ಕೊಪ್ಪಳ:
ಜಿಲ್ಲೆಯ ಬಸವತತ್ವ ಪ್ರಸಾರದ ಹೆಮ್ಮೆಯ ಸಂಘಟನೆಯಾದ ವಿಶ್ವಗುರು ಬಸವೇಶ್ವರ ಟ್ರಸ್ಟಿನ ೨೦೨೫-೨೦೨೮ನೇ ಸಾಲಿನ ಪದಾಧಿಕಾರಿಗಳನ್ನು ನಗರದ ಗುರುಬಸವ ಮಹಾಮನೆಯಲ್ಲಿ ಇತ್ತೀಚೆಗೆ ನಡೆದ ಟ್ರಸ್ಟಿನ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವೀರಭದ್ರಪ್ಪ ನಂದ್ಯಾಳ, ಪ್ರಧಾನ ಕಾರ್ಯದರ್ಶಿಯಾಗಿ ಬಾಪುಗೌಡ ಪಾಟೀಲ, ಖಜಾಂಚಿಯಾಗಿ ಗವೀಶ ಸಸಿಮಠ ಆಯ್ಕೆಯಾದರು.
ಗೌರವ ಅಧ್ಯಕ್ಷರಾಗಿ ಎಂ. ಬಸವರಾಜಪ್ಪ, ಪಂಪಾಪತಿ ಹೊನ್ನಳ್ಳಿ, ಉಪಾಧ್ಯಕ್ಷರಾಗಿ ಸಂಗಪ್ಪ ವಣಗೇರಿ, ಸರಸ್ವತಿ ಅಶೋಕ ರಾಂಪೂರ, ಸಂಘಟನಾ ಕಾರ್ಯದರ್ಶಿಗಳಾಗಿ ದೇವೀಶ ಗಬ್ಬೂರು, ವಿಜಯಲಕ್ಷ್ಮಿ, ನಿರ್ಮಲಾ ಪೋಲೀಸಪಾಟೀಲ, ಕಾರ್ಯದರ್ಶಿಗಳಾಗಿ ಮಂಜುನಾಥ ಶೇಡದ್, ರಮೇಶ ಆವಜಿ, ಸಂಗಮೇಶ ಕಡಗದ, ಶೋಭಕ್ಕ ಜಗಳೂರು ಆಯ್ಕೆಯಾದರು.

ಸಲಹಾ ಸಮಿತಿ ಸದಸ್ಯರಾಗಿ ಡಾ. ಸಂಗಮೇಶ ಕಲಹಾಳ, ಮುತ್ತಣ್ಣ ಬೀರಲದಿನ್ನಿ, ಗದಗೆಪ್ಪ ಅಮಾತಿ, ಗಾಳೆಪ್ಪ ಕಡೆಮನಿ, ಗುಡದಪ್ಪ ಹಡಪದ, ನೀಲಕಂಠಪ್ಪ ಎಂ. ಎಸ್, ಬಸವರಾಜ ರಾಂಪೂರ, ಗವಿಸಿದ್ದಪ್ಪ ಪಲ್ಲೇದ, ಹನುಮೇಶ ಕಲ್ಮಂಗಿ, ಶಿವಕುಮಾರ ಕುಕನೂರ, ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ಮಂಜುಳಾ ಹುರಕಡ್ಲಿ, ಮಂಜುಳಾ ಪಾಟೀಲ, ಆಯ್ಕೆಯಾದರು ಎಂದು ಟ್ರಸ್ಟಿನ ಸಂಚಾಲಕರಾದ ರಾಜೇಶ ಸಸಿಮಠ ತಿಳಿಸಿದ್ದಾರೆ.
