ರಾಯಚೂರು
ವಿಶ್ವಗುರು ಬಸವಣ್ಣನವರ ಕುರಿತು ವಿಜಯಪುರ ಬಿಜೆಪಿ ಶಾಸಕ ಯತ್ನಾಳ್ ಅವರು ಆಡಿದ ಹಗುರ ಹಾಗೂ ಅವಹೇಳನಕಾರಿ ಮಾತುಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಅವರು ಕೂಡಲೇ ಬಸವ ಅನುಯಾಯಿಗಳ, ಬಸವಭಕ್ತರಲ್ಲಿ ಬಹಿರಂಗ ಕ್ಷಮೆ ಕೇಳಬೇಕೆಂದು ಜಾಗೀರ ಜಾಡಲದಿನ್ನಿಯ ಅಕ್ಕ ನೀಲಾಂಬಿಕ ಬಸವ ಯೋಗಾಶ್ರಮದ ಅಧ್ಯಕ್ಷರಾದ ವೀರಭದ್ರ ಸ್ವಾಮೀಜಿ ಹಾಗೂ ಶರಣು ವಿಶ್ವ ವಚನ ಫೌಂಡೇಶನ್ ಜಿಲ್ಲಾ ಮುಖಂಡ ಬೆಟ್ಟಪ್ಪ ಕಸ್ತೂರಿ ಅವರು ಶುಕ್ರವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದರು.
ನಮಗೆಲ್ಲ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲವನ್ನು ಕೊಟ್ಟಂತ ಗುರು ಬಸವಣ್ಣನವರ ಮೇಲೆ ನೀ ಮಾತಾಡ್ತೀಯ ಅಂದ್ರ ನಿನಗ ಒಳ್ಳೆಯದಾಗುವುದಿಲ್ಲ, ನೀನು ಕ್ಷ್ಮಮೆ ಕೇಳಿದ್ರ ನಿನ್ನನ್ನು ಒಪ್ಪಿಕೊಳ್ಳುತ್ತೇವೆ. ಏಕೆಂದರೆ ಬಸವಣ್ಣವರೆ ಬೈದವರನ್ನು ಬಂಧುಗಳೆಂದು ತಿಳಿಯಲು ನಮಗೆ ಕಲಿಸಿಕೊಟ್ಟಿದ್ದಾರೆ. ಹೀಗಾಗಿ ನೀನು ಕೂಡಲೇ ಕ್ಷಮೆಯಾಚಿಸಬೇಕು, ಇಲ್ಲಾಂದ್ರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಯತ್ನಾಳ ಅವರನ್ನು ಎಚ್ಚರಿಸಿದರು.
ಶರಣರಾದ ಅಮರಣ್ಣಗೌಡ ಶಾಖಾಪುರ, ಅಮರೇಶ ಗವಿಗಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.