ಕೊಪ್ಪಳ
ಇಷ್ಟು ದಿನ ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಬಿಜೆಪಿ ಕಟ್ಟುತೇನೆ ಎಂದು ಹೇಳುತ್ತಿದ್ದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ಪಕ್ಷದ ಹೈ ಕಮಾಂಡ್ ವಿರುದ್ದ ತಿರುಗಿ ಬಿದ್ದಿದ್ದಾರೆ.
ಹೈಕಮಾಂಡ್ ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪಗೆ ಲೀಸ್ ಕೊಟ್ಟಿದೆಯಾ? ಅಥವಾ ಆ ಕುಟುಂಬಕ್ಕೆ ಮಾರಿಕೊಂಡಿದೆಯಾ ಎನ್ನುವ ಪ್ರಶ್ನೆ ರಾಜ್ಯದ ಜನರಲ್ಲಿದೆ’ ಎಂದು ಹೇಳಿದರು.
‘ಲಿಂಗಾಯತರು ಹಾಗೂ ಬಿಜೆಪಿ ಹೆಸರಿನಲ್ಲಿ ಹತ್ತಾರು ಸಾವಿರ ಕೋಟಿ ರೂಪಾಯಿ ಲೂಟಿ ಮಾಡಿರುವ ಅಪ್ಪ ಮಗನ ಬಿಜೆಪಿ ಹೈಕಮಾಂಡ್ ನನ್ನನ್ನು ಉಚ್ಛಾಟಿಸುವ ಮೂಲಕ ಬೆಂಬಲವಾಗಿ ನಿಂತಿದೆ,’ ಎಂದು ಆಪಾದಿಸಿದರು.
ಸೋಮವಾರ ಇಲ್ಲಿನ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.
‘ನಿಮ್ಮ ಜೊತೆಯಲ್ಲಿದ್ದ ರಮೇಶ ಜಾರಕಿಹೊಳಿ ಹಾಗೂ ಕುಮಾರ ಬಂಗಾರಪ್ಪ ಈಗಲೂ ಇದ್ದಾರೆಯೇ’ ಎಂದು ಕೇಳಿದ ಪ್ರಶ್ನೆಗೆ ‘ಯಾವಾಗಲೂ ನನ್ನ ಜೊತೆಗೆ ಇರುತ್ತಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಉತ್ತರ ಕೊಟ್ಟಿದ್ದೇನೆ.’
ಇಂಥ ಪ್ರಶ್ನೆ ಕೇಳಲು ವಿಜಯೇಂದ್ರ ನಿಮಗೆ ಹೇಳಿದ್ದನಾ? ವಿಜಯೇಂದ್ರ ವ್ಯಾಟ್ಸ್ ಆ್ಯಪ್‌ನಲ್ಲಿ ಕಳಿಸುವ ಪ್ರಶ್ನೆಯನ್ನು ಕೇಳುತ್ತೀರಾ?’ ಎಂದರು. ನೀವು ಜೋರು ಮಾತನಾಡುವುದಾದರೆ ‘ಗೇಟ್ ಔಟ್’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ ಮಾತನ್ನು ಪತ್ರಕರ್ತರು ಪ್ರತಿಭಟಿಸಿದಾಗ, ಶಾಸಕರು ಸುದ್ದಿಘೋಷ್ಠಿ ಅರ್ಧಕ್ಕೆ ನಿಲ್ಲಿಸಿ ನಡೆದರು.