಲಿಂಗಾಯತವನ್ನು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡತೊಡಗಿದೆ.

ಇಂಥ ಸಂದರ್ಭದಲ್ದಿ ಜನರಿಗೆ ನಿಜದ ಅರಿವು ಮೂಡಿಸುವ ಆಗಬೇಕು. ಆ ಕೆಲಸವನ್ನು ಈಗಾಗಲೇ ಹಲವು ವಿದ್ವಾಂಸರು ಮಾಡಿದ್ದಾರೆ. ಅವರಲ್ಲಿ ಪ್ರೊ. ಎನ್. ಜಿ. ಮಹಾದೇವಪ್ಪ ಮತ್ತು ಡಾ. ಎಂ. ಎಂ. ಕಲ್ಬುರ್ಗಿ ಮುಖ್ಯರು.

ಈ ದಿಸೆಯಲ್ಲಿ ಎನ್ ಜಿ. ಮಹಾದೇವಪ್ಪ ಅವರು ಲಿಂಗಾಯತ ಮತ್ತು ಹಿಂದೂ ಹೇಗೆ ಒಂದೇ ಅಲ್ಲ.. ಅವುಗಳ ನಡುವಿನ ಭಿನ್ನತೆಗಳೇನು ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಸಂಶೋಧನೆ ಮಾಡುತ್ತ ಬರೆದ ಪುಸ್ತಕವೇ “ಲಿಂಗಾಯತರು ಹಿಂದೂಗಳಲ್ಲ” . ಲಿಂಗಾಯತರಿಗೆ ಅವರದೇ ಆದ ಸ್ವತಂತ್ರ ಧರ್ಮವಿದೆ ಎಂಬುದನ್ನು ಅನೇಕ ಮೂಲಾಧಾರ ಇಟ್ಟುಕೊಂಡು ಹೇಳಿದ್ದಾರೆ. ಈ ಹೊತ್ತಿನಲ್ಲಿ ಇದು ಚರ್ಚೆಯಾಗಬೇಕಾದ ಸಂಗತಿ. ಜನಗಳಿಗೆ ಮುಟ್ಟಬೇಕಾದ ವಿಚಾರ.

ಇಂದು ನಡೆಯುತ್ತಿರುವ ಈ ಸಂಘರ್ಷ ಲಿಂಗಾಯತದ ನಾಳಿನ ಅಸ್ತಿತ್ವವನ್ನು ಸೂಚಿಸುತ್ತದೆ. ಲಿಂಗಾಯತರು ಹಿಂದೂಗಳಲ್ಲ ಎಂಬ ಅಭಿಯಾನ ಹಳ್ಳಿ ಹಳ್ಳಿಗಳಿಂದ , ಕರ್ನಾಟಕದ ಎಲ್ಲ ಮೂಲೆಗಳಿಂದ ಎದ್ದು ಬರಬೇಕಿದೆ.

ಈ ನಿಟ್ಟಿನಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕವನ್ನು ಓದಿ

ಲಿಂಗಾಯತರು ಹಿಂದೂಗಳಲ್ಲ
ಡಾ.ಎನ್ ಜಿ. ಮಹಾದೇವಪ್ಪ
ರೂ 80 +25 (ಅಂಚೆವೆಚ್ಚ)=105

ಐದು ಪ್ರತಿಗಳಿಗೆ
5×80=400-120=280+40=320 ರೂ

ಹತ್ತು ಪ್ರತಿಗಳಿಗೆ
10×80=800-280=520+60=560 ರೂ

ಇಪ್ಪತ್ತೈದು ಪ್ರತಿಗಳಿಗೆ
25×80=2000-800=1200+100=1300 ರೂ

ಐವತ್ತು ಪ್ರತಿಗಳಿಗೆ
50×80=4000-1600=2400+160=2560 ರೂ

ನೂರು ಪ್ರತಿಗಳಿಗೆ
100×80=8000-3200=4800+200=5000 ರೂ

ಪುಸ್ತಕಕ್ಕಾಗಿ
ಲಡಾಯಿ ಪ್ರಕಾಶನ

Punjab national bank Gadag
A/c No 0177005500000278
Ladai prakashana
IFSC : PUNB0017700

Google pay and phone pay number : 9480286844

ಲಡಾಯಿಪ್ರಕಾಶನ ಪುಸ್ತಕ ಮನೆ
ಶ್ರೀನಗರ 1ನೇ ಮೇನ್
ಗಣಪತಿ ಗುಡಿ ರಸ್ತೆ
ಅಮರೇಶ, 1983,
ಧಾರವಾಡ-580003
9480286844

Share This Article
1 Comment
  • ಅವರ ಪುಸ್ತಕವನ್ನು ಅವರೆ ಓದಲಿ ನಾವು ಲಿಂಗಾಯತ ಹಿಂದೂಗಳು.

Leave a Reply

Your email address will not be published. Required fields are marked *