ಬೆಂಗಳೂರು
ಯಶವಂತಪುರ ರೈಲ್ವೆ ನಿಲ್ದಾಣದ ಹೆಸರನ್ನು “ವಿಶ್ವಗುರು ಬಸವಣ್ಣ ಯಶವಂತಪುರ ರೈಲ್ವೆ ನಿಲ್ದಾಣ” ಎಂದು ಮರುನಾಮಕರಣ ಮಾಡಬೇಕೆಂದು ಶ್ರೀ ಬಸವೇಶ್ವರ ಪ್ರಚಾರ ಸಮಿತಿ
ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆ ಪದಾಧಿಕಾರಿಗಳು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ. ಸೋಮಣ್ಣ ಅವರಲ್ಲಿ ಮನವಿ ಸಲ್ಲಿಸಿದರು.
15 ಅಕ್ಟೋಬರ್ 2025ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ಜಂಗಮ ಅಭಿನಂದನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸಚಿವರಿಗೆ ಈ ಮನವಿಪತ್ರ ಸಲ್ಲಿಸಲಾಯಿತು.
ತುಮಕೂರು ಸಿದ್ದಗಂಗಾ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ ಅವರು ಉಪಸ್ಥಿತರಿದ್ದರು.